ಮೈಸೂರು: ನಗರದ ಹೈದರ್ ಅಲಿ ರಸ್ತೆ ಅಗಲಿ ಕರಣದ ನೆಪದಲ್ಲಿ ಸುಮಾರು 40 ಮರಗಳನ್ನು ಕಟಾವು ಮಾಡಿರುವ ಮಹಾನಗರ ಪಾಲಿಕೆಯನ್ನು ಖಂಡಿಸಿ ಎಸ್ಪಿ ಕಚೇರಿ ವೃತದಲ್ಲಿ ಗಂಧದಗುಡಿ ಫೌಂಡೇಶನ್‌ನಿಂದ ಪ್ರತಿಭಟಿಸಲಾಯಿತು.
ಮಹಾನಗರಪಾಲಿಕೆ ವಿರುದ್ಧ ನಾನಾ ಘೋಷಣೆ ಕೂಗಿದ ಪ್ರತಿಭಟನಾಕಾರರು ಪರಿಸರ ಉಳಿಸಿ ಎಂಬಿತ್ಯಾದಿ ನಾಮಫಲಕಗಳನ್ನು ಹಿಡಿದು ಮರ ಕಡಿದ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಇಂತಹ ಅವೈಜ್ಞಾನಿಕ ನಡೆಯ ನಿರ್ಧಾರ ಕೈಗೊಂಡ ಮೈಸೂರು ನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದರು. ಗಂಧದಗುಂಡಿ ಫೌಂಡೇಶನ್ ಅಧ್ಯಕ್ಷ ಅರ್ಯನ್, ಟ್ವಿನ್ಸ್ ಡಿಜಿಟಲ್ ಸೇವಾ ಕೇಂದ್ರದ ಮುಖ್ಯಸ್ಥೆ ಯಶೋಧ ಇನ್ನಿತರರು ಉಪಸ್ಥಿತರಿದ್ದರು.