ಮೈಸೂರು: ಕೆ.ಆರ್.ನಗರಕ್ಕೆ ನಾನು ತಂದ ಅನುದಾನಕ್ಕೆ ಸಿಎಂ ಸಿದ್ದರಾಮಯ್ಯ ಗುದ್ದಲಿ ಪೂಜೆ ಮಾಡಿದ್ದಾರೆಯೇ ಹೊರತು ಕೆ.ಆರ್.ನಗರಕ್ಕೆ ಯಾವುದೇ ಅನುದಾನ ನೀಡಿಲ್ಲ ಎಂದು ಮಾಜಿ ಸಚಿವ ಸಾರಾ ಮಹೇಶ್ ವಾಗ್ದಾಳಿ ನಡೆಸಿದರು.
ಮೈಸೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. 515 ಕೋಟಿ ಅನುದಾನದಲ್ಲಿ 215 ಕೋಟಿ ನಾನು ಶಾಸಕನಾಗಿದ್ದಾಗ ತಂದಿರೋದು. ಈಗ ಗುದ್ದಲಿ ಪೂಜೆ ಮಾಡಿರುವ ಕಾರ್ಯಕ್ರಮ ಅದು 235 ಕೋಟಿಗೆ ಟೆಂಡರ್ ಕೂಡ ಆಗಿಲ್ಲ. ಈಗ ಟೆಂಡರ್ ಆಗಿರೋದು 20 ಕೋಟಿಗೆ, ಇದರ ಗುದ್ದಲಿ ಪೂಜೆ ಮಾಡೋಕೆ ಹೆಲಿಕಾಪ್ಟರ್ ಅಲ್ಲಿ ಬಂದರೂ ಎಂದು ಕಿಡಿಕಾರಿದರು.
ಜನ ನನಗೆ ವಿಶ್ರಾಂತಿ ಕೊಟ್ಟಿದ್ದಾರೆ. ಮೊನ್ನೆ ಸಿಎಂ ಕೆ.ಆರ್.ನಗರಕ್ಕೆ ಅನುದಾನ ಕೊಡಲು ಹೋಗಿದ್ದರು. ಅದಕ್ಕೂ ಹಿಂದೆ ಸಾ.ರಾ ಮಹೇಶ್ ಪಾಪದ ಕೊಡ ತುಂಬಿದೆ ಅಂದರು. ಸೋತವರೆಲ್ಲರ ಪಾಪದ ಕೊಡ ತುಂಬಿದೆ ಅಂದರೆ ಸಿದ್ದರಾಮಯ್ಯ ಎಷ್ಟು ಬಾರಿ ಸೋತಿದ್ದಾರೆ. ಅವರ ಪಾಪದ ಕೊಡ ತುಂಬಿದೆಯಾ? ಈಗ ಕೆ.ಆರ್.ನಗರದಲ್ಲಿ ನಾನು ತಂದ ಯೋಜನೆಗಳಿನ್ನು ಸಿಎಂ ಉದ್ಘಾಟನೆ ಮಾಡಿದ್ದಾರೆ ಎಂದರು.
