By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಬಾಳೆದಿಂಡಿನ ಸಾಂಬಾರ್ ಅತ್ಯುತ್ತಮ ಕಿಡ್ನಿ ಕ್ಲೀನ‌ರ್ !!!
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಬಾಳೆದಿಂಡಿನ ಸಾಂಬಾರ್ ಅತ್ಯುತ್ತಮ ಕಿಡ್ನಿ ಕ್ಲೀನ‌ರ್ !!!
Articles

ಬಾಳೆದಿಂಡಿನ ಸಾಂಬಾರ್ ಅತ್ಯುತ್ತಮ ಕಿಡ್ನಿ ಕ್ಲೀನ‌ರ್ !!!

Team Varthaman
Last updated: September 21, 2025 10:29 AM
Team Varthaman
Published: September 21, 2025
Share
SHARE

ಒಂದು ಬಾಳೆಯ ಮರ ಮನೆಯ ಪಕ್ಕದಲ್ಲಿದ್ದರೆ ನಾನಾ ರೀತಿಯ ಉಪಯೋಗಗಳು ಎನ್ನುವುದು ಹಿಂದಿನಿಂದಲೂ ಹಿರಿಯರು ಹೇಳಿಕೊಂಡು ಬಂದಿರುವ ಮಾತು . ಕೇವಲ ಬಾಳೆ ಹಣ್ಣು, ಬಾಳೆ ಎಲೆ ಅಷ್ಟಕ್ಕೆ ಮಾತ್ರ ಇದು ಸೀಮಿತವಾಗಿಲ್ಲ. ಬದಲಿಗೆ, ಬಾಳೆ ಮರದ ದಂಟು ಅಥವಾ ದಿಂಡು ಕೂಡ ಉಪಯೋಗಕ್ಕೆ ಬರುತ್ತದೆ. ಅದರಲ್ಲೂ ಬಾಳೆ ದಿಂಡು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತಕಾರಿ.

Join WhatsApp Group

ಬಾಳೆಹಣ್ಣು, ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಮಾತ್ರವಲ್ಲ ಬಾಳೆ ದಂಟು ಅಥವಾ ಬಾಳೆ ದಿಂಡಿನಿಂದಲೂ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ದೇಹದ ಉಷ್ಣತೆಗೆ ಬಾಳೆಯ ಉತ್ಪನ್ನಗಳು ಹೆಚ್ಚು ಉಪಯುಕ್ತವಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಗಾಳಿ ಮಳೆಗೆ ಬಾಳೆ ಮರ ನೆಲಕ್ಕಚ್ಚುವುದು ಸಾಮಾನ್ಯ. ಈ ಸಂದರ್ಭದಲ್ಲಿ ಎಲೆ ಮತ್ತು ಬಾಳೆ ಕಾಯಿಯನ್ನು ತುಂಡು ಮಾಡಿ ಇಡುವಂತೆ, ಬಾಳೆ ಗಿಡದ ಮಧ್ಯ ಭಾಗವನ್ನು ತುಂಡು ಮಾಡಿಟ್ಟು ಉಪಯೋಗಿಸಬಹುದು. ಏಕೆಂದರೆ ಬಾಳೆಯ ಪ್ರತಿಯೊಂದು ಭಾಗವೂ ಉಪಯುಕ್ತವಾಗಿದೆ.

ಬಾಳೆದಿಂಡು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಪಲ್ಯ ಕೋಸಂಬರಿ, ಚಟ್ಟಿಯ ರೂಪದಲ್ಲಿ ಸೇವಿಸಬಹುದಾಗಿದೆ. ವರ್ಷದಲ್ಲಿ ಎರಡು ಬಾರಿಯಾದರೂ ಬಾಳೆದಿಂಡಿನ ಉಪಯೋಗ ಇರಲೇಬೆಕು ಎನ್ನುತ್ತಾರೆ ಹಿರಿಯರು. ಹಾಗಾದರೆ ಬಾಳೆದಿಂಡಿನಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳಿದೆ ಎನ್ನುವುದನ್ನು ತಿಳಿದುಕೊಳ್ಳಿ. ನಿಮ್ಮ ಮನೆಯಲ್ಲಿರುವ ಬಾಳೆಮರ ಎಷ್ಟು ಉಪಯುಕ್ತ ಎನ್ನುವುದು ತಿಳಿಯುತ್ತದೆ.

