- – ಜನರಿಗೆ ಮತ್ತೊಂದು ಆರ್ಥಿಕ ಬೋಜು?
ಬೆಂಗಳೂರು, ಜುಲೈ 14: ಶೀಘ್ರದಲ್ಲೇ ವಿದ್ಯುತ್ ದರ ಮತ್ತೊಮ್ಮೆ ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯದ ಎಸ್ಕಾಂಗಳು (ವಿದ್ಯುತ್ ಸರಬರಾಜು ಸಂಸ್ಥೆಗಳು) ತಮ್ಮ ₹4,620 ಕೋಟಿ ರೂ. ಆದಾಯದ ಕೊರತೆ ಪೂರೈಸಲು ಜನರ ಮೆತ್ತಿನ ಮೇಲೆ ಹೆಚ್ಚಿನ ದಾಯವಿಟ್ಟು, ವಿದ್ಯುತ್ ದರ ಹೆಚ್ಚಳದ ಪ್ರಸ್ತಾವನೆ ನೀಡಿವೆ.
ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ದರ ಹೆಚ್ಚಿಸುವ ಮೂಲಕ ಹಣಪೂರೈಸಲು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಅನುಮತಿಯೊಂದಿಗೆ ಎಸ್ಕಾಂಗಳು ಕ್ರಮ ಕೈಗೊಳ್ಳಲು ಮುಂದಾಗಿವೆ. ಈ ಕುರಿತಂತೆ ಮಾರ್ಚ್ 23, 2025 ರಂದು ಮೊದಲ ಬಾರಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಜುಲೈ 8 ರಂದು ನಡೆದ ಚರ್ಚೆಯ ವೇಳೆ, ಕೆಇಆರ್ಸಿ ಎಲ್ಲಾ ಪಾಲುದಾರರಿಂದ 30 ದಿನಗಳೊಳಗೆ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಿ, ಅಫಿಡವಿಟ್ ಮೂಲಕ ವಿವರಗಳನ್ನು ನೀಡಲು ಎಸ್ಕಾಂಗಳಿಗೆ ಸೂಚನೆ ನೀಡಿದೆ.
ಜನತೆ ಈಗಾಗಲೇ ಹಲವು ಬೆಲೆ ಏರಿಕೆಗಳಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ, ಮತ್ತೊಂದು ವಿದ್ಯುತ್ ದರ ಏರಿಕೆ ಸಮಾಜದ ಮೇಲೆ ತೀವ್ರ ಹೊರೆ ಹಾಕಲಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.ಇದನ್ನು ಓದಿ – ವಿಚ್ಛೇದನ ಘೋಷಿಸಿದ ಬ್ಯಾಡ್ಮಿಂಟನ್ ಜೋಡಿ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್
ಸರ್ಕಾರ ಮತ್ತು ಕೆಇಆರ್ಸಿ ಈ ಸಂಬಂಧ ಸೂಕ್ತ ಸಮಾಲೋಚನೆ ನಡೆಸಿ, ಜನಪರ ನಿರ್ಧಾರ ಕೈಗೊಳ್ಳಬೇಕೆಂಬದು ಸಾರ್ವಜನಿಕರ ಆಶಯ.