ಜಮ್ಮು ಕಾಶ್ಮೀರ, ಜೂನ್ 5: ವಿಶ್ವದ ಅತ್ಯಂತ ಎತ್ತರದ ರೈಲ್ವೇ ಕಮಾನು ಸೇತುವೆಯಾಗಿರುವ ಚೆನಾಬ್ ಬ್ರಿಡ್ಜ್ ನಾಳೆ ಲೋಕಾರ್ಪಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಮ್ಮು ಕಾಶ್ಮೀರಕ್ಕೆ ಶುಕ್ರವಾರ ಭೇಟಿ ನೀಡುತ್ತಿದ್ದಾರೆ.
ಈ ಭೇಟಿಯ ವೇಳೆ ಸುಮಾರು ₹46,000 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅವರು ಲೋಕಾರ್ಪಣೆ ಹಾಗೂ ಶಿಲಾನ್ಯಾಸ ಮಾಡಲಿದ್ದಾರೆ.
ಪ್ರಮುಖ ಯೋಜನೆಗಳು:
- ದೇಶದ ಮೊದಲ ಕೇಬಲ್ ಆಧಾರಿತ ರೈಲ್ವೇ ಸೇತುವೆ ಅಂಜಿ ಬ್ರಿಡ್ಜ್ ಉದ್ಘಾಟನೆ
- ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಲಿಂಕ್ ಯೋಜನೆಯ ಉದ್ಘಾಟನೆ
- ವೈಷ್ಣೋದೇವಿ ಕಟ್ರಾ-ಶ್ರೀನಗರ ನಡುವೆ ಸಾಗುವ ವಂದೇ ಭಾರತ್ ರೈಲಿಗೆ ಹಸುರು ನಿಶಾನೆ
ಚೆನಾಬ್ ಸೇತುವೆ ವೈಶಿಷ್ಟ್ಯಗಳು:
- ನದಿಯಿಂದ ಮೇಲಕ್ಕೆ ಸೇತುವೆಯ ಎತ್ತರ: 359 ಮೀಟರ್ (1,179 ಅಡಿ)
- ಐಫೆಲ್ ಟವರ್ಗಿಂತ 35 ಮೀಟರ್ ಹೆಚ್ಚು ಎತ್ತರ
- ಸೇತುವೆಯ ಒಟ್ಟು ಉದ್ದ: 1,315 ಮೀಟರ್
- ನಿರ್ಮಾಣಕ್ಕೆ ಬಳಸಿದ ಉಕ್ಕು: 28,000 ಟನ್ಕ್ಕೂ ಅಧಿಕ
- ಕಾಂಕ್ರೀಟ್ ಬಳಕೆ: 66,000 ಕ್ಯೂಬಿಕ್ ಮೀಟರ್
- ಒಟ್ಟು ವೆಚ್ಚ: ₹1,486 ಕೋಟಿ
ಈ ಸೇತುವೆ ಜಮ್ಮು ಮತ್ತು ಶ್ರೀನಗರ ನಡುವಿನ ಪ್ರಯಾಣದ ಅವಧಿಯನ್ನು 2 ರಿಂದ 3 ಗಂಟೆಗಳವರೆಗೆ ಕಡಿಮೆಗೊಳಿಸಿ, ಸುಮಾರು 3 ಗಂಟೆಗಳೊಳಗೆ ಈ ದೂರವನ್ನು ತಲುಪುವಂತಾಗಲಿದೆ.ಇದನ್ನು ಓದಿ –ಬೆಂಗಳೂರಿನಲ್ಲಿಆರ್ ಸಿ ಬಿ ಸಂಭ್ರಮಾಚರಣೆ: 7 ಮಂದಿ ಕಾಲು ತುಳಿತಕ್ಕೆ ಬಲಿ
ಇದರಿಂದಾಗಿ ಕಾಶ್ಮೀರದ ಸಂಪರ್ಕ ಮೂಲಸೌಕರ್ಯದಲ್ಲಿ ಮಹತ್ವಪೂರ್ಣ ಬದಲಾವಣೆ ತರಲಿದೆ ಎಂದು ನಿರೀಕ್ಷಿಸಲಾಗಿದೆ.