ನವದೆಹಲಿ: ಭಾರತೀಯ ರೈಲ್ವೆ ಮತ್ತೊಂದು ಸುಧಾರಣೆಯತ್ತ ಹೆಜ್ಜೆ ಇಟ್ಟಿದ್ದು, ರೈಲ್ವೆ ಪ್ರಯಾಣಿಕರಿಗೆ ಶೀಘ್ರದಲ್ಲೇ ರೈಲು ಬೋಗಿಗಳಲ್ಲಿಯೇ ಎಟಿಎಂ (ATM) ಸೇವೆ ಲಭ್ಯವಾಗಲಿದೆ ಎಂಬ ಸಿಹಿ ಸುದ್ದಿಯನ್ನು ಅಧಿಕಾರಿಗಳು ಘೋಷಿಸಿದ್ದಾರೆ.
ಪ್ರಾಯೋಗಿಕ ಹಂತವಾಗಿ ಮುಂಬೈ-ಮನ್ಮಾಡ್ ನಡುವಿನ ಜನಪ್ರಿಯ ಪಂಚವಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗಿದ್ದು, ಈ ಬಗ್ಗೆ ಕೇಂದ್ರ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಈ ಎಟಿಎಂ ಅನ್ನು ಖಾಸಗಿ ಬ್ಯಾಂಕ್‌ವೊಂದರ ಸಹಕಾರದೊಂದಿಗೆ, ದೈನಂದಿನ ಎಕ್ಸ್‌ಪ್ರೆಸ್ ಸೇವೆಯ ಹವಾನಿಯಂತ್ರಿತ ಚೇರ್ ಕಾರ್ ಬೋಗಿಯಲ್ಲಿ ಸ್ಥಾಪಿಸಲಾಗಿದೆ. ಕೆಲವೇ ದಿನಗಳಲ್ಲಿ ಪ್ರಯಾಣಿಕರು ಈ ಸೇವೆ ಬಳಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನು ಓದಿ –ಕರ್ನಾಟಕದಾದ್ಯಂತ ಭಾರೀ ಮಳೆ ಮುನ್ಸೂಚನೆ
ಪಂಚವಟಿ ಎಕ್ಸ್‌ಪ್ರೆಸ್ , ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಹಾಗೂ ನಾಸಿಕ್ ಜಿಲ್ಲೆಯ ಮನ್ಮಾಡ್ ಜಂಕ್ಷನ್ ನಡುವೆ ಪ್ರತಿದಿನ ಚಲಿಸುತ್ತಿದ್ದು, ಸುಮಾರು 4.35 ಗಂಟೆಗಳಲ್ಲಿ ತನ್ನ ಏಕಮುಖ ಪ್ರಯಾಣವನ್ನು ಪೂರೈಸುತ್ತದೆ. ಅನುಕೂಲಕರ ಸಮಯ ಹಾಗೂ ವೇಗದಿಂದಾಗಿ ಇದು ಈ ಮಾರ್ಗದಲ್ಲಿ ಅತ್ಯಂತ ಜನಪ್ರಿಯ ರೈಲಾಗಿ ಪರಿಗಣಿಸಲಾಗಿದೆ.
ಈ ಹೊಸ ಎಟಿಎಂ ವ್ಯವಸ್ಥೆಯು ಭವಿಷ್ಯದಲ್ಲಿ ಇತರ ಪ್ರಮುಖ ರೈಲುಗಳಲ್ಲಿಯೂ ಅನ್ವಯಿಸಲು ಯೋಜನೆ ರೂಪಿಸಲಾಗಿದ್ದು, ಪ್ರಯಾಣಿಕರಿಗೆ ಹಣದ ಅವಶ್ಯಕತೆ ಪೂರೈಸುವಲ್ಲಿ ಮಹತ್ವದ ಬದಲಾವಣೆ ತರಲಿದೆ.