By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ಮಧ್ಯರಾತ್ರಿ DCM ಆದೇಶದ ನಂತರ ಬಿಗ್‌ ಬಾಸ್‌ ಮನೆ ತೆರೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಮಧ್ಯರಾತ್ರಿ DCM ಆದೇಶದ ನಂತರ ಬಿಗ್‌ ಬಾಸ್‌ ಮನೆ ತೆರೆ
BengaluruKarnatakaMain News

ಮಧ್ಯರಾತ್ರಿ DCM ಆದೇಶದ ನಂತರ ಬಿಗ್‌ ಬಾಸ್‌ ಮನೆ ತೆರೆ

Team Varthaman
Last updated: October 9, 2025 10:15 AM
Team Varthaman
Published: October 9, 2025
Share
SHARE

ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆದೇಶದ ಬೆನ್ನಲ್ಲೇ, ಬಿಡದಿಯ ಜಾಲಿವುಡ್ ಸ್ಟುಡಿಯೋ ಆವರಣದಲ್ಲಿರುವ ಬಿಗ್‌ ಬಾಸ್‌ ಮನೆಯನ್ನು ಮಧ್ಯರಾತ್ರಿ ಪುನಃ ತೆರೆಯಲಾಗಿದೆ. ನಸುಕಿನ ಜಾವ 2:45ರ ವೇಳೆಗೆ ಜಿಲ್ಲಾಡಳಿತದಿಂದ ಸ್ಟುಡಿಯೋ ಸೀಲ್ ತೆರವುಗೊಳಿಸಿ ಸ್ಪರ್ಧಿಗಳನ್ನು ಬಿಗ್‌ ಬಾಸ್‌ ಮನೆಯಲ್ಲಿ ಪುನಃ ಶಿಫ್ಟ್ ಮಾಡಲಾಗಿದೆ.

ಹಿಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್‌ನ ಹಿನ್ನೆಲೆಯಲ್ಲಿ ಜಾಲಿವುಡ್‌ ಸ್ಟುಡಿಯೋ ಮುಚ್ಚಲ್ಪಟ್ಟಿತ್ತು. ಆದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಬಳಿಕ, ಬಿಗ್‌ ಬಾಸ್‌ ಮನೆಯನ್ನು ತೆರೆಯಲು ಕ್ರಮ ಕೈಗೊಳ್ಳಲಾಯಿತು.

ಡಿಕೆಶಿ ಅವರು, “ಪರಿಸರ ನಿರ್ವಹಣೆ ನಮ್ಮ ಪ್ರಮುಖ ಆದ್ಯತೆಯಾಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಸರಿಪಡಿಸಲು ಸ್ಟುಡಿಯೋಗೆ ಅವಕಾಶ ನೀಡಲಾಗುತ್ತದೆ. ಪರಿಸರ ಸಂರಕ್ಷಣೆಯ ಜೊತೆಗೆ ಕನ್ನಡ ಮನರಂಜನಾ ಕ್ಷೇತ್ರವನ್ನು ಬೆಂಬಲಿಸುವುದು ನಮ್ಮ ಬದ್ಧತೆ,” ಎಂದು ಹೇಳಿದ್ದಾರೆ.

Join WhatsApp Group

ಈ ಹಿನ್ನೆಲೆಯಲ್ಲಿ, ಬೆಂಗಳೂರಿನ ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಎಸ್‌ಪಿ ಶ್ರೀನಿವಾಸ್ ಗೌಡ, ತಹಶೀಲ್ದಾರ್ ತೇಜಸ್ವಿನಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜಾಲಿವುಡ್ ಸ್ಟುಡಿಯೋ ಗೇಟ್ ಸೀಲ್ ತೆರವುಗೊಳಿಸಿದರು. ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರು ಮಾತನಾಡಿ, “ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಸ್ಟುಡಿಯೋ ಭಾಗಶಃ ತೆರೆಯಲಾಗಿದೆ. ಆದರೆ, ಸಂಪೂರ್ಣ ಕಾರ್ಯಾಚರಣೆ ನಡೆಸಲು ಇನ್ನೂ ಅನುಮತಿ ನೀಡಿಲ್ಲ. ಕೇವಲ ಬಿಗ್‌ ಬಾಸ್‌ ಕಾರ್ಯಕ್ರಮದ ಸ್ಪರ್ಧಿಗಳು, ಸಿಬ್ಬಂದಿ ಹಾಗೂ ಅಗತ್ಯ ವಸ್ತುಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಶೂಟಿಂಗ್ ಪುನರಾರಂಭದ ಬಗ್ಗೆ ನಾಳೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ,” ಎಂದು ತಿಳಿಸಿದ್ದಾರೆ.

