ಬೆಂಗಳೂರು: ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಉಪನಿರೀಕ್ಷಕಿ (PSI) ಸಾವಿತ್ರಿ ಬಾಯಿ, ಲಂಚದ ಹಣವಾಗಿ ₹1.25 ಲಕ್ಷ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಕೇಸ್ ನಂಬರ್ 144/25 ಸಂಬಂಧಿಸಿದಂತೆ ‘ಬಿ ರಿಪೋರ್ಟ್’ ಸಲ್ಲಿಸಲು ಸಾವಿತ್ರಿ ಬಾಯಿ ಲಂಚದ ಬೇಡಿಕೆ ಇಟ್ಟಿದ್ದಾಗಿ ಆರೋಪಿಸಲಾಗಿದೆ.
ಈ ಬಗ್ಗೆ ಮೊಹಮ್ಮದ್ ಯೂನಸ್ ಎಂಬುವವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪಿಎಸ್‌ಐ ಸಾವಿತ್ರಿ ಬಾಯಿಯನ್ನು ರೂಚಿಯಾದ ರೀತಿಯಲ್ಲಿ ಟ್ರ್ಯಾಪ್ ಮಾಡಿದ್ದಾರೆ.ಇದನ್ನು ಓದಿ –ದೆಹಲಿ-ಹರಿಯಾಣದಲ್ಲಿ ಭೂಕಂಪ: 3.2 ತೀವ್ರತೆಯ ಭೂಕಂಪ ನೊಂದಣಿ
ಘಟನೆ ವೇಳೆ ಸಾವಿತ್ರಿ ಬಾಯಿ ₹1.25 ಲಕ್ಷ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಮುಂದಿನ ತನಿಖೆ ಮತ್ತು ವಿಚಾರಣೆ ನಡೆಯುತ್ತಿದೆ.