ಬೆಂಗಳೂರು ದಕ್ಷಿಣ : ಬೆಂಗಳೂರು ಕಾರ್ಪೊರೇಷನ್ ವ್ಯಾಪ್ತಿಯಿಂದ 25 ಕಿಲೋ ಮೀಟರ್ ವರೆಗೆ ಸಂಚರಿಸುತ್ತಿದ್ದ BMTC ಬಸ್ ಗಳ ಸೇವೆಯನ್ನು ಈಗ 40 ಕಿಲೋಮೀಟರ್ ವರೆಗೂ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ರಾಮನಗರ ಬಸ್ ನಿಲ್ದಾಣದಲ್ಲಿ ನಗರ ಸಾರಿಗೆ ಬಸ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿ, 40 ಕಿ.ಮೀ.ವರೆಗೂ ಬಿಎಂಟಿಸಿ ಬಸ್ ಸೇವೆ ವ್ಯವಸ್ಥೆಯಿಂದ ರಾಮನಗರ, ಚನ್ನಪಟ್ಟಣ, ಮಾಗಡಿಗೂ ಬಿಎಂಟಿಸಿ ಬಸ್ ಸೇವೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ರಾಮನಗರದಲ್ಲಿ ಈ ಹಿಂದೆಯೇ ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ ಹೆಚ್ಚು ದಿನ ಓಡಲಿಲ್ಲ. ಈಗ ಜನಸಂಖ್ಯೆ ಹೆಚ್ಚಾಗಿರುವುದರಿಂದ ನಾಗರ ಸಾರಿಗೆ ಬಸ್ ಗಳ ಸದುಪಯೋಗವಾಗಲಿದೆ ಎಂದು ತಿಳಿಸಿದ್ದಾರೆ.