By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ಸಾಧನೆಗೆ ಇರಬೇಕು ಆತ್ಮವಿಸ್ವಾಸ ಎಂಬ ದೃಢವಾದ ನಂಬಿಕೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಸಾಧನೆಗೆ ಇರಬೇಕು ಆತ್ಮವಿಸ್ವಾಸ ಎಂಬ ದೃಢವಾದ ನಂಬಿಕೆ
Articles

ಸಾಧನೆಗೆ ಇರಬೇಕು ಆತ್ಮವಿಸ್ವಾಸ ಎಂಬ ದೃಢವಾದ ನಂಬಿಕೆ

Team Varthaman
Last updated: September 16, 2025 1:42 PM
Team Varthaman
Published: September 16, 2025
Share
SHARE

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ, ಸಾಧಿಸಲು ಮನೋಬಲ ಆತ್ಮವಿಶ್ವಾಸ ದೃಢವಾದ ನಂಬಿಕೆ ಇರಬೇಕು. ಒಬ್ಬ ವ್ಯಕ್ತಿಗೆ ಸಾಧಿಸುವ ಛಲವಿದ್ದಾಗ ಮಾತ್ರ ಯಾವುದಾದರೂ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಗುವುದು. ಮನುಷ್ಯ ಸಾಧನೆ ಮಾಡಬೇಕೆಂದರೆ ದೇಹಕ್ಕೆ ವಯಸ್ಸಾಗಿದೆ ಎಂಬುದು ಕಾರಣವಾಗುವುದಿಲ್ಲ. ಬದಲಿಗೆ ಆತನ/ಆಕೆಯ ಮನಸ್ಸು ಮಾತ್ರವಾಗಿರುತ್ತದೆ.

ನಿನ್ನೆ ದಿನಾ ನನ್ನ ಆತ್ಮೀಯರೊಬ್ಬರು ಕರೆ ಮಾಡಿ ಹೇಳುತ್ತಿದ್ದರು ನೀವು ಏನಾದರೂ ಒಂದು ಮಾಡುತ್ತ ಇರುತ್ತೀರಿ ತುಂಬಾ ಖುಷಿಯಾಗುತ್ತದೆ ಎಂದು ಹೇಳಿ ಅಭಿನಂದನೆಗಳನ್ನು ಸಲ್ಲಿಸಿದರು. ಹೌದು ಅವರು ಹೇಳಿದಂತೆ ನನ್ನ ಮನಸ್ಸು ಯಾವಾಗಲೂ ಒಂದು ಗುರಿಯತ್ತ ಸಾಗಿ ಏನಾದರೂ ಸಾಧನೆ ಮಾಡುತ್ತಿರಬೇಕು ಎಂದು ಸದಾ ಹಂಬಲಿಸುತ್ತಿರುತ್ತದೆ. ವ್ಯಕ್ತಿತ್ವ ರೂಪುಗೊಂಡರೆ ಯಾವುದು ಕೂಡ ಬದುಕಿಗೆ ಮಾನ ದಂಡವಾಗುವುದಿಲ್ಲ. ನಾನು ಕಿರಿಯವಳಾದರೂ ಕನಿಷ್ಠ ಅಕ್ಷರಗಳ ಮೂಲಕ ಯಶಸ್ವಿಯತ್ತ ಸಾಗುತ್ತಿದ್ದೇನೆಂದರೆ ತಪ್ಪಾಗಲಿಕಿಲ್ಲ. ಕೆಲವು ಹೊಟ್ಟಿಕಿಚ್ಚು ಪಡುವವರ ಮಾತಿಗೆ ತಲೆ ಕೆಡಿಸಿಕೊಳ್ಳದೆ ನಾನು ನನ್ನ ಸಾಧನೆ ಎಂಬುದರ ಅರಿವಿದ್ದರೆ ಖಂಡಿತಾ ಯಶಸ್ಸನ್ನು ಪಡೆಯಬಹುದು. ಹೌದು ಬಹಳಷ್ಟು ಮಂದಿಗೆ ತಮ್ಮಲ್ಲಿರುವ ಶಕ್ತಿ ಸಾಮರ್ಥ್ಯದ ಅರಿವಿರುವುದಿಲ್ಲ. ಏಕೆಂದರೆ ಅವರು ಒಮ್ಮೆಯೂ ತಮ್ಮನ್ನು ತಾವು ಪರೀಕ್ಷಿಸಿಕೊಂಡಿರುವುದಿಲ್ಲ.

