ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಕೇಳಿಬಂದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ತನಿಖೆ ಮುಂದುವರೆದಿದ್ದು, ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು 11ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯವನ್ನು ಆರಂಭಿಸಿದೆ.
ಈಗಾಗಲೇ ಎಸ್‌ಐಟಿ ಅಧಿಕಾರಿಗಳು 1ರಿಂದ 10ನೇ ಪಾಯಿಂಟ್‌ಗಳ ಜೊತೆಗೆ 12 ಮತ್ತು 13ನೇ ಪಾಯಿಂಟ್‌ಗಳಲ್ಲಿ ಉತ್ಖನನ ಕಾರ್ಯವನ್ನು ನಡೆಸಿದ್ದು, ಕೆಲವು ತಾಣಗಳಲ್ಲಿ ಶಂಕಿತ ಪತ್ತೆಗಳು ನಡೆದಿವೆ.
ವಿಶೇಷವಾಗಿ ದೂರುದಾರರು ತೋರಿಸಿರುವ 6ನೇ ಪಾಯಿಂಟ್‌ನಲ್ಲಿ ಅಸ್ತಿಪಂಜರದ ಕೆಲವು ಮೂಳೆಗಳು ಪತ್ತೆಯಾಗಿದ್ದು, ಅವುಗಳನ್ನು ಹೆಚ್ಚಿನ ತಪಾಸಣೆಗೆ ಎಫ್‌ಎಸ್‌ಎಲ್ (ಫಾರೆನ್ಸಿಕ್ ವಿಜ್ಞಾನ ಪ್ರಯೋಗಾಲಯ) ಗೆ ಕಳುಹಿಸಲಾಗಿದೆ. ಆದರೆ, ಎಫ್‌ಎಸ್‌ಎಲ್ ಅಧಿಕಾರಿಗಳ ಪ್ರಕಾರ, ಈ ಮೂಳೆಗಳ ಡಿಎನ್‌ಎ ಪರೀಕ್ಷೆ ನಡೆಸುವುದು ಬಹಳ ಕಷ್ಟಸಾಧ್ಯವಾಗಿದೆ.
ಕಾರಣವೇನೆಂದರೆ, ಈ ಮೂಳೆಗಳು ಸುಮಾರು 15 ವರ್ಷಗಳ ಹಿಂದೆಯೇ ನೆಲದಲ್ಲಿ ಹೂತಿರುವ ಸಾಧ್ಯತೆ ಇರುವುದರಿಂದ, ಮಣ್ಣಿನಲ್ಲಿರುವ ಲವಣಾಂಶಗಳಿಂದ ಅವುಗಳ ಡಿಎನ್‌ಎ ನಾಶವಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.ಇದನ್ನು ಓದಿ –ಸಾರಿಗೆ ನೌಕರರ ಮುಷ್ಕರ: KSRTC ಬಸ್‌ಗೆ ಕಲ್ಲು ತೂರಾಟ
ಪ್ರಕರಣದ ಗಂಭೀರತೆಯನ್ನು ಮನಗಂಡ ಎಸ್‌ಐಟಿ ಅಧಿಕಾರಿಗಳು ಮುಂದಿನ ತನಿಖೆಯನ್ನು ಮತ್ತಷ್ಟು ಆಳವಾಗಿ ಮುಂದುವರೆಸಿದ್ದಾರೆ.