ಬೆಂಗಳೂರು: ಕರ್ನಾಟಕದ ಹಲವೆಡೆ ಮುಂಗಾರು ಚುರುಕಾಗಿದ್ದು, ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗಲಿದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 29ರವರೆಗೆ ರಾಜ್ಯದ ಕರಾವಳಿ, ಮಲೆನಾಡು ಮತ್ತು ಕೆಲವು ಒಳನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ.
ಆರೆಂಜ್ ಅಲರ್ಟ್ ಘೋಷಿಸಲಾದ ಜಿಲ್ಲೆಗಳು:
- ಉತ್ತರ ಕನ್ನಡ
- ದಕ್ಷಿಣ ಕನ್ನಡ
- ಉಡುಪಿ
ಯೆಲ್ಲೋ ಅಲರ್ಟ್ ನೀಡಲಾಗಿರುವ ಜಿಲ್ಲೆಗಳು:
- ಬಾಗಲಕೋಟೆ
- ಬೀದರ್
- ಧಾರವಾಡ
- ಗದಗ
- ಹಾವೇರಿ
- ಕಲಬುರಗಿ
- ಕೊಪ್ಪಳ
- ರಾಯಚೂರು
- ವಿಜಯಪುರ
- ಯಾದಗಿರಿ
- ಚಿಕ್ಕಮಗಳೂರು
- ಹಾಸನ
- ಕೊಡಗು
- ಮೈಸೂರು
- ಶಿವಮೊಗ್ಗ
ಸಾಧಾರಣ ಮಳೆಯಾಗುವ ಜಿಲ್ಲೆಗಳು:
- ವಿಜಯನಗರ
- ರಾಮನಗರ
- ಮಂಡ್ಯ
- ಕೋಲಾರ
- ದಾವಣಗೆರೆ
- ಚಿತ್ರದುರ್ಗ
- ಚಿಕ್ಕಬಳ್ಳಾಪುರ
- ಚಾಮರಾಜನಗರ
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
ಈ ಪ್ರದೇಶಗಳಲ್ಲಿ ಈಗಾಗಲೇ ಮಳೆ:
ಸೇಡಂ, ಶಾಹಪುರ, ಕಾರವಾರ, ಅಂಕೋಲಾ, ಉಡುಪಿ, ಜಗಳೂರು, ಬೀದರ್, ಔರಾದ್, ಮುದ್ದೇಬಿಹಾಳ, ಚಿಂಚೋಳಿ, ಬಂಟ್ವಾಳ, ಯಲಬುರ್ಗಾ, ಶಕ್ತಿನಗರ, ಪುತ್ತೂರು, ಮಂಕಿ, ಮಾಣಿ, ಮಂಗಳೂರು, ಕದ್ರಾ, ಹುನಗುಂದ, ಶಿರಗುಪ್ಪಾ, ಸಿದ್ದಾಪುರ, ಕುಂದಾಪುರ, ಕಾರ್ಕಳ, ಜೇವರ್ಗಿ, ಮುದಗಲ್, ಬೆಳ್ತಂಗಡಿ, ಬಾದಾಮಿ, ಆಲಮಟ್ಟಿ, ಆಗುಂಬೆ, ಸುಳ್ಯ, ಶೃಂಗೇರಿ, ಸಿಂಧನೂರು, ಶಿರಹಟ್ಟಿ, ಪೊನ್ನಂಪೇಟೆ, ನಾಪೋಕ್ಲು, ಮುಂಡಗೋಡು, ಮಂಠಾಳ, ಕುಷ್ಟಗಿ, ಕೂಡಲಸಂಗಮ, ಕೆಂಭಾವಿ, ಹೊನ್ನಾಳಿ, ಇಂಡಿ, ಇಳಕಲ್, ಧರ್ಮಸ್ಥಳ, ಭಾಲ್ಕಿ, ಬಂಡೀಪುರ.
ಬೆಂಗಳೂರಿನಲ್ಲಿ ಸ್ಥಿತಿ:
ಮಂಗಳವಾರ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಇಂದು ಕೂಡ ಮೋಡಮೂಡಿದ ವಾತಾವರಣದ ನಡುವೆ ಮಳೆಯಾಗುವ ಸಾಧ್ಯತೆ ಇದೆ.
ಇದನ್ನು ಓದಿ – ಯೋಜನಾ ಇಲಾಖೆ ಅಧಿಕಾರಿಯ ಮೇಲೆ ಲೋಕಾಯುಕ್ತ ದಾಳಿ
ರಾಜ್ಯದಾದ್ಯಂತ ಮುಂಗಾರು ಚುರುಕಾಗಿದ್ದು, ಜನತೆ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಪ್ರವಾಹ ಪ್ರಭಾವಿತ ಪ್ರದೇಶಗಳಲ್ಲಿ ವಾಸಿಸುವವರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಲಾಗಿದೆ.