ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ ಮೇಲೆ ಮ್ಯಾಚ್ ಫಿಕ್ಸಿಂಗ್ ಶಂಕೆ ಮೂಡಿದ್ದು, BCCI (ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ಎಲ್ಲರಿಗೂ ಎಚ್ಚರಿಕೆ ನೀಡಿದೆ.
ಹೈದ್ರಾಬಾದ್ ಮೂಲದ ಉದ್ಯಮಿಯೊಬ್ಬರು ಬುಕಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಈ ಹಿನ್ನೆಲೆ ಐಪಿಎಲ್ ತಂಡಗಳ ಮಾಲಿಕರು, ಆಟಗಾರರು, ಸಿಬ್ಬಂದಿ ಹಾಗೂ ಟೂರ್ನಿಯ ಜೊತೆಗಿನ ಇತರ ಪೂರಕ ಸಿಬ್ಬಂದಿಗೆ ಬಿಸಿಸಿಐ ಎಚ್ಚರಿಕೆ ನೀಡಿದೆ.
ಈ ಮಾಹಿತಿ ಬಿಸಿಸಿಐಯ ಭ್ರಷ್ಟಾಚಾರ ನಿಗ್ರಹ ದಳ (ACU)ದಿಂದ ಬಂದಿದ್ದು, ಕ್ರಿಕೆಟ್ ಮೇಲಿನ ನಂಬಿಕೆಗೆ ಧಕ್ಕೆ ಉಂಟಾಗದಂತೆ ಎಲ್ಲರೂ ಜಾಗರೂಕರಾಗಿರಬೇಕೆಂದು ಸೂಚನೆ ನೀಡಲಾಗಿದೆ.
ಕ್ರಿಕೆಟ್ ಸಂಬಂಧಿತ ವೆಬ್‌ಸೈಟ್‌ನ ವರದಿಯಂತೆ, ಸಂಶಯಾಸ್ಪದ ವ್ಯಕ್ತಿ ಬುಕಿಗಳ ಜೊತೆ ಸಂಪರ್ಕದಲ್ಲಿದ್ದು, ಹಲವು ಪಂದ್ಯಗಳ ಮೇಲೆ ಪ್ರಭಾವ ಬೀರಿರುವ ಶಂಕೆ ಇದೆ. ಆದರೆ ಈ ವ್ಯಕ್ತಿಯ ಹೆಸರು ಹಾಗೂ ವಿವರಗಳನ್ನು ಬಿಸಿಸಿಐ ರಹಸ್ಯವಾಗಿರಿಸಿದೆ.
ಇಲ್ಲದೇ, ಈ ಉದ್ಯಮಿ ಹಿಂದೆಯೂ ಇಂತಹ ಕ್ರಿಯಾಕಲಾಪಗಳಲ್ಲಿ ಭಾಗಿಯಾಗಿರಬಹುದು ಎಂಬುದಾಗಿ ಭ್ರಷ್ಟಾಚಾರ ನಿಗ್ರಹ ದಳ ಶಂಕೆ ವ್ಯಕ್ತಪಡಿಸಿದೆ.ಇದನ್ನು ಓದಿ –ಖಾಸಗಿ ಶಾಲೆ ದಾಖಲಾತಿಗೆ ಹೊಸ ಸರ್ಕಾರಿ ನಿಯಮಗಳು
ಬಿಸಿಸಿಐ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ ಮತ್ತು ಐಪಿಎಲ್ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.