ಮೈಸೂರು: ಮುಡಾ ಪ್ರಕರಣದಲ್ಲಿ ಸಿಎಂ ಕುಟುಂಬದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಂಶಯ ಹುಟ್ಟಿಸುವ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ. ಈ ಆಡಿಯೋದಲ್ಲಿ ಮುಡಾದ ಮಾಜಿ ಆಯುಕ್ತರು ಹಣದ ಆಮಿಷ ಒಡ್ಡಲು ಯತ್ನಿಸಿದರೆಂಬ ಆರೋಪ ಕೇಳಿಬಂದಿದೆ.
ಕೇವಲ 6 ಸೆಕೆಂಡ್‌ಗಳ ಆಡಿಯೋವನ್ನು ಬಿಡುಗಡೆ ಮಾಡಿದ ಸ್ನೇಹಮಯಿ ಕೃಷ್ಣ, ಸಂಪೂರ್ಣ ದಾಖಲೆಗಳನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ –ಮಡಿಕೇರಿ, ದಾವಣಗೆರೆ, ಧಾರವಾಡ ಕೋರ್ಟ್‌ಗಳಿಗೆ ಬಾಂಬ್ ಬೆದರಿಕೆ
ಬಿಡುಗಡೆಯಾದ ಆಡಿಯೋದಲ್ಲಿ “ಏನಾದರೂ ಲಿಂಕ್ ಹಿಡಿದು ಒನ್ ಟು ಒನ್ ಕನೆಕ್ಷನ್ ತೆಗೆದುಕೊಳ್ಳಬೇಕು” ಎಂಬ ಮಾತುಗಳು ಕೇಳಿಬರುತ್ತಿವೆ ಎನ್ನಲಾಗಿದೆ. ಈ ಧ್ವನಿ ಡಿ.ಬಿ. ನಟೇಶ್ ಅವರು ಮೈಸೂರು ಮೂಲದ ವ್ಯಕ್ತಿಯೊಬ್ಬರೊಂದಿಗೆ ನಡೆಸಿದ ಸಂಭಾಷಣೆ ಎಂದು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುವ ಸಾಧ್ಯತೆ ಇದೆ.








