ಅಹಮದಾಬಾದ್: ಗುಜರಾತ್‌ನ ವಡೋದರದ ಪದ್ರಾ ತಾಲೂಕಿನ ಮುಜ್ಪುರ ಬಳಿ ಗಂಭೀರಾ ಸೇತುವೆ ಕುಸಿದ ಪರಿಣಾಮ ಐದು ವಾಹನಗಳು ಮಹಿಸಾಗರ್ ನದಿಗೆ ಬಿದ್ದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಇನ್ನೂ ಮೂವರನ್ನು ರಕ್ಷಿಸಲಾಗಿದೆ.
ಸುಮಾರು ಬೆಳಗ್ಗೆ 7:45ರ ಸುಮಾರಿಗೆ 45 ವರ್ಷ ಹಳೆಯದಾದ ಗಂಭೀರಾ ಸೇತುವೆ ನಡು ಭಾಗದಲ್ಲಿ ಕುಸಿದಿದ್ದು, ಎರಡೂ ಕಡೆ ಸಂಚಾರದ ಮಧ್ಯೆ ಈ ಅವಘಡ ಸಂಭವಿಸಿದೆ. ಈ ಸೇತುವೆ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ಭಾಗವನ್ನು ಸಂಪರ್ಕಿಸುತ್ತಿದ್ದ ಪ್ರಮುಖ ರಸ್ತೆಯ ಭಾಗವಾಗಿತ್ತು.
ಕಡಿಬಿದ್ದ ಸೇತುವೆ ಮೇಲಿಂದ ಎರಡು ಟ್ರಕ್‌ಗಳು, ಒಂದು ಪಿಕಪ್ ವ್ಯಾನ್ ಮತ್ತು ಇನ್ನೊಂದು ವಾಹನ ನದಿಗೆ ಬಿದ್ದುಹೋಗಿವೆ. ಸ್ಥಳೀಯರು ತಕ್ಷಣ ರಕ್ಷಣಾ ದಳಕ್ಕೆ ಮಾಹಿತಿ ನೀಡಿದ್ದು, ಕೆಲವರನ್ನು ರಕ್ಷಿಸಲಾಗಿದೆ.
ಈ ಸೇತುವೆ ಹಲವು ವರ್ಷಗಳಿಂದ ಅಪಾಯದ ಸ್ಥಿತಿಯಲ್ಲಿ ಇತ್ತು. ಸ್ಥಳೀಯರು ಹಲವಾರು ಬಾರಿ ಸೇತುವೆಯ ಶಿಥಿಲಾವಸ್ಥೆಯ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಹೊಸ ಸೇತುವೆ ನಿರ್ಮಾಣ ಅಥವಾ ತುರ್ತು ದುರಸ್ತಿಗೆ ಆಗ್ರಹಿಸಿದ್ದರು ಎಂಬುದೂ ವರದಿಯಾಗಿದೆ.ಇದನ್ನು ಓದಿ –ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಬಿಡುಗಡೆ
ಘಟನಾ ಸ್ಥಳದಲ್ಲಿ ಶೋಧ ಕಾರ್ಯ ಹಾಗೂ ಮೀರಿದ ವಾಹನಗಳ ಗುರುತು ಪತ್ತೆ ಹಚ್ಚಲು ಕಾರ್ಯಾಚರಣೆ ಮುಂದುವರೆದಿದೆ.