- ಕೋಟ್ಯಂತರದ ಆಸ್ತಿ ದಾಖಲೆ ವಶ
ಬೆಂಗಳೂರು:ಸಚಿವ ಬೈರತಿ ಸುರೇಶ್ ಅವರ ಮಾಜಿ ವೈಯಕ್ತಿಕ ಕಾರ್ಯದರ್ಶಿ ಮಾರುತಿ ಬಗಲಿ ನಿವಾಸದ ಮೇಲೆ ಬುಧವಾರ ಮಧ್ಯಾಹ್ನ ಲೋಕಾಯುಕ್ತ ಅಧಿಕಾರಿಗಳು ಅಚಾನಕ್ ದಾಳಿ ನಡೆಸಿ, ಭಾರಿ ಪ್ರಮಾಣದ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯ ವೇಳೆ ಸುಮಾರು 8 ನಿವೇಶನಗಳು, 5 ಮನೆಗಳು ಹಾಗೂ 19 ಎಕರೆ ಜಮೀನಿನ ದಾಖಲೆ ಪತ್ರಗಳು ದೊರಕಿದ್ದು, ಇದಲ್ಲದೆ ಕೋಟ್ಯಂತರ ಮೌಲ್ಯದ ಆಸ್ತಿ ಮಾಹಿತಿ ಲಭ್ಯವಾಗಿದೆ.
ಮಾರುತಿ ಬಗಲಿ ಇತ್ತೀಚೆಗೆ, 3 ತಿಂಗಳ ಹಿಂದೆ, ಬೈರತಿ ಸುರೇಶ್ ಅವರ ಪಿಎಸ್ ಸ್ಥಾನದಿಂದ ರಾಜೀನಾಮೆ ನೀಡಿದ್ದರು. ಅವರು ಸುಮಾರು 2 ವರ್ಷಗಳ ಕಾಲ ಸಚಿವರ ವೈಯಕ್ತಿಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಈ ಮಧ್ಯೆ, ರಾಜ್ಯದ ಹಲವು ಭಾಗಗಳಲ್ಲಿ ಭ್ರಷ್ಟಾಚಾರದ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಹಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ, ಚಿನ್ನ, ಬೆಳ್ಳಿ ಆಭರಣಗಳು ಮತ್ತು ನಗದು ಹಣವನ್ನು ಕೂಡ ವಶಪಡಿಸಿಕೊಳ್ಳುತ್ತಿದ್ದಾರೆ.