ದಿಶೆ ದಿಶೆಯಲ್ಲಿಯೂ ದಶಮಿಯ ಸಡಗರ.ಹಿಂದೂ ಧರ್ಮದಲ್ಲಿ ನಾರಿಶಕ್ತಿ ಪ್ರತೀಕ ದಸರಾ ದುಷ್ಟರನ್ನ ಶಿಕ್ಷಿಸಲು ಶಿಷ್ಟರನ್ನು ರಕ್ಷಿಸಲು ನವದುರ್ಗೆಯ ಅವತಾರಗಳ ವೈಭವ.ಶಕ್ತಿ ಸ್ವರೂಪಿಣಿ ನವದುರ್ಗೆಯನ್ನ ವಿಶೇಷವಾಗಿ ಆರಾಧಿಸುವ ಹಬ್ಬ.
“ನವ ಶಕ್ತಿ” ಎಂದರೆ ಶಕ್ತಿಯ ದೇವಿ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಸೂಚಿಸುತ್ತದೆ, ಅವುಗಳನ್ನು ನವ ದುರ್ಗಾ ಎಂದೂ ಕರೆಯಲಾಗುತ್ತದೆ.
ನವರಾತ್ರಿಯ ಸಮಯದಲ್ಲಿ ಈ ಒಂಬತ್ತು ರೂಪಗಳನ್ನು, ಅಂದರೆ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ, ಪೂಜಿಸಲಾಗುತ್ತದೆ.
ನವದುರ್ಗೆಯ ಅವತಾಗಳು ಹಾಗೂ ಮಹತ್ವ
- ಶೈಲಪುತ್ರಿ: ಪರ್ವತ ರಾಜ ಹಿಮಾಲಯನ ಪುತ್ರಿ, ಶಕ್ತಿಯ ಮೊದಲ ರೂಪ.
- ಬ್ರಹ್ಮಚಾರಿಣಿ: ಬ್ರಹ್ಮಚರ್ಯ ವ್ರತವನ್ನು ಆಚರಿಸುವ ಶಕ್ತಿಯ ರೂಪ.
- ಚಂದ್ರಘಂಟಾ: ಗಂಟೆಯ ಆಕಾರದ ಅರ್ಧಚಂದ್ರಾಕೃತಿಯನ್ನು ಹೊಂದಿರುವ ದುರ್ಗೆಯ ರೂಪ.
- ಕೂಷ್ಮಾಂಡಾ: ಬ್ರಹ್ಮಾಂಡವನ್ನು ಸೃಷ್ಟಿಸಿದ ದುರ್ಗೆಯ ರೂಪ.
- ಸ್ಕಂದಮಾತಾ: ಸುಬ್ರಹ್ಮಣ್ಯನ (ಸ್ಕಂದನ) ತಾಯಿ, ಜ್ಞಾನ ಮತ್ತು ತಾಯಿತನದ ಸಂಕೇತ.
- ಕಾತ್ಯಾಯಿನಿ: ಋಷಿ ಕಾತ್ಯಾಯನರಿಂದ ಹುಟ್ಟಿದ ದೇವಿಯ ರೂಪ, ಶಕ್ತಿಯ ರೂಪಾಂತರ.
- ಕಾಳರಾತ್ರಿ: ಕಪ್ಪು ಬಣ್ಣದ ರೂಪ, ಅಜ್ಞಾನವನ್ನು ನಿವಾರಿಸುವ ಶಕ್ತಿ.
- ಮಹಾಗೌರಿ: ಶುದ್ಧತೆ ಮತ್ತು ಶಾಂತತೆಯ ಸಂಕೇತ.
- ಸಿದ್ಧಿಧಾತ್ರಿ: ಎಲ್ಲಾ ರೀತಿಯ ಸಿದ್ಧಿಗಳನ್ನು ಕರುಣಿಸುವ ಶಕ್ತಿಯ ರೂಪ.