Join WhatsApp Group

ಯಾವುದೇ ಹೊಸ ಸೃಜನಾತ್ಮಕತೆಗೆ ಪ್ರಯತ್ನಿಸದೆ ಕೇವಲ ಯಾಂತ್ರಿಕ ಜೀವನ ಸಾಗಿಸುತ್ತಿರುತ್ತಾರೆ. ಜಗತ್ತಿನಲ್ಲಿ ಸೃಷ್ಟಿಯಾಗಿರುವ ಪ್ರತಿ ಜೀವಿಗೂ ತನ್ನದೇ ಆದ ವಿಭಿನ್ನ ಆಲೋಚನಾ ಶಕ್ತಿಯಿರುತ್ತದೆ. ಮಾನವನಿಗಂತೂ ಸ್ವಲ್ಪ ಹೆಚ್ಚು ವಿವೇಚಿಸುವ, ನಿರ್ಣಯಿಸುವ ಮತ್ತು ಸಂವೇದಿಸುವ ಶಕ್ತಿಯಿರುತ್ತದೆ. ನಿತ್ಯಜೀವನದಲ್ಲಿ ಏಳು ಬೀಳುಗಳು ಸಹಜ. ಸೋಲಾಗಲಿ-ಗೆಲುವಾಗಲಿ, ಸುಖ-ದುಖ:ಗಳಾಗಲಿ ಎಲ್ಲವೂ ಸಹಜ ಕ್ರಿಯೆಗಳೆಂದು ತಿಳಿದು ಧೈರ್ಯದಿಂದ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಇನ್ನೂ ಕೆಲವರು ತಮ್ಮ ಆತ್ಮವಿಶ್ವಾಸದ ಸೋಲಿನ ಅನುಭವದಿಂದ ಬೇರೆಯವರ ಸಾಧನೆ ಕಂಡು ಹೊಟ್ಟೆಕಿಚ್ಚು ಪಡುವುದರಲ್ಲೆ ಕಾಲ ಕಳೆಯತ್ತಿರುತ್ತಾರೆ.  ಒಮ್ಮೆ ಉಂಟಾದ ಸೋಲಿನ ವಿಮರ್ಶೆ ಮಾಡುತ್ತಾ ಅದನ್ನೇ ಚಿಂತಿಸುತ್ತಾ ಕೂರುವುದರಲ್ಲಿ ಉಪಯೋಗವಿಲ್ಲ. ಇದರಿಂದ ನಮ್ಮ ಪರಿಪೂರ್ಣ ವ್ಯಕ್ತಿತ್ವದ ಅರಿವು ಉಂಟಾಗುವ ಬದಲು ನಮ್ಮಲ್ಲಿ ಕೀಳರಿಮೆ ಬೆಳೆದು, ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಗಬಹುದು. ಜೀವನದಲ್ಲಿ ಮಹತ್ತರವಾದ ಸಾಧನೆ ಮಾಡಿರುವ ಬಹುತೇಕರು ಯಾವುದೇ ಪದವಿ ಪಡೆದಿಲ್ಲ. ಶಾಲೆಯ ಮೆಟ್ಟಿಲೇರದವರೂ ಇಂದು ಉನ್ನತ ಸಾಧನೆ ಮಾಡಿರುವ ಉದಾಹರಣೆಗಳಿವೆ. ಹಾಗೆಂದು ಓದುವುದೇ ಮುಖ್ಯವಲ್ಲವಂತಲ್ಲ. ಬದಲಿಗೆ ಅದರಲ್ಲಿನ ಅಲ್ಪಯಶಸ್ಸನ್ನು ಸ್ವಸಾಮರ್ಥ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಿ ಯಶಸ್ವಿಯಾಗಬೇಕು. ಮನಸ್ಸಿನ ಮೊದಲ ಮಿತ್ರ ಆತ್ಮವಿಶ್ವಾಸ, ಆತ್ಮವಿಶ್ವಾಸವಿದ್ದವರು ಜೀವನದಲ್ಲಿ ಸೋಲು ಎಂಬ ಪದವನ್ನೇ ಕೇಳಿರಲಾರರು.

