By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
    Politics
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Articles
    ArticlesShow More
    “ಆರೋಗ್ಯ, ಆಧ್ಯಾತ್ಮದ ಮೂಲ ಯೋಗ”
    June 21, 2025
    ಯೋಗಾ ಯೋಗ..
    June 21, 2025
    ವಿಶ್ವ ಸಂಗೀತ ದಿನದ ಶುಭಾಶಯಗಳು
    June 21, 2025
    ಪತಂಜಲಿ: ವ್ಯಾಕರಣ ಮತ್ತು ಯೋಗದ ಯುಗಪುರುಷ
    June 21, 2025
    ನೀಲಿ ಸುಂದರಿ ನೇರಳೆ
    June 17, 2025
  • Sports
  • National
  • International
  • Crime
  • Contact Us
Reading: ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ಅತಿರೇಕ – ಕಠಿಣ ಕ್ರಮ: ಸಚಿವ ಸುಧಾಕರ್
Share
Font ResizerAa
VarthamanVarthaman
  • Home
  • Karnataka
  • Politics
  • Articles
  • Sports
  • National
  • International
  • Crime
  • Contact Us
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
  • Articles
  • Sports
  • National
  • International
  • Crime
  • Contact Us
Follow US
Varthaman > Blog > Karnataka > ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ಅತಿರೇಕ – ಕಠಿಣ ಕ್ರಮ: ಸಚಿವ ಸುಧಾಕರ್
KarnatakaMain NewsPolitics

ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ಅತಿರೇಕ – ಕಠಿಣ ಕ್ರಮ: ಸಚಿವ ಸುಧಾಕರ್

Team Varthaman
Last updated: April 18, 2025 6:37 am
Team Varthaman Published April 18, 2025
Share
SHARE

ಬೆಂಗಳೂರು : ಶಿವಮೊಗ್ಗ ನಗರದ ಕಾಲೇಜೊಂದರಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯ ಜನಿವಾರ ಹಾಗೂ ಕಾಶಿ ದಾರವನ್ನು ಬಿಚ್ಚಿಸಿದ ಘಟನೆ ಕರ್ನಾಟಕದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ನಿಜವೇ ಆದರೆ ಅದು ಅತಿರೇಕದ ವರ್ತನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

Contents
ಬೆಂಗಳೂರು : ಶಿವಮೊಗ್ಗ ನಗರದ ಕಾಲೇಜೊಂದರಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯ ಜನಿವಾರ ಹಾಗೂ ಕಾಶಿ ದಾರವನ್ನು ಬಿಚ್ಚಿಸಿದ ಘಟನೆ ಕರ್ನಾಟಕದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.ಕ್ರಮಕ್ಕೆ ಸೂಚಿಸುತ್ತೇವೆ: ಮಧು ಬಂಗಾರಪ್ಪ
Join WhatsApp Group

ಯಾವುದೇ ಕೇಂದ್ರದಲ್ಲಿ ಆ ರೀತಿ ಆಗಿದ್ದರೆ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಎಲ್ಲಾ ಜಾತಿ, ಧರ್ಮಗಳ ಆಚರಣೆ ಸಂಪ್ರದಾಯಕ್ಕೆ ಗೌರವ ಕೊಡಬೇಕು. ನಾನು ಈ ರೀತಿಯ ಘಟನೆಗಳಿಗೆಲ್ಲ ಪ್ರೋತ್ಸಾಹ ಕೊಡುವುದಿಲ್ಲ. ಘಟನೆ ಸಂಬಂಧ ಅಧಿಕಾರಿಗಳ ಬಳಿ ವರದಿ ಪಡೆದು, ಮುಂದೆ ಏನು ಮಾಡಬಹುದು ಎಂದು ಯೋಚಿಸುತ್ತೇನೆ. ಆ ರೀತಿ ಆಗಿದ್ದು ಸತ್ಯವೇ ಆದರೆ ಇನ್ನೊಮ್ಮೆ ಪರಿಶೀಲನೆ ಮಾಡುತ್ತೇನೆ. ಆಯ್ದ ವಿಚಾರ ಎತ್ತಿಕೊಂಡು ರಾಜಕೀಯ ಲಾಭ ಮಾಡುವುದಲ್ಲ. ಯಾವುದೇ ಸಮುದಾಯವನ್ನು ನೋವಿಸುವ ಉದ್ದೇಶ ನಮ್ಮದಲ್ಲ ಎಂದು ಸುಧಾಕರ್ ಬೆಂಗಳೂರಿನಲ್ಲಿ ಹೇಳಿದ್ದಾರೆ.

ಕ್ರಮಕ್ಕೆ ಸೂಚಿಸುತ್ತೇವೆ: ಮಧು ಬಂಗಾರಪ್ಪ

ಸಿಇಟಿ ಬರೆಯಲು ಬಂದಿದ್ದ ಅಭ್ಯರ್ಥಿ ಜನಿವಾರ ತೆಗೆಸಿದ ಆರೋಪ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ಮೂಲಕ ವಿಚಾರ ತಿಳಿದುಕೊಂಡಿದ್ದೇವೆ. ಈ ಬಗ್ಗೆ ನಿರ್ದೇಶನ ಕೊಡುವ ಅಧಿಕಾರ ಯಾವ ಅಧಿಕಾರಿಗೂ ಇಲ್ಲ. ಈ ರೀತಿ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಈ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ, ಹಾಗಾಗಿ ಸಂಬಂಧಪಟ್ಟ ಇಲಾಖೆ ಜತೆ ಚರ್ಚಿಸುವೆ. ಈ ಘಟನೆ ನನ್ನ ಜಿಲ್ಲೆಯಲ್ಲಿ ಆಗಿರುವುದರಿಂದ ಕ್ರಮಕ್ಕೆ ಸೂಚನೆ ನೀಡುತ್ತೇವೆ. ವಿದ್ಯಾರ್ಥಿಗಳ ವಿಚಾರದಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

