– ಆರೋಪಿ ವಿರುದ್ಧ ಪ್ರಕರಣ
ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಪ್ರೇಮ್ ಅವರನ್ನು ಎಮ್ಮೆ ಕೊಡಿಸುವ ನೆಪದಲ್ಲಿ ₹4.5 ಲಕ್ಷ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿಯ ಪ್ರಕಾರ, ಹೈನುಗಾರಿಕೆ ಉದ್ದೇಶದಿಂದ ಎರಡು ಎಮ್ಮೆಗಳನ್ನು ಖರೀದಿಸಲು ಪ್ರೇಮ್ ಮುಂದಾಗಿದ್ದರು. ಈ ಸಂದರ್ಭದಲ್ಲಿ ಗುಜರಾತ್ ಮೂಲದ ವನರಾಜ್ ಬಾಯ್ ಎಂಬಾತನೊಂದಿಗೆ ಸಂಪರ್ಕಿಸಿ, ಮೊದಲು ಮುಂಗಡವಾಗಿ ₹25,000 ನೀಡಿದ್ದರು.
Contents
ವನರಾಜ್, ವಾಟ್ಸಪ್ ಮೂಲಕ ಎರಡು ಎಮ್ಮೆಗಳ ವಿಡಿಯೋ ಕಳುಹಿಸಿ ನಂಬಿಕೆ ಮೂಡಿಸಿದ್ದ. ನಂತರ, ಎಮ್ಮೆ ತರುವ ನೆಪದಲ್ಲಿ ಪ್ರೇಮ್ ಅವರಿಂದ ₹4.5 ಲಕ್ಷವನ್ನು ಆನ್‌ಲೈನ್ ಮೂಲಕ ಪಡೆದಿದ್ದಾನೆ. ಆದರೆ ಹಣ ಪಡೆದ ಬಳಿಕ, ಒಂದು ವಾರದಲ್ಲಿ ಎಮ್ಮೆ ಕೊಡುತ್ತೇನೆ ಎಂದು ಹೇಳಿ ಆರೋಪಿ ಪರಾರಿಯಾಗಿದ್ದಾನೆ.ಇದನ್ನು ಓದಿ –ಚಾಲನಾ ಪರವಾನಗಿ (DL) ಮತ್ತು ವಾಹನ RCಗೆ ‘ಆಧಾರ್ ಕಡ್ಡಾಯ’
ಈ ಹಿನ್ನೆಲೆಯಲ್ಲಿ, ನಿರ್ದೇಶಕ ಪ್ರೇಮ್ ಅವರ ಮ್ಯಾನೇಜರ್ ಚಂದ್ರು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ವಂಚನೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.