ಬಾಳೆ ಮರದ ಮೇಲೆ ಸೊನೆ ಇರುತ್ತದೆ ಅದನ್ನು ತಿನ್ನುವುದು ಹೇಗೆ ಎನ್ನುವುದು ಹಲವರಿಗೆ ಗೊಂದಲ ಇರಬಹುದು. ಆದರೆ ಬಾಳೆ ಮರವನ್ನು ಮಧ್ಯಕ್ಕೆ ಕತ್ತರಿಸಿ ಅದರ ಸುರುಳಿಗಳನ್ನು, ಒಳಗಿನ ಬಿಳಿ ಅಂಶ ಕಾಣುವವವರೆಗೆ ಬಿಡಿಸಬೇಕು. ಯಾವಾಗ ಬಿಳಿಯ ದಿಂಡು ಕಾಣುತ್ತದೋ, ಆಗ ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಬೇಕು. ಈ ರೀತಿಯ ಬಿಳಿ ಬಣ್ಣದ ಬಾಳೆ ದಿಂಡು ಆರೋಗ್ಯಕ್ಕೆ ಒಳ್ಳೆಯದು.

ಬಾಳೆದಿಂಡಿನ ಮುಖ್ಯ ಪ್ರಯೋಜನಗಳು:

1.ಜೀರ್ಣಾಂಗ ಆರೋಗ್ಯ: ನಾರಿನಂಶವು ಅಧಿಕವಾಗಿರುವುದರಿಂದ ಜೀರ್ಣಕ್ರಿಯೆ ಸುಧಾರಿಸಿ, ಮಲಬದ್ಧತೆಯನ್ನು ತಡೆಯುತ್ತದೆ. 

2.ತೂಕ ನಷ್ಟ: ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನಾರಿನಾಂಶ ಹೊಂದಿರುವ ಕಾರಣ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಡಯೆಟ್‌ನಲ್ಲಿ ಬಾಳೆದಿಂಡಿನ ಸಲಾಡ್ ಮಾಡಿಕೊಂಡು ಸೇವಿಸಿ. ಅಥವಾ ಪದಾರ್ಥ ಮಾಡಿಕೊಂಡು ಊಟದ ಜೊತೆಗೆ ಸೇವಿಸಿ. ಕೆಲವೇ ದಿನಗಳಲ್ಲಿ ಹೊಟ್ಟೆಯ ಭಾಗದಲ್ಲಿನ ಅನಗತ್ಯ ಬೊಜ್ಜನ್ನು ಕರಗಿಸಲು ಇದು ನೆರವಾಗುತ್ತದೆ. ಆದ್ದರಿಂದ ಒಂದು ಬಾಳೆ ಗಿಡದ ದಿಂಡು ಇದ್ದರೆ ಹಲವಾರು ಲಾಭಗಳನ್ನು ಪಡೆಯಬಹುದಾಗಿದೆ.

3.ಮೂತ್ರಪಿಂಡದ ಆರೋಗ್ಯ: ಇದು ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮೂತ್ರಪಿಂಡದಲ್ಲಿ ಕ್ಯಾಲ್ಸಿಯಂ ಶೇಖರಣೆಯನ್ನು ತಡೆಯುವುದರಿಂದ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ. 

