- ಇತಿಹಾಸ ಸೃಷ್ಟಿಸಿದ ಭಾರತೀಯ ಷೇರು ಮಾರುಕಟ್ಟೆ!
ಮುಂಬೈ:ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಇತಿಹಾಸ ಸೃಷ್ಟಿಸಿದೆ.
2021ರ ಫೆಬ್ರವರಿ ನಂತರ ಒಂದೇ ದಿನದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಅತಿದೊಡ್ಡ ಏರಿಕೆಯನ್ನು ದಾಖಲಿಸಿವೆ.
ಎರಡೂ ಪ್ರಮುಖ ಸೂಚ್ಯಂಕಗಳು ಸುಮಾರು 4 ಪ್ರತಿಶತದಷ್ಟು ಜಿಗಿತವನ್ನು ಕಂಡಿದ್ದು ಈ ಏರಿಕೆಯಿಂದಾಗಿ ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತು ದಾಖಲೆಯ 16 ಲಕ್ಷ ಕೋಟಿ ರೂ.ಗಳಷ್ಟು ಏರಿಕೆಯಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದ, ಅಮೆರಿಕ-ಚೀನಾ ವ್ಯಾಪಾರ ಮಾತುಕತೆಯಲ್ಲಿ ಪ್ರಗತಿ ಮತ್ತು ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಭಾವ್ಯ ಒಪ್ಪಂದದ ಸುದ್ದಿಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕತೆಯನ್ನು ತಂದಿವೆ.
ಈ ಬೆಳವಣಿಗೆಗಳು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳನ್ನು ಕಡಿಮೆ ಮಾಡಿ ಹೂಡಿಕೆದಾರರ ವಿಶ್ವಾಸವನ್ನು ಪುನರುಜ್ಜೀವನಗೊಳಿಸಿವೆ.
ಸೆನ್ಸೆಕ್ಸ್-ನಿಫ್ಟಿ ‘ಒಂದು ದಿನದ ಅತ್ಯುತ್ತಮ ಪ್ರದರ್ಶನ’ ನೀಡಿದೆ. ಸೆನ್ಸೆಕ್ಸ್ 2,975 ಅಂಕಗಳ ಏರಿಕೆಯೊಂದಿಗೆ 82,430ಕ್ಕೆ ಮುಕ್ತಾಯವಾಯಿತು.ಇದನ್ನು ಓದಿ –ಸರ್ವಪಕ್ಷ ಸಭೆ ಮಾಡಿ ಕದನ ವಿರಾಮ ಘೋಷಣೆ ಮಾಡಬೇಕಿತ್ತು: ಸಿಎಂ ಸಿದ್ದರಾಮಯ್ಯ
ನಿಫ್ಟಿ 917 ಅಂಕಗಳ ಜಿಗಿತವನ್ನು ಸಾಧಿಸಿ 24,925ಕ್ಕೆ ತಲುಪಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಶೇಕಡಾವಾರು ಲೆಕ್ಕದಲ್ಲಿ ಇದು ಎರಡನೇ ಅತಿದೊಡ್ಡ ಲಾಭವಾಗಿದೆ. ಇದಕ್ಕೂ ಮೊದಲು 2021ರ ಫೆಬ್ರವರಿ 1ರಂದು ಎರಡೂ ಸೂಚ್ಯಂಕಗಳು ಶೇಕಡಾ 4.7ಕ್ಕಿಂತ ಹೆಚ್ಚಿನ ಏರಿಕೆಯನ್ನು ದಾಖಲಿಸಿದ್ದವು.