ಸದ್ಯಕ್ಕೆ ಬಿಗ್‌ ಬಾಸ್‌ ಶೋ ನಡೆಯುವ ಮನೆ ಭಾಗ ಮಾತ್ರ ತೆರೆಯಲ್ಪಟ್ಟಿದ್ದು, ಇತರ ವಿಭಾಗಗಳು ಮುಚ್ಚಿಯೇ ಉಳಿದಿವೆ. ಸರ್ಕಾರದಿಂದ ಅನುಮತಿ ಸಿಕ್ಕ ತಕ್ಷಣ, ಬಿಗ್‌ ಬಾಸ್‌ ತಂಡದ ಸದಸ್ಯರು ಮತ್ತು ತಾಂತ್ರಿಕ ಸಿಬ್ಬಂದಿಗಳು ರಾತ್ರೋ ರಾತ್ರಿ ಕ್ಯಾಬ್‌ಗಳ ಮೂಲಕ ಜಾಲಿವುಡ್‌ ಸ್ಟುಡಿಯೋಗೆ ಆಗಮಿಸಿದ್ದಾರೆ. ಇದೇ ವೇಳೆ, ಬಿಡದಿಯಲ್ಲಿದ್ದ ಸ್ಪರ್ಧಿಗಳನ್ನು ಸಹ ಬಿಗ್‌ ಬಾಸ್‌ ಮನೆಗೆ ಕರೆತರಲಾಗಿದೆ.

ಜಾಲಿವುಡ್‌ ಸ್ಟುಡಿಯೋ ಮತ್ತು ಬಿಗ್‌ ಬಾಸ್‌ ಕಾರ್ಯಕ್ರಮದ ವಿರುದ್ಧ ಕೆಲವು ಕನ್ನಡ ಪರ ಸಂಘಟನೆಗಳು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದವು. ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಉಲ್ಲಂಘನೆ ಹಾಗೂ ಅನಧಿಕೃತ ಕಾರ್ಯಾಚರಣೆ ಆರೋಪಗಳ ಹಿನ್ನೆಲೆಯಲ್ಲಿ ಸ್ಟುಡಿಯೋಗೆ ನೋಟಿಸ್ ನೀಡಲಾಗಿತ್ತು. ಆದರೆ ಈಗ ಸರ್ಕಾರದ ಮಧ್ಯಪ್ರವೇಶದಿಂದ ಸ್ಟುಡಿಯೋ ಭಾಗಶಃ ತೆರೆಯಲ್ಪಟ್ಟಿದೆ ಮತ್ತು ಶೂಟಿಂಗ್ ಮುಂದುವರೆಯುವ ಸಾಧ್ಯತೆ ಮತ್ತೊಮ್ಮೆ ಜೀವಂತವಾಗಿದೆ.

ಹೀಗಾಗಿ, ಉಪಮುಖ್ಯಮಂತ್ರಿಯವರ ಆದೇಶದೊಂದಿಗೆ ಬಿಗ್‌ ಬಾಸ್‌ ಸೀಸನ್ 12ಕ್ಕೆ ಹೊಸ ತಿರುವು ಸಿಕ್ಕಿದ್ದು, ಶೋ ಮುಂದುವರಿಯುವ ಸಾಧ್ಯತೆಗಳು ಸ್ಪಷ್ಟವಾಗಿವೆ.

  • ತನು -ಮನ ತಂಪಾಗಿಸೋ ತಂಪು ಬೀಜಗಳು
    by Team Varthaman
  • ಕಿರುಕುಳ ಆರೋಪ: ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ
    by Team Varthaman
  • ಇರಾನ್ ಜೊತೆ ಕದನ ವಿರಾಮ ಇಲ್ಲ: ಟ್ರಂಪ್ ಹೇಳಿಕೆ
    by Team Varthaman
  • ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
    by Team Varthaman
  • RCB ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ
    by Team Varthaman
ಶೀಘ್ರವೇ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ
ಶಬರಿಮಲೆ ದೇಗುಲದ ವಿಗ್ರಹದಿಂದ 4.5 ಕೆಜಿ ಚಿನ್ನ ನಾಪತ್ತೆ – ಹೈಕೋರ್ಟ್ ತನಿಖೆಗೆ ಆದೇಶ
20 ಗಂಟೆಗಳ ವಿಚಾರಣೆ ಬಳಿಕ ಸ್ನೇಹಮಯಿ ಕೃಷ್ಣ ಬಿಡುಗಡೆ
ಮೈಸೂರಿನಲ್ಲಿ ಮತ್ತೆ ಹುಲಿ ದಾಳಿ – 15 ದಿನಗಳಲ್ಲಿ ಮೂರನೇ ಸಾವು
ಮುಂಗಾರು : ಮೂರು ದಿನ ಭಾರೀ ಮಳೆ, 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಪ್ರಕಟ
TAGGED:Big BossbreakingnewsDK shivkumarKannada Big bosslatestnews
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

ಕಾರ್ಡಿಯೋ ಫೋಬಿಯ

Team Varthaman
Team Varthaman
September 6, 2025
ಗಡಿ ಉಸ್ತುವಾರಿ ಸಚಿವರಾಗಿ ಹೆಚ್.ಕೆ. ಪಾಟೀಲ್ ನೇಮಕ
ಮೇ 24 ರಂದು ಸಿಇಟಿ ಫಲಿತಾಂಶ ಪ್ರಕಟ
ಮಹಾರಾಣಿ ಕಾಲೇಜಿನ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ MLA ಹರೀಶ್ ಗೌಡ 
‘ಕಾಮಿಡಿ ಕಿಲಾಡಿ-3’ ವಿಜೇತ ರಾಕೇಶ್ ಪೂಜಾರಿ ನಿಧನ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?