4.ರಕ್ತದೊತ್ತಡ ನಿಯಂತ್ರಣ: ಕೊಲೆಸ್ಟ್ರಾಲ್ ಅಂಶದ ನಿರ್ವಹಣೆ ಮತ್ತು ರಕ್ತದ ಒತ್ತಡದ ಸಮಸ್ಯೆಗೆ ಪ್ರಾರಂಭದಲ್ಲಿ ಉಂಟಾಗುವ ರಕ್ತದ ಒತ್ತಡದ ಸಮಸ್ಯೆಯನ್ನು ನಿರ್ಲಕ್ಷಿದರೆ ಭವಿಷ್ಯದಲ್ಲಿ ಹೃದಯಕ್ಕೆ ತೊಂದರೆ ಆಗುವ ಎಲ್ಲಾ ಲಕ್ಷಣಗಳಿರುತ್ತವೆ. ದೇಹದಲ್ಲಿ ರಕ್ತದ ಒತ್ತಡ ನಿಯಂತ್ರಣದಲ್ಲಿ ಇಡಬೇಕಾದರೆ ಮೊದಲು ನಾವು ತೆಗೆದುಕೊಳ್ಳುವ ಆಹಾರದಲ್ಲಿರುವ ಕೊಲೆಸ್ಟರಾಲ್ ಮತ್ತು ಕೊಬ್ಬಿನ ಅಂಶದ ಕಡೆಗೆ ವಿಶೇಷವಾದ ಗಮನ ಹರಿಸಬೇಕು. ಬಾಳೆದಿಂಡಿನ ರಸದಲ್ಲಿ ಕಬ್ಬಿಣದ ಅಂಶ, ವಿಟಮಿನ್ ‘ ಬಿ ೬ ‘ ಮತ್ತು ಪೊಟ್ಯಾಶಿಯಂ ಅಂಶ ಇರುವುದರಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸಿ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗೆ ರಕ್ತದ ಒತ್ತಡವನ್ನು ಕಡಿಮೆ ಮಾಡಿ ಸಹಾಯ ಮಾಡುತ್ತದೆ.

5.ಗ್ಯಾಸ್ಟ್ರಿಕ್ ನಿವಾರಣೆ: ಗ್ಯಾಸ್ಟಿಕ್ ಸಮಸ್ಯೆಗೆ ರಾಮಬಾಣ ಬಾಳೆದಿಂಡಿನ ರಸ ನಿಮಗೆ ಆಗಾಗ ಅಸಿಡಿಟಿಯ ಸಮಸ್ಯೆಯಿಂದ ಬೇಸತ್ತು ಹೋಗಿದ್ದರೆ, ಜೊತೆಯಲ್ಲಿ ಯಾವಾಗ ಆಗಾಗ ಎದೆಯುರಿ ಮತ್ತು ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳುತ್ತಿದ್ದರೆ ಬಾಳೆ ಹಣ್ಣಿನ ಅಥವಾ ಬಾಳೆ ದಿಂಡಿನ ರಸ ಸೇವಿಸುವುದನ್ನು ರೂಡಿ ಮಾಡಿಕೊಂಡರೆ ಅದು ದೇಹದಲ್ಲಿ ಆಮ್ಲೀಯತೆ ಯ ಮಟ್ಟವನ್ನು ಸಮತೋಲನಕ್ಕೆ ತಂದು ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಕೊಡುತ್ತದೆ. ಅನಿಮಿಯಾದ ಸ್ನೇಹಿತರಿಗೆ ಅಂತೂ ಬಾಳೆಯ ದಿಂಡು ಮಾಡುತ್ತದೆ ಒಳ್ಳೆಯ ಪಾಠ. ಹೌದು, ಬಾಳೆಯ ದಿಂಡಿನ ರಸದಲ್ಲಿ ಕಬ್ಬಿಣದಂಶ ಮತ್ತು ವಿಟಮಿನ್ ‘ ಬಿ6 ‘ ಅಂಶ ಹೆಚ್ಚಿರುವುದರಿಂದ ಸಹಜವಾಗಿಯೇ ಇದರ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುವಂತೆ ಮಾಡುತ್ತದೆ. ಈ ಗುಣ ಲಕ್ಷಣದಿಂದಲೇ ಅನೀಮಿಯಾ ರೋಗಿಗಳು ಬಾಳೆ ದಿಂಡಿನ ರಸವನ್ನು ಕುಡಿಯುವುದನ್ನು ತಮ್ಮ ಜೀವನದ ಆಹಾರ ಪದ್ಧತಿಗಳಲ್ಲಿ ಒಂದರಂತೆ ಭಾವಿಸುತ್ತಾರೆ.