ಈ ಒಂಬತ್ತು ರೂಪಗಳು ನವರಾತ್ರಿ ಹಬ್ಬದ ಸಂದರ್ಭದಲ್ಲಿ ಆಚರಿಸಲ್ಪಡುತ್ತವೆ,ಶಕ್ತಿ ಸ್ವರೂಪಿಣಿ ನವದುರ್ಗೆಯನ್ನು ಪೂಜಿಸುತ್ತೆವೆ.ಇತ್ತಿಚಿಗೆ ಹಬ್ಬ ಎಂದರೆ ಅದೊಂದು ಟ್ರೆಂಡ್ ಆಗಿದೆ ನೆನಪಿರಲಿ ಬಣ್ಣ ಬಣ್ಣದ ಸೀರೆಗೆ ಮಾತ್ರ ಸೀಮಿತವಾಗದಿರಲಿ ದಸರಾ ಜಗತ್ ಜನನಿಯನ್ನು ಪೂಜಿಸುವ ಜೊತೆ ನಮಗೆ ಜನ್ಮ ನೀಡಿವಳನ್ನು ಆರಾಧಿಸೋಣ
ಹಸಿದ ಹೊಟ್ಟೆ ಅನ್ನವನ್ನು ಗೌರವಿಸುವ ಹಾಗೇ ಮನೆಯ ಸದಸ್ಯರೆಲ್ಲರ ಕಾಳಜಿವಹಿಸುವ ಮನೆಯ ಅನ್ನಪೂರ್ಣೆಯನ್ನು ಗೌರವಿಸೋಣ ನಾರಿಶಕ್ತಿಯ ಗುಣಗಾನ ಮಾಡುವ ಜೊತೆ ಹೆಣ್ಣು ಹುಟ್ಟಿತೆಂದು ಗೊಣಗುವುದು ಬಿಡಿ
ಚೆಂದದ ಅಲಂಕಾರದಿಂದ ದೇವಿಯ ಸಿಂಗರಿಸುವುದು ಸಹಜ ಬಾಹ್ಯ ಸೌಂದರ್ಯವೇ ಸರ್ವೊತ್ತವೆಂದು ತಿಳಿಯುವುದು ಅಸಹಜ
ಕಾಳಿಯನ್ನು ಪೂಜಿಸುವ ಮುನ್ನ ಅಂತರಂಗದ ಅಂದ ಕಡೆಗಣಿಸಿ ಹೆಣ್ಣು ಮನಕ್ಕೆ ನೋವ ನೀಡುವದು ಬಿಡಿ
ಹೆಣ್ಣಿಗೆ ಪ್ರತಿ ಹೆಜ್ಜೆಯಲ್ಲೂ ಪರೀಕ್ಷೆಗಳೊಂದು ಕಡೆಯಾದರೆ ಅವಳನ್ನು ನಿಂದನೆಯಲ್ಲೆ ಕೊಂದುಬಿಡುವುದೊಂದು ಹಿಂಸೆ
ಗರ್ಭಾದಲ್ಲಿನ ಹೆಣ್ಣನ್ನ ಕೊಂದು ಗರ್ಭಗುಡಿಯಲ್ಲಿ ದೇವಿಯ ಆರಾಧಿಸುವಲ್ಲಿ ಯಾವ ಅರ್ಥವಿದೆ?
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ” ಎಂದರೆ, “ಯಾವ ಮನೆಯಲ್ಲಿ ಹೆಣ್ಣುಮಕ್ಕಳನ್ನು ಪೂಜಿಸಲಾಗುತ್ತದೋ ಅಥವಾ ಗೌರವಿಸಲಾಗುತ್ತದೋ, ಅಲ್ಲಿ ದೇವತೆಗಳು ನೆಲೆಸುತ್ತಾರೆ” ಎಂಬುದು ಈ ಸಂಸ್ಕೃತ ಶ್ಲೋಕದ ಅರ್ಥವಾಗಿದೆ.
ಈ ಮಾತನ್ನು ಮನುಸ್ಮೃತಿಯಲ್ಲಿ ಹೇಳಲಾಗಿದೆ, ಇದು ಸ್ತ್ರೀಯರ ಗೌರವದ ಮಹತ್ವವನ್ನು ಸಾರುತ್ತದೆ ಮತ್ತು ಯಾವ ಮನೆಯಲ್ಲಿ ಸ್ತ್ರೀಯರಿಗೆ ಗೌರವ ಸಿಗುವುದಿಲ್ಲವೋ, ಅಲ್ಲಿ ಮಾಡುವ ಎಲ್ಲ ಪ್ರಯತ್ನಗಳು ನಿಷ್ಫಲವಾಗುತ್ತವೆ ಎಂದು ತಿಳಿಸುತ್ತದೆ.
ಹೆಣ್ಣು ತನಗಾಗಿ ಜೀವಿಸುವುದಿಲ್ಲ ತನ್ನವರಿಗಾಗಿ ಜೀವಿಸುವಳು ಅದಕ್ಕೆ ಪ್ರತಿಯಾಗಿ ಬೊಗಸೆಯಷ್ಟು ಪ್ರೀತಿ ಗೌರವಕ್ಕಾಗಿ
ಹಾತೋರೆಯುವ ಮನವದು.
ಹೆಣ್ಣನ್ನ ಕೀಳೆಂದು ತಿಳಿಯುವ ಕೀಳು ಮನಸ್ಥಿತಿಗಳು ಇನ್ನೂ ಇವೆ ಮೊದಲು ಶಕ್ತಿ ಸ್ವರೂಪಿಣಿ ನವದುರ್ಗೆಯು ಹೆಣ್ಣೆ ಅಲ್ಲವೇ

ಅಂಜಲಿ ಶ್ರೀನಿವಾಸ








