- ಸೌರ ಫಲಕ ಉಡುಗೊರೆ
ಸೂರತ್: ಏಕದಿನ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಸೂರತ್‌ನ ಉದ್ಯಮಿ ಮತ್ತು ರಾಜ್ಯಸಭಾ ಸದಸ್ಯ ಗೋವಿಂದ್ ಧೋಲಾಕಿಯಾ ವಜ್ರಾಭರಣ ಮತ್ತು ಸೌರ ಫಲಕಗಳನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.
ಶ್ರೀ ರಾಮಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ಹಾಗೂ ಅಧ್ಯಕ್ಷರಾದ ಧೋಲಾಕಿಯಾ ಅವರು, ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ ನಂತರ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರಿಗೆ ಪತ್ರ ಬರೆದು ಈ ಮಾಹಿತಿಯನ್ನು ತಿಳಿಸಿದ್ದಾರೆ.
ಪ್ರತಿಭೆ ಮತ್ತು ಗೆಲುವಿಗೆ ಮೆಚ್ಚುಗೆ
ಅವರು ತಂಡದ ಪ್ರತಿಯೊಬ್ಬ ಸದಸ್ಯೆಗೆ “ಅವರ ಪ್ರತಿಭೆ ಮತ್ತು ಗೆಲುವಿಗೆ ಮೆಚ್ಚುಗೆಯ ಸಂಕೇತವಾಗಿ” ವಜ್ರದ ಆಭರಣವನ್ನು ನೀಡುವ ಉದ್ದೇಶ ವ್ಯಕ್ತಪಡಿಸಿದ್ದಾರೆ. ಜೊತೆಗೆ, “ದೇಶಕ್ಕೆ ಬೆಳಕು ನೀಡಿದವರ ಮನೆಗಳೂ ಬೆಳಗಬೇಕು” ಎಂಬ ಉದ್ದೇಶದಿಂದ ಪ್ರತಿಯೊಬ್ಬ ಆಟಗಾರ್ತಿಯ ಮನೆಗೆ ಸೌರ ಫಲಕಗಳನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದಾರೆ.ಇದನ್ನು ಓದಿ –ಕೆ-ಸೆಟ್ ಪರೀಕ್ಷೆಯಲ್ಲಿ ಕೆಇಎ ಎಡವಟ್ಟು
ಧೈರ್ಯ, ಶಿಸ್ತು ಮತ್ತು ದೃಢಸಂಕಲ್ಪದಿಂದ ಮಹಿಳಾ ಕ್ರಿಕೆಟಿಗರು ಶತಕೋಟಿ ಭಾರತೀಯರ ಹೃದಯ ಗೆದ್ದಿದ್ದಾರೆ ಎಂದು ಧೋಲಾಕಿಯಾ ಪ್ರಶಂಸಿಸಿದ್ದಾರೆ.








