ಮೈಸೂರು: ಹಿರಿಯ ಸಾಹಿತಿ ಡಾ.ಸಿಪಿಕೆ ಅವರ ಪತ್ನಿ ಎಚ್.ಕೆ.ಶಾರದಾ (81) ಭಾನುವಾರ ಸಂಜೆ ಅನಾರೋಗ್ಯದಿಂದ ನಗರದ ಜಯಲಕ್ಷ್ಮಿಪುರಂನ ಬೃಂದಾವನ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಪತಿ ಸಿಪಿಕೆ, ಪುತ್ರ ಬೃಂದಾವನ ಆಸ್ಪತ್ರೆಯ ಡಾ.ಸಿ.ಕೆ.ಶ್ರೀಹರ್ಷ ಹಾಗೂ ಮೂವರು ಪುತ್ರಿಯರು ಇದ್ದಾರೆ.
ಅನಾರೋಗ್ಯ ಕಾರಣಕ್ಕೆ ಹತ್ತು ದಿನಗಳ ಹಿಂದೆ ಶಾರದಾ ಅವರನ್ನು ಜಯಲಕ್ಷ್ಮಿಪುರಂನ ಬೃಂದಾವನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ಅಂತ್ಯಕ್ರಿಯೆ ಸೋಮವಾರ (ಮಾಚ್೯ 16) ಬೆಳಿಗ್ಗೆ 11 ಗಂಟೆಗೆ ಗೋಕುಲಂನ ಚಿರಧಾಮದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.








