ಬೆಂಗಳೂರು: ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ಒಟ್ಟು 1,425 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಬಳ್ಳಾರಿಯಲ್ಲಿರುವ ಪ್ರಧಾನ ಕಚೇರಿಯಿಂದ ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ.
ಕ್ಲರ್ಕ್, ಅಸಿಸ್ಟಂಟ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೆಪ್ಟೆಂಬರ್ 1ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 21, 2025ರವರೆಗೆ ನಡೆಯಲಿದೆ.
Contents
ಹುದ್ದೆಗಳ ವಿವರ
- ಕ್ಲರ್ಕ್: 800 ಹುದ್ದೆಗಳು – ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಅಗತ್ಯ.
- ಅಸಿಸ್ಟಂಟ್ ಮ್ಯಾನೇಜರ್: 500 ಹುದ್ದೆಗಳು – ಪದವಿ ಅಗತ್ಯ.
- ಮ್ಯಾನೇಜರ್: 150 ಹುದ್ದೆಗಳು – ಸಿಎ, ಪದವಿ, ಎಲ್‌ಎಲ್‌ಬಿ, ಎಂಬಿಎ ವಿದ್ಯಾರ್ಹತೆ ಅಗತ್ಯ.
ವಯೋಮಿತ
- ಕನಿಷ್ಠ: 18 ವರ್ಷ
- ಗರಿಷ್ಠ: 32 ವರ್ಷ
- ಮೀಸಲಾತಿ ಪ್ರಕಾರ ಸಡಿಲಿಕೆ:
- ಒಬಿಸಿ – 3 ವರ್ಷ
- ಎಸ್‌ಸಿ/ಎಸ್‌ಟಿ – 5 ವರ್ಷ
- ಪಿಡಬ್ಲ್ಯುಬಿಡಿ – 10 ವರ್ಷ
ಅರ್ಜಿ ಶುಲ್ಕ
- ಪ.ಜಾ / ಪ.ಪಂ / ವಿಕಲಚೇತನ ಅಭ್ಯರ್ಥಿಗಳಿಗೆ: ₹175
- ಇತರೆ ಅಭ್ಯರ್ಥಿಗಳಿಗೆ: ₹850
ಆಯ್ಕೆ ವಿಧಾನ
- ಪ್ರಿಲಿಮಿನರಿ ಪರೀಕ್ಷೆ (ನವೆಂಬರ್ / ಡಿಸೆಂಬರ್)
- ಮೇನ್ ಪರೀಕ್ಷೆ (ಡಿಸೆಂಬರ್ / ಫೆಬ್ರವರಿ)
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
- ಸಂದರ್ಶನ
ಇದನ್ನು ಓದಿ –ಶೀಘ್ರವೇ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ
ಅರ್ಜಿ ಸಲ್ಲಿಸುವ ವಿಧಾನ
- ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕೃತ ವೆಬ್‌ಸೈಟ್ karnatakagrameenabank.com ಗೆ ಭೇಟಿ ನೀಡಿ.
- ಹೊಸದಾಗಿ ಹೆಸರು ನೋಂದಾಯಿಸಿ, ಲಾಗಿನ್ ಆಗಿ.
- ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ದಾಖಲೆಗಳು ಹಾಗೂ ಫೋಟೋ ಅಪ್ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಿ.
- ಎಲ್ಲಾ ವಿವರಗಳನ್ನು ಪರಿಶೀಲಿಸಿ “ಸಲ್ಲಿಸು” ಬಟನ್ ಒತ್ತಿ.