ಬೆಂಗಳೂರು, ಜುಲೈ 15: ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣ ಹಾಗೂ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ, ಕರ್ನಾಟಕ ಸರ್ಕಾರ 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಹೊಸ ಆದೇಶ ಹೊರಡಿಸಿದೆ.
ಇತ್ತೀಚೆಗೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂಬ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ, ಸರ್ಕಾರ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಕೈಹಾಕಿದ್ದು, ಈ ಕ್ರಮಕ್ಕೆ ರಾಜಕೀಯ ವಲಯಗಳಲ್ಲಿ ವಿಶೇಷ ಮಹತ್ವ ಸಿಕ್ಕಿದೆ.
ಬೆಂಗಳೂರು ನಗರದಲ್ಲಿ ಹೊಸದಾಗಿ ರಚಿಸಲಾದ ಮೂರು ಪೊಲೀಸ್ ವಿಭಾಗಗಳಿಗೆ ನೂತನ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದರೊಂದಿಗೆ ಕರಾವಳಿ ಪ್ರದೇಶ ಮತ್ತು ಬೆಂಗಳೂರು ಸೇರಿದಂತೆ ಕೆಲವು ಮಹತ್ವದ ಜಿಲ್ಲೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವರ್ಗಾವಣೆಯೂ ನಡೆದಿದೆ.ಇದನ್ನು ಓದಿ –ಹುಲಿಗಳ ಸಾವಿಗೆ ಕಾರಣವಾಯಿತು ಕರ್ತವ್ಯಲೋಪ: DCF ಅಮಾನತು
ಹಲವು ಮುಖ್ಯಸ್ಥರನ್ನು ಸ್ಥಳಾಂತರಿಸಿ, ಸಾರ್ವಜನಿಕ ಭದ್ರತೆ ಹಾಗೂ ಅಪರಾಧ ನಿಯಂತ್ರಣಕ್ಕೆ ಹೊಸ ಸ್ಪಂದನೆ ನೀಡಲು ಸರ್ಕಾರ ಪೂರೈಕೆ ಮಾಡಿದೆ.