By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ನಾವೇನು ಕೊಟ್ವಿ
    April 6, 2026
    ನೇರವಾಗಿ ಮಾತನಾಡೋರು ಎಲ್ಲರ ಪಾಲಿನ ಡಾರ್ಲಿಂಗ್ ಆಗಲು ಸಾಧ್ಯವೇ….?
    April 4, 2026
    “ಈ ಸಮಯ ಕಳೆದು ಹೋಗುತ್ತದೆ”
    March 29, 2026
    ಬೇಸಿಗೆಯ ತಂಪಿಗೆ ಬಾರ್ಲಿ ಎಂಬ ಸಂಜೀವಿನಿ
    March 28, 2026
    ರಾಮ ನಾಮ ಜಪದ ಮಹಿಮೆ
    March 27, 2026
  • Sports
  • National
  • International
  • Crime
Reading: ಬಂಡೀಪುರ–ನಾಗರಹೊಳೆ ಸಫಾರಿ ಹಂತ ಹಂತವಾಗಿ ಪುನರಾರಂಭ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಬಂಡೀಪುರ–ನಾಗರಹೊಳೆ ಸಫಾರಿ ಹಂತ ಹಂತವಾಗಿ ಪುನರಾರಂಭ
BengaluruKarnatakaTrending

ಬಂಡೀಪುರ–ನಾಗರಹೊಳೆ ಸಫಾರಿ ಹಂತ ಹಂತವಾಗಿ ಪುನರಾರಂಭ

Team Varthaman
Last updated: February 18, 2026 5:51 PM
Team Varthaman
Published: February 18, 2026
Share
SHARE

ಬೆಂಗಳೂರು: ಮಾನವ–ವನ್ಯಜೀವಿ ಸಂಘರ್ಷ ಮತ್ತು ಹುಲಿ ದಾಳಿಯಿಂದ ಸಂಭವಿಸಿದ ಸರಣಿ ಸಾವುಗಳ ಹಿನ್ನೆಲೆ ಕಳೆದ ನವೆಂಬರ್ 7ರಿಂದ ಸ್ಥಗಿತಗೊಂಡಿದ್ದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ಸಫಾರಿಯನ್ನು ತಾಂತ್ರಿಕ ಸಮಿತಿಯ ವರದಿ ಆಧರಿಸಿ ಹಂತ ಹಂತವಾಗಿ ಪುನರಾರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಪರಿಸರ ಪ್ರವಾಸೋದ್ಯಮದ ಧಾರಣಾ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ನಿಗದಿ ಪಡಿಸಲು ರಚಿಸಿದ್ದ ತಾಂತ್ರಿಕ ಸಮಿತಿಯ ಮಧ್ಯಂತರ ವರದಿ ಪರಿಶೀಲಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹೆಗ್ಗಡ ದೇವನಕೋಟೆ ಸೇರಿದಂತೆ ಅರಣ್ಯದಂಚಿನ ಪ್ರದೇಶಗಳಲ್ಲಿನ ಸ್ಥಳೀಯರು ಮತ್ತು ರೆಸಾರ್ಟ್ ಸಿಬ್ಬಂದಿ ಜೀವನೋಪಾಯಕ್ಕೆ ತೊಂದರೆ ಆಗಿರುವುದರಿಂದ ಸಫಾರಿ ಪುನರಾರಂಭಿಸಬೇಕು ಎಂದು ಮನವಿ ಮಾಡಿದ್ದರೂ, “ಜೀವವೂ ಉಳಿಯಬೇಕು, ಜೀವನೋಪಾಯವೂ ಇರಬೇಕು” ಎಂಬ ಸಮತೋಲನದ ದೃಷ್ಟಿಯಿಂದ ನಿಯಂತ್ರಿತವಾಗಿ ಸಫಾರಿ ಆರಂಭಿಸಲು ನಿರ್ಧರಿಸಲಾಗಿದೆ.

Join WhatsApp Group

ಬಂಡೀಪುರದಲ್ಲಿ ಈ ಹಿಂದೆ 8 ಗಂಟೆಗಳ ಕಾಲ ನಡೆಯುತ್ತಿದ್ದ ಸಫಾರಿಯನ್ನು ಈಗ 5 ಗಂಟೆಗೆ ಇಳಿಸಲಾಗಿದೆ. ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆನಲ್ಲಿ 4 ಗಂಟೆ ಮಾತ್ರ ಪ್ರಥಮ ಹಂತದಲ್ಲಿ ಅನುಮತಿ ನೀಡಲಾಗಿದೆ. ನವೆಂಬರ್ 7ರೊಳಗೆ ಬಳಕೆಯಾಗುತ್ತಿದ್ದ ವಾಹನಗಳ ಪೈಕಿ ಕೇವಲ ಶೇ.50ರಷ್ಟು ವಾಹನಗಳನ್ನು ಮಾತ್ರ ಬಳಸಲಾಗುತ್ತದೆ. ಉಳಿದ ವಾಹನ ಮತ್ತು ಸಿಬ್ಬಂದಿಯನ್ನು ಅರಣ್ಯದಂಚಿನ ಗ್ರಾಮಗಳಲ್ಲಿ ಗಸ್ತು ಹೆಚ್ಚಿಸಲು ನಿಯೋಜಿಸಲಾಗುತ್ತದೆ.