6.ಹೊಟ್ಟೆಯ ಸೋಂಕಿಗೆ ಪರಿಹಾರ:ಕೆಲವರಿಗೆ ಆಗಾಗ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಇದರಿಂದ ಹೊಟ್ಟೆಗೆ ಕೊಳಕು ಪದಾರ್ಥಗಳು ಹೋಗಿ ಸೇರಿಕೊಳ್ಳುತ್ತದೆ. ಇದು ಹೊಟ್ಟೆಯ ಸೋಂಕಿಗೆ ಕಾರಣವಾಗುತ್ತದೆ. ಅಲ್ಲದೆ ಕೆಲವೊಮ್ಮೆ ಊಟದ ಸಮಯದಲ್ಲಿ ಕೂದಲು ಹೊಟ್ಟೆ ಸೇರಿದ್ದರೆ ವಾಂತಿ, ನಂಜು ಅಥವಾ ಸೋಂಕಿನ ಅಪಾಯ ಎದುರಾಗುತ್ತದೆ. ಇದನ್ನು ಹೋಗಲಾಡಿಸಲು ಬಾಳೆದಿಂಡು ಸಹಾಯ ಮಾಡುತ್ತದೆ.

7.ಕಿಡ್ನಿಯ ಕಲ್ಲು ಸಮಸ್ಯೆಗೆ ಮದ್ದು:
ಕಿಡ್ನಿ ಕಲ್ಲುಗಳ ಸಮಸ್ಯೆಯೇ? ಯಾವ ವೈದ್ಯರೂ ಬೇಡ. ಕೇವಲ ಬಾಳೆ ಡಿಂಡಿದ್ದರೆ ಸಾಕು ಹೌದು. ಬಾಳೆ ದಿಂಡಿನಲ್ಲಿ ನಿಮ್ಮ ಮೂತ್ರ ಪಿಂಡದಲ್ಲಿ ಉಂಟಾದ ಕಲ್ಲುಗಳ ರೀತಿಯ ಘನ ವಸ್ತುಗಳನ್ನು ಕರಗಿಸುವ ಅದ್ಬುತ ಶಕ್ತಿಯಿದೆ. ಹೇಗೆಂದರೆ ಬಾಳೆದಿಂಡಿನ ರಸದೊಂದಿಗೆ ಸುಣ್ಣವನ್ನು ಬೆರೆಸಿ ಕುಡಿಯುತ್ತಾ ಬಂದರೆ ಕಿಡ್ನಿಯಲ್ಲಿ ಉಂಟಾಗಿರುವ ಎಂತಹದೇ ಕಲ್ಲುಗಳಾದರೂ ಸಹ ಕರಗಿಹೋಗುತ್ತವೆ. ಅಂದರೆ ಕಿಡ್ನಿ ಕಲ್ಲುಗಳ ಸಮಸ್ಯೆಗೆ ಇದಕ್ಕಿಂತ ಔಷಧಿ ಬೇರೊಂದಿಲ್ಲ. ಇದಕ್ಕೆ ಕಾರಣ ಬಾಳೆದಿಂಡಿನಲ್ಲಿ ಇರುವ ಪೊಟ್ಯಾಶಿಯಂ ಅಂಶ ಮತ್ತು ಡೈ – ಯುರೆಟಿಕ್ ಗುಣ ಲಕ್ಷಣಗಳು ಜೊತೆಗೆ ಸುಣ್ಣದಲ್ಲಿರುವ ಸಿಟ್ರಿಕ್ ಆಮ್ಲದ ಅಂಶ. ಈ ಎರಡೂ ಒಟ್ಟಿಗೆ ಸೇರಿ ಕ್ಯಾಲ್ಸಿಯಂ ಗಂಟುಗಳ ಅಥವಾ ಹರಳುಗಳ ರೀತಿ ಮನುಷ್ಯನ ಮೂತ್ರ ಪಿಂಡದಲ್ಲಿ ಉಂಟಾಗಿರುವ ಕಲ್ಲುಗಳ ರೀತಿಯ ವಸ್ತುಗಳನ್ನು ಕರಗುವಂತೆ ಮಾಡುತ್ತದೆ.