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಆತ್ಮವಿಶ್ವಾಸದ ನುಡಿ ಸದಾ ನಮ್ಮ ಕಿವಿಯಲ್ಲಿ ರಿಂಗಣಿಸುತ್ತಿರಬೇಕು. ನಮ್ಮ ಗುರಿಯು ಈಡೇರಬೇಕಾದರೆ ಮೊದಲು ನಮ್ಮಲ್ಲಿ ಆಸಕ್ತಿ ಅಭ್ಯಾಸ ಮತ್ತು ತಕ್ಕ ಪರಿಶ್ರಮ ಇರಬೇಕಾಗುತ್ತದೆ. ನನಗೆ ವಯಸ್ಸಾಗಿದೆ ನಾನು ಏನನ್ನು ಮಾಡಲಾಗುವುದಿಲ್ಲ ಅಥವಾ ಅದೆಲ್ಲವನ್ನು ಯಾರು ಮಾಡುತ್ತಾರೆ ಈ ರೀತಿಯ ಚಿಂತೆಗಳನ್ನು ಮಾಡುತ್ತಾ ಕುಳಿತುಕೊಂಡರೆ ನಾನು ಮುಂದೆ ಸಾಗಲು ಸಾಧ್ಯವೇ ಇಲ್ಲ. ನಾವು ನಮ್ಮ ಸಾಧನೆಯ ಚಿಂತನೆಗಳನ್ನು ನನಸು ಮಾಡಲು ಪ್ರಯತ್ನ ಮಾಡಿದರೆ ಮಾತ್ರ ನಾನು ಜೀವನದಲ್ಲಿ ಯಶಸ್ಸನ್ನು ಕಾಣಬಹದು. ಡಾ.ಎ.ಪಿ.ಜೆ ಅಬ್ದುಲ್ ಕಲಾಮ್ ಹೇಳುವಂತೆ “ನಿದ್ದೆಯಲ್ಲಿ ಕನಸು ಕಾಣುವುದಕ್ಕಿಂತ ಇತರರು ನಿದ್ರೆಗೆಡುವಂತೆ ಕಂಡ ಕನಸು ನನಸು ಮಾಡಿಕೊಳ್ಳುವುದು ಸಾಧನೆ”. ಗುರಿಯಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತೆ ಎಂಬುದನ್ನು ಅರಿತು ಬದುಕಿನಲ್ಲಿ ಗುರಿಯನ್ನು ಇಟ್ಟುಕೊಂಡು ಅದರ ಸಿದ್ಧಿಗಾಗಿ ಶ್ರಮಿಸಬೇಕು. ನಾವು ಅದೆಲ್ಲವನ್ನೂ ಛಲದಿಂದ, ದೃಢ ಮನೋಭಾವದಿಂದ ಅಭ್ಯಾಸ ಮಾಡಿದರೆ ಒಗ್ಗಿಕೊಳ್ಳುತ್ತವೆ. ಅದು ಓದು ಬರಹ ಇರಬಹುದು, ದೈಹಿಕ ಚಟುವಟಿಕೆ ಇರಬಹುದು ಅಥವಾ ಇನ್ಯಾವುದೇ ಸಾಧನೆ ಇರಬಹುದು. ಪ್ರಯತ್ನಿಸಿದರೆ ಯಾವುದೂ ಕಷ್ಟವಲ್ಲ. ಅಸಾಧ್ಯವಾದುದು ಏನೇನೂ ಇಲ್ಲ ಹಠಕ್ಕೆ ಬಿದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದು.

