ಬೆಂಗಳೂರು: ನಗರದಲ್ಲಿ ಸಿಸಿಬಿ (ಸೆಂಟ್ರಲ್ ಕ್ರೈಮ್ ಬ್ರಾಂಚ್) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ವೀಸಾ ಅವಧಿ ಮೀರಿದಂತೆ ಅಕ್ರಮವಾಗಿ ವಾಸವಿದ್ದ ಒಟ್ಟು 9 ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ನೈಜೀರಿಯಾದ ನಾಲ್ವರು, ಘಾನಾದ ಇಬ್ಬರು ಮತ್ತು ಸುಡಾನ್ನ ಒಬ್ಬರನ್ನು ಒಳಗೊಂಡಿದ್ದಾರೆ. ಈ ವಿದೇಶಿಗರು ಬೆಂಗಳೂರಿನಲ್ಲಿ ವೀಸಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ವಾಸವಿದ್ದು, ಅವರನ್ನು ಸಿಸಿಬಿ ಪೊಲೀಸರು ಗುರುತಿಸಿ ಅರೆಸ್ಟ್ ಮಾಡಿದ್ದಾರೆ.
ಅವರನ್ನು ತಕ್ಷಣವೇ ಡಿಟೆನ್ಷನ್ ಸೆಂಟರ್‌ಗೆ ಕಳುಹಿಸಲಾಗಿದ್ದು, ಹಿಮ್ಮೆಟ್ಟಿಸುವ (ಡಿಪೋರ್ಟ್) ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನು ಓದಿ – 1.25 ಲಕ್ಷ ಲಂಚ ಪಡೆಯುತ್ತಿದ್ದ ಮಹಿಳಾ PSI ಲೋಕಾಯುಕ್ತ ಬಲೆಗೆ
ಈ ಕಾರ್ಯಾಚರಣೆ ವಿದೇಶಿಗರ ಅಕ್ರಮ ವಾಸವಾಸದ ವಿರುದ್ಧ ಸಿಸಿಬಿಯ ಕಟ್ಟುನಿಟ್ಟಾದ ನಿಗಾ ಮತ್ತು ಕ್ರಮಕ್ಕೆ ಉದಾಹರಣೆಯಾಗಿದೆ.