ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಆಗಸ್ಟ್ 1ರಿಂದ ಆಟೋ ಪ್ರಯಾಣ ದರ ಏರಿಕೆಯಾಗಲಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳು (ಡಿಸಿ) ಹೊಸ ದರ ಜಾರಿಗೆ ಆದೇಶ ಹೊರಡಿಸಿದ್ದಾರೆ. ಆಟೋ ಚಾಲಕರ ಮನವಿಯಂತೆ ದರ ಪರಿಷ್ಕರಣೆ ಮಾಡಲಾಗಿದೆ.
ಹೊಸ ದರ ವಿವರಗಳು ಹೀಗಿವೆ:
- ಕನಿಷ್ಠ ದರ (ಮೊದಲ 2 ಕಿ.ಮೀ): ₹36
- ಪ್ರತಿ ಹೆಚ್ಚುವರಿ ಕಿ.ಮೀಗೆ: ₹18
- ಮೊದಲ 5 ನಿಮಿಷಗಳ ಕಾಯುವಿಕೆ: ಉಚಿತ
- ಪ್ರತಿ 15 ನಿಮಿಷ ಕಾಯುವಿಕೆಗೆ: ₹10
- 20 ಕೆ.ಜಿ ಲಗೇಜು ತನಕ ಉಚಿತ
- 20 ಕೆ.ಜಿ ಮೇಲಾಗಿದ್ದರೆ: ₹10 ಲಗೇಜ್ ಶುಲ್ಕ
- ರಾತ್ರಿ ಸಮಯದಲ್ಲಿ (ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ): 1.5 ಪಟ್ಟು ದರ
- ಆಟೋಮೀಟರ್‌ನಲ್ಲಿ ಪರಿಷ್ಕೃತ ದರ ಪಟ್ಟಿ ಕಡ್ಡಾಯವಾಗಿ ಅಳವಡಿಸಬೇಕು
- ಆ.31ರೊಳಗೆ ಹೊಸ ಮೀಟರ್ ಅಳವಡಿಸಬೇಕು
ಡಿಸಿ ಅಧಿಕಾರಿಗಳ ಎಚ್ಚರಿಕೆ:
ಹೆಚ್ಚುವರಿ ದರ ವಿಧಿಸುವಂತಿಲ್ಲ. ಯಾವುದೆ ಪ್ರಯಾಣಿಕರಿಂದ ಅಧಿಕ ಹಣ ವಸೂಲಿ ಮಾಡಿದರೆ, ಸಂಬಂಧಿತ ಆಟೋ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.ಇದನ್ನು ಓದಿ –ಮೈಸೂರಿನಲ್ಲಿ ಡ್ರಗ್ಸ್ ದಂಧೆ – CBI ತನಿಖೆಗೆ ಯದುವೀರ್ ಒತ್ತಾಯ
ಈ ಕ್ರಮದಿಂದ ಆಟೋ ಪ್ರಯಾಣದ ದರ ಸ್ವಲ್ಪ ಹೆಚ್ಚಾಗಿದ್ದರೂ ನಿಯಮಾನುಸಾರ, ಪಾರದರ್ಶಕ ಸೇವೆ ನೀಡುವತ್ತ ಇಳಿಯುವ ನಿರೀಕ್ಷೆಯಿದೆ.