ಸಫಾರಿಯಿಂದ ಬರುವ ಒಟ್ಟು ಆದಾಯದ ಮೂರನೇ ಒಂದು ಭಾಗವನ್ನು ಅರಣ್ಯದಂಚಿನ ಗ್ರಾಮಗಳ ಸ್ಥಳೀಯರ ಕೌಶಲ್ಯಾಭಿವೃದ್ಧಿ, ಜಾನುವಾರು ಮೇವು ಹಾಗೂ ಪರಿಸರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವ ಷರತ್ತು ವಿಧಿಸಲಾಗಿದೆ. ಮಾನವ–ವನ್ಯಜೀವಿ ಸಂಘರ್ಷ ತಡೆಯಲು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುತ್ತದೆ.

ಸಫಾರಿ ವಾಹನಗಳ ದುರ್ಬಳಕೆ ತಡೆಯಲು ಮುಂದಿನ ಎರಡು ತಿಂಗಳೊಳಗೆ ಎಲ್ಲ ವಾಹನಗಳಿಗೆ ಎಂಜಿನ್ ಸಂಪರ್ಕಿತ ಜಿಪಿಎಸ್ ಮತ್ತು ಡ್ಯಾಶ್ ಕ್ಯಾಮ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಕತ್ತಲಾದ ಬಳಿಕ ಅಥವಾ ನಿಗದಿತ ಅವಧಿಗಿಂತ ಹೆಚ್ಚು ಸಮಯ ಸಫಾರಿ ನಡೆಸುವುದನ್ನು ಕಟ್ಟುನಿಟ್ಟಾಗಿ ತಡೆಯಲಾಗುತ್ತದೆ.

ಬಂಡೀಪುರದ ಒಟ್ಟು ವಿಸ್ತೀರ್ಣ 1036 ಚದರ ಕಿಮೀ ಆಗಿದ್ದು, ಪ್ರವಾಸೋದ್ಯಮ ವಲಯ ಕೇವಲ ಶೇ.8 ಮಾತ್ರ. ನಾಗರಹೊಳೆನಲ್ಲಿ 844 ಚದರ ಕಿಮೀ ವಿಸ್ತೀರ್ಣದಲ್ಲಿದ್ದು, ಪ್ರವಾಸೋದ್ಯಮ ವಲಯ ಶೇ.7.5ರಷ್ಟಿದೆ. ಹೀಗಾಗಿ ಹುಲಿಗಳು ಕಾಡಿನಿಂದ ನಾಡಿಗೆ ಬರುತ್ತಿರುವುದಕ್ಕೆ ಸಫಾರಿಯೇ ಕಾರಣ ಎಂಬುದಕ್ಕೆ ವೈಜ್ಞಾನಿಕ ಆಧಾರ ಇಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಹುಲಿ ಸೆರೆ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾನದಂಡಗಳನ್ನು ಅನುಸರಿಸಲಾಗುತ್ತಿದ್ದು, ಸಮಿತಿ ಶಿಫಾರಸಿನಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಸಭೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

  • ಲೋಕಾಯುಕ್ತ ದಾಳಿ; ಮೀನುಗಾರಿಕೆ ಅಧಿಕಾರಿ ಮನೆಯಲ್ಲಿ ಕೋಟಿ ಆಸ್ತಿ ಪತ್ತೆ
    by Team Varthaman
  • ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಸಂಚು: ಡಿಕೆಶಿ
    by Team Varthaman
  • ಕದನ ವಿರಾಮದ ಬಳಿಕ ಕಚ್ಚಾ ತೈಲ ದರ ಭಾರೀ ಕುಸಿತ
    by Team Varthaman
  • “ಇಂದು ರಾತ್ರಿ ನಾಗರಿಕತೆ ಅಂತ್ಯವಾಗಬಹುದು”; ಇರಾನ್‌ಗೆ ಟ್ರಂಪ್ ಎಚ್ಚರಿಕೆ
    by Team Varthaman
  • ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ; ಇಬ್ಬರು ಮಕ್ಕಳ ದುರ್ಮರಣ
    by Team Varthaman
ಸ್ನೇಹಿತನಿಂದಲೇ ಯುವಕನ ಹತ್ಯೆ: ಗಾಂಜಾ ಮತ್ತಿನಲ್ಲಿ ಕೊಲೆ
ಕರ್ನಾಟಕದಿಂದ ನಾಲ್ವರು ಪಾಕಿಸ್ತಾನ ಪ್ರಜೆಗಳು ಗಡಿಪಾರು
ಮಂಗ್ಲಿ ಪಾರ್ಟಿಯಲ್ಲಿ ಡ್ರಗ್ಸ್, ಗಾಂಜಾ ಪತ್ತೆ
ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ
ಏಷ್ಯಾ ಕಪ್‌ ಇತಿಹಾಸದಲ್ಲಿ ಮೊದಲ ಇಂಡೋ–ಪಾಕ್ ಫೈನಲ್
TAGGED:bandipurbreakingnewsEshwar KhandrelatestnewsNagarholeSafari
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
New Delhi

ಮತಗಳ್ಳತನ ಆರೋಪಕ್ಕೆ : ನಾಳೆ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ

Team Varthaman
Team Varthaman
August 16, 2025
ಸಿಎಂ ಮತ್ತು ಡಿಸಿಎಂ ಮನೆಗೆ ಬಾಂಬ್ ಬೆದರಿಕೆ ಇಮೇಲ್: FIR ದಾಖಲು
ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ
ಆಪರೇಷನ್ ಅರಹಮಾ: ಗಂಡೇಬಲ್‌ನಲ್ಲಿ ಉಗ್ರ ಹತ್ಯೆ
ನಟ ಧ್ರುವ ಸರ್ಜಾ ವಿರುದ್ಧ 3.15 ಕೋಟಿಯ ವಂಚನೆ ಆರೋಪ – FIR ದಾಖಲು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?