- ದಾಖಲೆಗಳ ಪರಿಶೀಲನೆ, ಅಧಿಕಾರಿಗಳಿಗೆ ತರಾಟೆ
ರಾಯಚೂರು: ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ರವರು ಅವ್ಯವಸ್ಥೆಗಳ ವಿರುದ್ಧ ಕ್ರಮ ಕೈಗೊಂಡಿದ್ದು ,ನಿನ್ನೆ ರಾತ್ರಿ ಅಂಬೇಡ್ಕರ್ ವಸತಿ ನಿಲಯಕ್ಕೆ ದಾಳಿ ನಡೆಸಿ, ಅಲ್ಲಿ ಕಂಡುಬಂದ ಅನೇಕ ಅಕ್ರಮಗಳ ಹಿನ್ನೆಲೆಯಲ್ಲಿ ವಾರ್ಡನ್‌ರನ್ನು ಅಮಾನತು ಮಾಡುವ ಸೂಚನೆ ನೀಡಿದ್ದರು.
ಇದಾದ ಬಳಿಕ ಇಂದು ಬೆಳಿಗ್ಗೆ ರಾಯಚೂರಿನ ಆರ್‌ಟಿಒ ಕಚೇರಿಗೆ ಏಕಾಏಕಿ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಾಹನಗಳ ಮಾಹಿತಿ ನೀಡುವಲ್ಲಿ ಆರ್‌ಟಿಒ ಅಧಿಕಾರಿಗಳು ತಡಮಾಡಿದ ಕಾರಣ ಉಪಲೋಕಾಯುಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ 29 ಸಾವಿರಕ್ಕೂ ಹೆಚ್ಚು ವಾಹನಗಳಿದ್ದು, ಅವುಗಳಲ್ಲಿ 236 ಶಾಲಾ ವಾಹನಗಳು ‘ಎಫ್.ಸಿ.’ (Fitness Certificate) ಇಲ್ಲದೆ ಸಂಚರಿಸುತ್ತಿರುವುದನ್ನು ಗಂಭೀರವಾಗಿ ಗಮನಿಸಿದರು. ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದನ್ನು ಪ್ರಶ್ನಿಸಿ, “ನಿಮ್ಮ ಮಕ್ಕಳಿಗೆ ಇದೇ ರೀತಿ ಆದರೆ ಏನು ಮಾಡುತ್ತೀರಿ? ಬೇರೆ ಮಕ್ಕಳ ಬಗ್ಗೆ ಕಾಳಜಿ ಇಲ್ಲವಾ?” ಎಂದರು.ಇದನ್ನು ಓದಿ –ಶ್ರೀರಂಗಪಟ್ಟಣ ದಸರಾ ಸೆ.25ರಿಂದ ಭವ್ಯವಾಗಿ ಆರಂಭ
ಇದೇ ವೇಳೆ ಎಲ್ಲಾ ಆರ್‌ಟಿಒ ಇನ್ಸ್‌ಪೆಕ್ಟರ್‌ಗಳ ಫೋನ್ ಪೇ ವ್ಯವಹಾರಗಳನ್ನು ಕೂಡ ಪರಿಶೀಲಿಸಿದ ಅವರು, ದಾಖಲೆಗಳು ಸ್ಪಷ್ಟವಾಗಿರುವ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.