  • KRS ಜಲಾಶಯ ಬಹುಮಟ್ಟಿಗೆ ಭರ್ತಿ: ನೀರು ಬಿಡುಗಡೆ ಸಾಧ್ಯತೆ
    by Team Varthaman
    June 23, 2025
    ಮಂಡ್ಯ: ಕೃಷ್ಣರಾಜಸಾಗರ (ಕೆ.ಆರ್.ಎಸ್) ಜಲಾಶಯದ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ,… Read more: KRS ಜಲಾಶಯ ಬಹುಮಟ್ಟಿಗೆ ಭರ್ತಿ: ನೀರು ಬಿಡುಗಡೆ ಸಾಧ್ಯತೆ
  • ವಂಚನೆ ಪ್ರಕರಣ: ಐಶ್ವರ್ಯಾ ಗೌಡಗೆ ಇಡಿಯಿಂದ ಬಿಗ್ ಶಾಕ್
    by Team Varthaman
    June 23, 2025
    ಬೆಂಗಳೂರು: ವಂಚನೆ ಆರೋಪದ ಮೇಲೆ ಐಶ್ವರ್ಯಾ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ (ED)… Read more: ವಂಚನೆ ಪ್ರಕರಣ: ಐಶ್ವರ್ಯಾ ಗೌಡಗೆ ಇಡಿಯಿಂದ ಬಿಗ್ ಶಾಕ್
  • ಇರಾನ್ vs ಇಸ್ರೇಲ್: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಆತಂಕ
    by Team Varthaman
    June 23, 2025
    ನವದೆಹಲಿ:ಇಸ್ರೇಲ್‌ ಮತ್ತು ಇರಾನ್‌ ನಡುವಿನ ತೀವ್ರ ಯುದ್ಧಭೀತಿಯ ಮಧ್ಯೆ, ಇರಾನ್ ಮಹತ್ವದ ತೀರ್ಮಾನವೊಂದನ್ನು… Read more: ಇರಾನ್ vs ಇಸ್ರೇಲ್: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಆತಂಕ
  • ಜೂನ್ 23ರಿಂದ 28ರ ವರೆಗೆ ಭಾರೀ ಮಳೆಯ ಎಚ್ಚರಿಕೆ
    by Team Varthaman
    June 23, 2025
    ಬೆಂಗಳೂರು: ದೇಶದಾದ್ಯಂತ ಮುಂಗಾರು ಚುರುಕು ಪಡೆದುಕೊಂಡಿರುವುದರಿಂದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಈ… Read more: ಜೂನ್ 23ರಿಂದ 28ರ ವರೆಗೆ ಭಾರೀ ಮಳೆಯ ಎಚ್ಚರಿಕೆ
  • ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಮುಖ ಗುರುತು ಆಧಾರಿತ ‘AI’ ಹಾಜರಾತಿ ಪ್ರಾರಂಭ
    by Team Varthaman
    June 23, 2025
    ಬೆಂಗಳೂರು:ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿಗಳ ಹಾಜರಾತಿಗಾಗಿ… Read more: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಮುಖ ಗುರುತು ಆಧಾರಿತ ‘AI’ ಹಾಜರಾತಿ ಪ್ರಾರಂಭ

ಕರ್ನಾಟಕ ಬಂದ್ – ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಪೊಲೀಸ್ ವಶಕ್ಕೆ.!

ಎಂಕೆ ಹಾಸ್ಟೆಲ್‌ ಗೆ ವಕ್ಫ್‌ ಮಂಡಳಿ ನೋಟಿಸ್‌ಗೆ ಆಕ್ರೋಶ

ಮಂಡ್ಯ ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಹೆಚ್.ಡಿ. ರೇವಣ್ಣ: ಸಚಿವ ಚಲುವರಾಯಸ್ವಾಮಿ

ತೆರೆದ ವಾಹನ ಮೆರವಣಿಗೆ ಇರಲ್ಲ:ಆರ್‌ಸಿಬಿ ವಿಜೇತರಿಗೆ ವಿಧಾನಸೌಧದಲ್ಲಿ ಮಾತ್ರ ಅಭಿನಂದನೆ

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಸಂಪೂರ್ಣ ನಿಷೇಧ

Share This Article
Facebook Email Print
Leave a comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaPoliticsTrending

ಸರ್ಕಾರದ ವಿರುದ್ದ ತಿರುಗಿ ಬಿದ್ದ ಲಾರಿ ಮಾಲೀಕರು : ರಾಜ್ಯದಲ್ಲಿ ಲಾರಿ ಸಂಚಾರಸ್ಥಬ್ಧ

Team Varthaman Team Varthaman April 14, 2025
ಪಾಕಿಸ್ತಾನ ಕ್ಷಿಪಣಿ ದಾಳಿಯ ಬೆನ್ನಲ್ಲೇ ಭಾರತದಲ್ಲಿ 24 ವಿಮಾನ ನಿಲ್ದಾಣಗಳು ತಾತ್ಕಾಲಿಕ ಬಂದ್
ಮುಡಾ ಹಗರಣ: ₹100 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ಏಕಕಾಲಕ್ಕೆ 11 ಸಬ್‌ ರಿಜಿಸ್ಟರ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಜಾತಿ ಜನಗಣತಿ : ಸಿಎಂಗೆ ಬಿಸಿತುಪ್ಪ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • National News
  • Politics
  • IPL 2025
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?