8.ರಕ್ತಹೀನತೆಯನ್ನು ಕೂಡ ಇದು ದೂರ ಮಾಡುತ್ತದೆ. ಕಾರಣ ಬಾಳೆ ದಿಂಡಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು, ವಿಟಮಿನ್ ಬಿ 6 ಕೂಡ ಹೇರಳವಾಗಿದೆ.

  1. ಮೂತ್ರನಾಳದ ಸಮಸ್ಯೆಗೆ: ಮೂತ್ರನಾಳದ ಸೋಂಕನ್ನು ನಿವಾರಿಸುತ್ತದೆ ಬಾಳೆದಿಂಡಿನಲ್ಲಿ ಮನುಷ್ಯನಿಗೆ ಎದುರಾಗುವ ಮೂತ್ರನಾಳದ ಸೋಂಕನ್ನು ನಿವಾರಣೆ ಮಾಡುವ ಶಕ್ತಿಯಿದೆ. ಏಕೆಂದರೆ ಬಾಳೆಯ ದಿಂಡಿನಲ್ಲಿ ವಿಟಮಿನ್ ‘ ಬಿ6 ‘ ಅಂಶ ಮತ್ತು ಪೊಟ್ಯಾಷಿಯಂ ಅಂಶದ ಜೊತೆಗೆ ಡೈ – ಯುರೆಟಿಕ್ ಗುಣ ಲಕ್ಷಣಗಳು ಒಟ್ಟಿಗೆ ಸೇರಿ ಮೂತ್ರನಾಳದ ಸೋಂಕಿನ ವಿರುದ್ಧ ಹೋರಾಡುತ್ತವೆ ಮತ್ತು ಸೋಂಕು ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ.
  2. ಮಧುಮೇಹ ನಿರ್ವಹಣೆ: ಸಕ್ಕರೆ ಕಾಯಿಲೆಗೆ ರಾಮಬಾಣ ಬಾಳೆಹಣ್ಣಿನ ದಿಂಡಿನ ರಸ ಸಕ್ಕರೆ ಖಾಯಿಲೆ ಮನುಷ್ಯನಿಗೆ ಎದುರಾಗುವುದಕ್ಕೆ ಕಾರಣ ದೇಹದಲ್ಲಿ ಇನ್ಸುಲಿನ್ ಮಟ್ಟ ಸಮತೋಲನತೆಯನ್ನು ಕಾಯ್ದುಕೊಳ್ಳದೆ ಇರುವುದು.ಇದರಿಂದ ಕೈ ಕಾಲುಗಳು ಮತ್ತು ಮುಖ ಊದಿಕೊಳ್ಳುವುದು, ಕಾಲುಗಳಲ್ಲಿ ಉರಿ, ಗಾಯ ಬೇಗನೆ ವಾಸಿಯಾಗದೆ ಇರುವುದು. ಇಂತಹ ಹಲವಾರು ಸಮಸ್ಯೆಗಳನ್ನು ಸಕ್ಕರೆ ಖಾಯಿಲೆಯ ರೋಗಿಗಳು ಅನುಭವಿಸಬೇಕಾಗುತ್ತದೆ. ಆದರೆ ಬಾಳೆದಿಂಡಿನ ರಸ ಇದಕ್ಕೆಲ್ಲಾ ಮುಕ್ತಿ ಕೊಟ್ಟು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದ ಸಹಜವಾಗಿಯೇ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಆದರೆ ಯಾವುದೇ ಕಾರಣಕ್ಕೂ ಬಾಳೆಯ ದಿಂಡಿನ ರಸವನ್ನು ಸೋಸದೆ ಕುಡಿಯಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಇದ್ದಕ್ಕಿದ್ದಂತೆ ಏರಿಕೆಯಾಗುವುದು ತಪ್ಪಿದಂತಾಗುತ್ತದೆ.