ಬೆಲೆ ಏರಿಕೆ ಇವರ ಸಾಧನೆ: ರಾಜ್ಯದಲ್ಲಿ ಎಲ್ಲದರ ಬೆಲೆ ಏರಿಕೆ ಆಯ್ತು. ಡೀಸೆಲ್, ಪೆಟ್ರೋಲ್, ಲಿಕ್ಕರ್ ಸೇರಿ ಬಿಲ್ ಎಲ್ಲವೂ ಜಾಸ್ತಿ ಆಯ್ತು. ಹಾಲಿನಿಂದ ಆಲ್ಕೋಹಾಲ್ ತನಕ ಜಾಸ್ತಿ ಮಾಡಿದ್ದು ಸಿದ್ದರಾಮಯ್ಯ. 20 ವರ್ಷ ಮನೆ ಮನೆಗೆ ಹೋಗಿ ಕ್ಷೇತ್ರದ ಅಭಿವೃದ್ದಿ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅವರನ್ನು ಅಂದು ದೇವೇಗೌಡರು ಹಣಕಾಸು ಸಚಿವನಾಗಿ ಮಾಡಿದ್ದರು. ಅವರನ್ನು ಜಾತಿವಾದಿ ಅಂತ ಹೇಳಿದ್ದೀರಾ. ನೀವು ಸಮಾಜವಾದಿ ನಾಯಕನಾ ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಒಟ್ಟು ಸಾಲ 7 ಲಕ್ಷ 81 ಸಾವಿರ 95 ಕೋಟಿ. ಇದರಲ್ಲಿ 4 ಲಕ್ಷದ 95 ಸಾವಿರ ಕೋಟಿ ಸಿಎಂ ಸಿದ್ದರಾಮಯ್ಯ ಒಬ್ಬರೇ ಸಾಲ ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ಚರ್ಚೆ ಮಾಡೋಣ ಬನ್ನಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಅವರು ಸಮಾಜವಾದಿ ನಾಯಕನಾ? ಸಿದ್ದರಾಮಯ್ಯ ಅವರೆ ನಿಮ್ಮ ನಿಲುವು ಎಲ್ಲರಿಗೂ ಗೊತ್ತಿದೆ. ಮೈಸೂರು ಜಿಲ್ಲೆಯಲ್ಲಿ ಕ್ರೈಮ್ ರೇಟ್ ಜಾಸ್ತಿ ವಿಚಾರ ನಾನು ಈಗಾಗಲೇ ಹೇಳಿದ್ದೇನೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು 2 ವರ್ಷ ಆಯ್ತು. ಜನರಿಗೆ ಒಂದೇ ಒಂದು ಸೂರು ಕೊಟ್ಟಿಲ್ಲ. ಸಾಲ ಮಾಡೋಕೆ ಇಷ್ಟು ವರ್ಷದ ಅನುಭವ ಬೇಕಾ ಎಂದು ಪ್ರಶ್ನಿಸಿದರು.
ಈ ಹಿಂದೆ ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ ಯದುವೀರ್ ಅವರನ್ನು ಪ್ರವಾಸೋದ್ಯಮ ರಾಯಭಾರಿ ಮಾಡಿದ್ದೆವು. ಆಗ ಅವರು ರಾಜಕೀಯಕ್ಕೆ ಬಂದಿರಲಿಲ್ಲ. ಯದುವಂಶದ ಕೊಡುಗೆ ಸಮಾಜಕ್ಕೆ ಕೊಡುಗೆ ಅಪಾರ ಅಂತ ಅವರನ್ನು ಮಾಡಿದ್ದೆವು. ಈಗ ತಮನ್ನಾ ಅವರನ್ನು ಯಾಕೆ ರಾಯಭಾರಿ ಮಾಡಿದ್ದಾರೋ ಗೊತ್ತಿಲ್ಲ. ಬದಲಾವಣೆ ಮಾಡಿ ಅಂತ ಎಲ್ಲರೂ ಹೇಳುತ್ತಿದ್ದಾರೆ. ಇದನ್ನು ಓದಿ –ಬಿಜೆಪಿಯಿಂದ ಎಸ್ ಟಿ ಸೋಮಶೇಖರ್ , ಶಿವರಾಂ ಹೆಬ್ಬಾರ ಉಚ್ಛಾಟನೆ
ಕಲ್ಪನಾ ಚಾವ್ಲಾ ರೀತಿ ಸಾಧನೆ ಮಾಡಿರೋರು ತುಂಬಾ ಜನ ಇದ್ದಾರೆ. ಅಂಥವರನ್ನು ರಾಯಭಾರಿ ಮಾಡಿ. ತಮನ್ನಾ ಅವರನ್ನು ಬದಲಾವಣೆ ಮಾಡಿ ಎಂದು ಆಗ್ರಹಿಸಿದರು. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಮೇಯರ್ ಲಿಂಗಪ್ಪ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ನಗರಪಾಲಿಕೆ ಮಾಜಿ ಸದಸ್ಯ ಎಸ್ ಬಿಎಂ ಮಂಜು ಇನ್ನಿತರರು ಉಪಸ್ಥಿತರಿದ್ದರು.