ಮೈಸೂರು :ಮೈಸೂರು ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾದ ಪ್ರಾಚ್ಯವಿದ್ಯಾ ಸಂಶೋಧನಾಲಯವು ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಶೃಂಗೇರಿ ಸಂಸ್ಥೆಯೊಂದಿಗೆ ಅಪ್ರಕಟಿತ ಹಸ್ತಪ್ರತಿಗಳಲ್ಲಿರುವ ಕೃತಿಗಳ ಕುರಿತಾದ ಒಂಡು ಒಡಂಬಡಿಕೆ ಸಹಿ ಮಾಡಲಾಗಿದೆ.
ಈ ಯೋಜನೆ ಅಡಿಯಲ್ಲಿ ವಿದ್ವಾಂಸರ ಮೂಲಕ ಅಪ್ರಕಟಿತದವಾದ ಅಂದಾಜು 13000 ಹಸ್ತಪ್ರತಿಗಳಲ್ಲಿರುವ ಕೃತಿಗಳ ವರ್ಣನಾತ್ಮಕ ಸೂಚಿಯನ್ನು (Manuscripts Descriptive Catalogue) ಮಾಡಲು ಉದ್ದೇಶಿಸಲಾಗಿದೆ
ಆಯ್ದ ಕೃತಿಗಳನ್ನು ಪುಸ್ತಕರೂಪದಲ್ಲಿ ಮುದ್ರಿಸಲು ನಿಶ್ಚಯಮಾಡಲಾಗಿದೆ.

ಈ ಒಡಂಬಡಿಕೆಯ ರೂ.92,40,000/- ಗಳ ಈ ಯೋಜನೆಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಶ್ರೀಮತಿ ಎಂ.ಕೆ.ಸವಿತಾ ಹಾಗೂ ಶ್ರೀ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿಗಳಾದ ಪಿ.ಎ.ಮುರಳಿ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಎನ್.ಕೆ.ಲೋಕನಾಥ್ ಅವರು, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕರಾದ ಡಾ. ಡಿ.ಪಿ. ಮಧುಸೂಧನಾಚಾರ್ಯ ಹಾಗೂ ಉಭಯ ಸಂಸ್ಥೆಗಳ ವಿದ್ವಾಂಸರು ಉಪಸ್ಥಿತರಿದ್ದರು.