ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಭ್ಯತ್ ಮಂಗಲದಲ್ಲಿ ಅಣ್ಣ-ತಮ್ಮನ ಮಧ್ಯೆ ಉಂಟಾದ ಆಸ್ತಿ ವಿವಾದ ಕೊಲೆಯಲ್ಲಿ ಅಂತ್ಯವಾಗಿದೆಯೆಂಬ ಭೀಕರ ಘಟನೆ ನಡೆದಿದೆ.
ಮೃತ ವ್ಯಕ್ತಿ ಕೊಳಂಬೆ ವಿನು ಬೆಳ್ಯಪ್ಪ (ವಯಸ್ಸು 53) ಆಗಿದ್ದು, ಆರೋಪಿಯಾಗಿರುವ ಅಣ್ಣನ ಹೆಸರು ಮಣಿ. ಅಭ್ಯತ್ ಮಂಗಲದ ತೋಟದ ಗೋದಾಮಿನಲ್ಲಿ ಘಟನೆ ನಡೆದಿದೆ.
ವಿನು ಬೆಳ್ಯಪ್ಪ ಪೈಪುಗಳ ಪರಿಶೀಲನೆಗಾಗಿ ತೋಟದ ಗೋದಾಮಿಗೆ ತೆರಳಿದ್ದ ಸಂದರ್ಭ, ಹಿಂದಿನಿಂದ ಬಂದ ಮಣಿ ತನ್ನ ತಮ್ಮನಿಗೆ ಏಕಾಏಕಿ ಗುಂಡು ಹಾರಿಸಿದ್ದಾನೆ. ಈ ಹಠಾತ್ ದಾಳಿಯಿಂದ ವಿನು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಇದನ್ನು ಓದಿ –ಸಿಎಂ ಗೆ ಅವಹೇಳನ: ಪೇದೆ ಅಮಾನತು
ಘಟನೆ ಬಳಿಕ ಮಣಿ ಪರಾರಿಯಾಗಲು ಯತ್ನಿಸಿದ್ದರೂ ಪೊಲೀಸರು ಆತನ್ನ ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.