ಬಾಳೆಯ ದಿಂಡಿನ ರಸವನ್ನು ತಯಾರು ಮಾಡುವ ವಿಧಾನ

  • ಬಾಳೆಯ ದಿಂಡಿನ ತಿರುಳುಗಳನ್ನು ಸುಮಾರು ಒಂದು ಗಂಟೆಯ ಕಾಲ ಮೆತ್ತಗಾಗುವವರೆಗೆ ನೆನೆಹಾಕಿ.
  • ಚೆನ್ನಾಗಿ ನೆಂದಿರುವ ತಿರುಳುಗಳನ್ನು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
  • ಸೋಸುವ ಸಲಕರಣೆಯಿಂದ ಜ್ಯೂಸಿನಲ್ಲಿರುವ ನಾರುಗಳನ್ನು ಬೇರ್ಪಡಿಸಿ. ತಿಳಿ ಹರಿಶಿಣ ಬಣ್ಣದ ರಸ ಲಭ್ಯವಾಗುತ್ತದೆ. ಇದಕ್ಕೆ ಅರ್ಧ ಹೋಳು ನಿಂಬೆಹಣ್ಣನ್ನು ಸೇರಿಸಿ ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಿಹಿಗೆ ಅನುಗುಣವಾಗಿ ಸಕ್ಕರೆಯನ್ನು ಹಾಕಿ ಚೆನ್ನಾಗಿ ಕಲಸಿ.
  • ಬೇಸಿಗೆಯ ದಿನಗಳಲ್ಲಿ ಈ ರಸ ಕುಡಿಯಲು ಬಹಳ ರುಚಿಕರ ವಾಗಿರುತ್ತದೆ.

ಸೌಮ್ಯ ಸನತ್.

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
    February 1, 2026
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
    February 1, 2026
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
    January 30, 2026
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
    January 30, 2026
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
    January 30, 2026
“ಅಪ್ಪ” ನೆಂಬ ಆಸರೆ ಇಲ್ಲದ ಬದುಕು!!
ಪೆಟ್ಟು‌ ಬಿದ್ದ ಜಾಗಕ್ಕೇ ಮತ್ತೆಮತ್ತೆ ಪೆಟ್ಟು ಬೀಳೋ ಬದುಕಿನ ವಿಸ್ಮಯ!
ಮೂಲಂಗಿಯೆಂದು ಮೂಗು ಮುರಿಯದಿರಿ
“ಹಾಸನಾಂಬ ದೇವಿ” ದರ್ಶನ
ನೀಲಿ ಸುಂದರಿ ನೇರಳೆ
TAGGED:Banana steamKannada ArticleKidney Cleanserಬಾಳೆ ದಿಂಡು
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaTrending

ಅ. 31ರೊಳಗೆ ಜಾತಿ ಗಣತಿ ಸಮೀಕ್ಷೆ ಪೂರ್ಣಗೊಳಿಸಬೇಕು – ಡಿಸಿಎಂ ಡಿ.ಕೆ. ಶಿ

Team Varthaman
Team Varthaman
October 21, 2025
ವಿಶ್ವ ಸಂಗೀತ ದಿನದ ಶುಭಾಶಯಗಳು
ಚಂದ್ರಘಂಟಾದೇವಿ
ಮೈಸೂರು: ಕುಟುಂಬ ಕಲಹಕ್ಕೆ ಬೇಸತ್ತ ಪೊಲೀಸ್ ಪೇದೆ ಆತ್ಮಹತ್ಯೆ
ಭಾರತದಿಂದ ಆಮದು ಮಾಡುವ ವಸ್ತುಗಳ ಮೇಲೆ 26% ಸುಂಕ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?