- ಮುಂಬೈನ ಖಾಸಗಿ ಸಮಾರಂಭದಲ್ಲಿ ಮದುವೆ ತಯಾರಿ ಆರಂಭ
ಮುಂಬೈ: ಕ್ರಿಕೆಟ್ ಲೋಕದಲ್ಲಿ ‘ಕ್ರಿಕೆಟ್ ದೇವರು’ ಎಂದೇ ಖ್ಯಾತಿ ಪಡೆದಿರುವ ಟೀಂ ಇಂಡಿಯಾದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ಮುಂಬೈನ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಂದೋಕ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ನಿಶ್ಚಿತಾರ್ಥವು ಮುಂಬೈನಲ್ಲಿರುವ ಖಾಸಗಿ ಸ್ಥಳದಲ್ಲಿ, ಇರುವುದು ಕುಟುಂಬದ ಆಪ್ತರು ಮತ್ತು ಆಪ್ತ ಸ್ನೇಹಿತರು ಮಾತ್ರ ಹಾಜರಾಗಿದ್ದ ಸಮಾರಂಭದಲ್ಲಿ ನೆರವೇರಿತು. ಆದರೆ ತೆಂಡೂಲ್ಕರ್ ಕುಟುಂಬ ಅಥವಾ ಘಾಯ್ ಕುಟುಂಬದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಕ್ರಿಕೆಟ್ ಪಯಣದಲ್ಲಿ ಅರ್ಜುನ್ ಸ್ಥಿತಿ
25 ವರ್ಷದ ಅರ್ಜುನ್ ತೆಂಡೂಲ್ಕರ್ ಪ್ರಸ್ತುತ ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ಪರ ಆಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಮುಂಬೈ ತಂಡದ ಭಾಗವಾಗಿದ್ದರು. ರಣಜಿ ತಂಡದಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದ್ದರೂ, ಇನ್ನೂ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಅರ್ಜುನ್ 2024 ಸೀಸನ್‌ನಲ್ಲಿ ಕೆಲವೇ ಅವಕಾಶಗಳನ್ನು ಪಡೆದಿದ್ದರು. ಆದರೆ ಮೆಗಾ ಹರಾಜಿಗೂ ಮುನ್ನ ಅವರನ್ನು ಬಿಡುಗಡೆ ಮಾಡಿದರೂ, ಮತ್ತೆ 30 ಲಕ್ಷಕ್ಕೆ ಖರೀದಿಸಿ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಈ ಆವೃತ್ತಿಯಲ್ಲಿ ಅವರು ಕೇವಲ ಒಂದು ಪಂದ್ಯವನ್ನೂ ಆಡಲಿಲ್ಲ.ಇದನ್ನು ಓದಿ –ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲರ ಜಾಮೀನು ರದ್ದು
ಅರ್ಜುನ್ ತೆಂಡೂಲ್ಕರ್‌ನ ಅಂಕಿಅಂಶಗಳು
- ಪ್ರಥಮ ದರ್ಜೆ: 17 ಪಂದ್ಯ, 532 ರನ್ (ಸರಾಸರಿ 23.13), 37 ವಿಕೆಟ್‌ಗಳು (ಸರಾಸರಿ 33.51)
- ಲಿಸ್ಟ್-ಎ: 18 ಪಂದ್ಯ, 102 ರನ್, 25 ವಿಕೆಟ್‌ಗಳು
- ಟಿ20: 24 ಪಂದ್ಯ, 119 ರನ್ (ಸರಾಸರಿ 13.22), 27 ವಿಕೆಟ್‌ಗಳು (ಸರಾಸರಿ 25.07)
- ಐಪಿಎಲ್ ದಾಖಲೆ: ಮುಂಬೈ ಇಂಡಿಯನ್ಸ್ ಪರ 5 ಪಂದ್ಯ, 3 ವಿಕೆಟ್, 13 ರನ್