ಬೆಂಗಳೂರು: ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸಿರುವ ಪ್ರಕರಣದಲ್ಲಿ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರು ತನಿಖೆಯನ್ನು ಗಂಭೀರವಾಗಿ ಮುಂದುವರೆಸಿದ್ದಾರೆ. ಈ ತನಿಖೆಯ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಒಟ್ಟು 48 ಕಿಡಿಗೇಡಿಗಳ ಐಪಿ ವಿಳಾಸಗಳನ್ನು ಪತ್ತೆಹಚ್ಚಿದ್ದಾರೆ.
ಈಗಾಗಲೇ 15 ಜನರನ್ನು ಗುರುತಿಸಲಾಗಿದ್ದು, ಅವರಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಹಾಗೂ ನಿಂದನಾತ್ಮಕ ಸಂದೇಶಗಳನ್ನು ಕಳುಹಿಸಿದ ಆರೋಪಿಗಳನ್ನು ಕಂಡುಹಿಡಿಯಲು ಸಿಸಿಬಿ ತೀವ್ರ ಪರಿಶ್ರಮವಹಿಸಿದೆ.
ತೀವ್ರವಾಗಿ ಕಮೆಂಟ್ ಮಾಡಿದವರಲ್ಲಿ ಚಿಕ್ಕಮಂಗಳೂರು, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಗಳವರು ಹೆಚ್ಚಿನವರು ಎನ್ನಲಾಗಿದೆ. ಕೆಲ ಆರೋಪಿಗಳಿಗೆ ಪೊಲೀಸರು ಕರೆಸಿ ಎಚ್ಚರಿಕೆ ನೀಡಿದ್ದಾರೆ. ಕೆಲವರು ತಮ್ಮ ಐಪಿ ವಿಳಾಸಗಳನ್ನು ಬ್ಲಾಕ್ ಮಾಡಿಕೊಂಡು ಮನೆ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇನ್ನು ಕೆಲವರು ತಪ್ಪು ಅರಿತ ನಂತರ ಕ್ಷಮೆ ಯಾಚಿಸಿದ್ದಾರೆ. ಅನೇಕರು ತಿಳಿವಳಿಕೆ ಇಲ್ಲದೆ ಮಾಡಿರುವ ಈ ಕೃತ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.ಇದನ್ನು ಓದಿ –ಧರ್ಮಸ್ಥಳ ಪ್ರಕರಣ: ಇಂದು 11ನೇ ಪಾಯಿಂಟ್‌ನಲ್ಲಿ ಉತ್ಖನನ ಆರಂಭಿಸಿದ ಎಸ್‌ಐಟಿ
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳಾ ಸೆಲೆಬ್ರಿಟಿಗಳ ವಿರುದ್ಧ ನಡೆಯುತ್ತಿರುವ ಇಂತಹ ಕಿರುಕುಳದ ನಡೆಗೆ ಗಂಭೀರ ಎಚ್ಚರಿಕೆಯಾಗಿ ಸಿಸಿಬಿ ಈ ಕ್ರಮ ಕೈಗೊಂಡಿದೆ.