ನವದೆಹಲಿ: ಬೆಟ್ಟಿಂಗ್ ಆಯಪ್ ಮೂಲಕ ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಕರ್ನಾಟಕದ ರಾಬಿನ್ ಉತ್ತಪ್ಪ ಮತ್ತು ಯುವರಾಜ್ ಸಿಂಗ್‌ಗೆ ನಿರ್ದೇಶನಾಲಯವು ಇಂದು (ಮಂಗಳವಾರ) ಸಮನ್ಸ್ ಜಾರಿ ಮಾಡಿದೆ. ಸೆ. 22 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
1xBet ಹೆಸರಿನ ಆನ್‌ಲೈನ್ ಬೆಟ್ಟಿಂಗ್ ಆಯಪ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಉತ್ತಪ್ಪ ಅವರನ್ನು ಹಣದ ಅಕ್ರಮ ವರ್ಗಾವಣೆ (ಪಿಎಂಎಲ್‌ಎ) ಅಡಿಯಲ್ಲಿ ಹೇಳಿಕೆ ದಾಖಲಿಸುವಂತೆ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್ 22 ರಂದು ವಿಚಾರಣೆಗೆ ಒಳಗಾಗುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.
ಉತ್ತಪ್ಪ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆಯಪ್ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಸಮನ್ಸ್ ಜಾರಿಯಾದ ಮೂರನೇ ಭಾರತೀಯ ಕ್ರಿಕೆಟಿಗರಾಗಿದ್ದಾರೆ. ಇದಕ್ಕೂ ಮೊದಲು ಇಡಿ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್‌ಗೆ ಸಮನ್ಸ್ ನೀಡಿತ್ತು.