ನವದೆಹಲಿ: ವಾಣಿಜ್ಯ ಬಳಕೆಯ LPG ಸಿಲಿಂಡರ್‌ಗಳ (Commercial LPG Cylinder) ಬೆಲೆಯಲ್ಲಿ ಮತ್ತೊಮ್ಮೆ ಇಳಿಕೆ ಕಂಡುಬಂದಿದ್ದು, ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 51.50 ರೂ. ಇಳಿಕೆ ಮಾಡಿ, ಇಂದಿನಿಂದ ಜಾರಿಗೆ ತರಲಾಗಿದೆ.
ಆದರೆ, 14.2 ಕೆಜಿ ಗೃಹ ಬಳಕೆಯ ಸಿಲಿಂಡರ್ (Domestic LPG Cylinder) ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಇಳಿಕೆಯ ನಂತರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,580 ರೂ. ಆಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ ದರಗಳಿಗೆ ಅನುಗುಣವಾಗಿ, ತೈಲ ಕಂಪನಿಗಳು ಪ್ರತಿ ತಿಂಗಳು ಎಲ್‌ಪಿಜಿ ಬೆಲೆ ಪರಿಷ್ಕರಿಸುತ್ತವೆ.
ಈ ಹಿಂದೆ ಆಗಸ್ಟ್‌ನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 33.50 ರೂ. ಇಳಿಸಲಾಗಿತ್ತು. ಜುಲೈ 1ರಂದು 58.50 ರೂ. ಕಡಿತ ಮಾಡಲಾಗಿತ್ತು.
ಜೂನ್‌ನಲ್ಲಿ 24 ರೂ. ಇಳಿಕೆ ಮಾಡಿದ ಬಳಿಕ ಬೆಲೆ 1,723.50 ರೂ. ಆಗಿತ್ತು. ಏಪ್ರಿಲ್‌ನಲ್ಲಿ ಬೆಲೆ 1,762 ರೂ. ಇತ್ತು. ಫೆಬ್ರವರಿಯಲ್ಲಿ 7 ರೂ. ಇಳಿಕೆ ಆಗಿದ್ದರೆ, ಮಾರ್ಚ್‌ನಲ್ಲಿ 6 ರೂ. ಹೆಚ್ಚಳ ಮಾಡಲಾಗಿತ್ತು.