                                                                                                            -ಪುಷ್ಪ ಪ್ರಸಾದ್‍

  • ತನು -ಮನ ತಂಪಾಗಿಸೋ ತಂಪು ಬೀಜಗಳು
    by Team Varthaman
    March 21, 2026
    ಆಹಾರ ಸೇವನೆಯಲ್ಲಿ ಮತ್ತು ಜೀವನ ಕ್ರಮದಲ್ಲಿ ಉಂಟಾಗುವ ಬದಲಾವಣೆ ಅಶಕ್ತರ ಮೇಲೆ ತೀವ್ರ… Read more: ತನು -ಮನ ತಂಪಾಗಿಸೋ ತಂಪು ಬೀಜಗಳು
  • ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    by Team Varthaman
    March 17, 2026
    ಆಧುನಿಕ ಭಗವದ್ಗೀತೆ ಎಂದೇ ಖ್ಯಾತಿ ಪಡೆದಿರುವ ಮಂಕುತಿಮ್ಮನ ಕಗ್ಗದ ಡಿವಿಜಿ,ಜೀವನ ಧರ್ಮ ಯೋಗ,… Read more: ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
  • ಅತಿಥಿ ದೇವೋಭವ 
    by Team Varthaman
    March 15, 2026
    ಭಾರತ ದೇಶದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಅಂದರೆ ತಾಯಿ ತಂದೆ ಗುರು… Read more: ಅತಿಥಿ ದೇವೋಭವ 
  • ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    by Team Varthaman
    March 15, 2026
    ಅಳಿವೆ ಬೀಜ ಈ ಹೆಸರು ಕೇಳಿದೊಡನೆ ಮಹಿಳೆಯರು ಅಲರ್ಟ್ ಆಗುತ್ತಾರೆ. ಕೆಲವರು ಕಣ್ಣರಳಿಸಿ… Read more: ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
  • ದ್ವೇಷಕ್ಕೆ ಬೆಂಕಿ ಹಚ್ಚಬೇಕು
    by Team Varthaman
    March 8, 2026
    ನಾನು ಭಾವನಾಂತರಂಗದಲ್ಲಿ ಒಂದು ಸಾಲು ಬರೆದಿದ್ದೆ, “ನಾವು ದ್ವೇಷಕ್ಕೆ ಬೆಂಕಿ ಹಚ್ಚಬೇಕು ಹೊರತು… Read more: ದ್ವೇಷಕ್ಕೆ ಬೆಂಕಿ ಹಚ್ಚಬೇಕು
ಅಂಗಾರಕ ಸಂಕಷ್ಟ ಚತುರ್ಥಿಯ ಮಹತ್ವ
ಒಂದೇ ಬಳ್ಳಿಯ ಹೂಗಳಲ್ಲೂ ಅಸೂಯೆಯ ಮುಳ್ಳುಗಳೇ.?
ಬೋರ್ಡ್ ಪರೀಕ್ಷೆಗಳು ಹಾಗೂ ಮಕ್ಕಳ ಮನಸ್ಥಿತಿ 
ಸಂಕ್ರಾತಿ ವರ್ಷ ಭವಿಷ್ಯ
ಚಾತುರ್ಮಾಸ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaUttara Kannada

ಐಎಎಸ್ ಅಧಿಕಾರಿ ಮಹಾಂತೇಶ್ ಬಿಳಗಿ ಸೇರಿ ಮೂವರ ದುರ್ಮರಣ

Team Varthaman
Team Varthaman
November 25, 2025
ಭಾಗ್ಯದ ಲಕ್ಷ್ಮೀ ಬಾರಮ್ಮಾ(ಬ್ಯಾಂಕರ್ಸ್ ಡೈರಿ)
ಕಿಮೋಥೆರಪಿ ಶಸ್ತ್ರ ಚಿಕಿತ್ಸೆ ಸಕಲ ಸಿದ್ಧ: ಸುಹಾಸ್‌
ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್‌ಗೆ ಷರತ್ತುಬದ್ಧ ಜಾಮೀನು
ಗ್ಯಾಸ್ ಗೀಸರ್ ಸೋರಿಕೆ : ತಾಯಿ–ಮಗುವಿನ ದುರ್ಮರಣ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?