ಚಿಕ್ಕಮಗಳೂರು: ಜಿಲ್ಲೆ ಅಜ್ಜಂಪುರ ತಾಲೂಕಿನ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮತ್ತೊಂದು ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿದೆ. ತಾಂತ್ರಿಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ವೆಂಕಿಬಾಯಿ ಅವರು, ಕೃಷಿ ಹೊಂಡ ಕಾಮಗಾರಿ ಅನುಮೋದನೆಗಾಗಿ ರೈತನೊಬ್ಬನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ನಾಗವಂಗಲ ಗ್ರಾಮದ ರೈತನಿಂದ ₹5,500 ಲಂಚ ಸ್ವೀಕರಿಸುವ ಸಮಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ವೆಂಕಿಬಾಯಿಯನ್ನು ಭರಪೂರ ಸಾಕ್ಷ್ಯಗಳೊಂದಿಗೆ ಬಂಧಿಸಿದ್ದಾರೆ.
ಈ ಕಾರ್ಯಾಚರಣೆ ಪೂರ್ವನಿಯೋಜಿತವಾಗಿದ್ದು, ತಾಲೂಕು ಪಂಚಾಯತ್ ಕಚೇರಿಯೊಳಗೇ ಹಣ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿ ಅವಳನ್ನು ಬಲೆಗೆ ಬೀಳಿಸಿದರು.ಇದನ್ನು ಓದಿ -ಕೆಲವೇ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಆರಂಭ: ಡಿಸಿಎಂ ಡಿ.ಕೆ. ಶಿವಕುಮಾರ್
ಈ ಅಪರಾಹ್ನ ನಡೆದ ದಾಳಿಗೆ ಲೋಕಾಯುಕ್ತ ಡಿವೈಎಸ್‌ಪಿ ಜೆ.ಜೆ. ತಿರುಮಲೇಶ್ ಅವರ ನೇತೃತ್ವದಲ್ಲಿ ತಂಡ ಕಾರ್ಯನಿರ್ವಹಿಸಿತು. ಲಂಚ ಸ್ವೀಕಾರದ ದೃಢವಾದ ಸಾಕ್ಷ್ಯಾಧಾರಗಳೊಂದಿಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.