– RCB ಬಗ್ಗೆ ಅನಿಲ್ ಕುಂಬ್ಳೆ ಹಾಸ್ಯಾಸ್ಪದ ಪ್ರತಿಕ್ರಿಯೆ
ಬೆಂಗಳೂರು, ಏಪ್ರಿಲ್ 18, 2025: ಬೆಂಗಳೂರು ನಗರದ ಸದಾಶಿವನಗರದಲ್ಲಿರುವ ಡಿಸಿಎಂ ನಿವಾಸದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗೆಲುವಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪತ್ರಕರ್ತರು “ಈ ಸಲ ಆರ್‌ಸಿಬಿ ಕಪ್ ಗೆಲ್ಲುತ್ತಾ?” ಎಂದು ಕೇಳಿದಾಗ ಕುಂಬ್ಳೆ ನಗುತ್ತಾ ಪ್ರತಿಕ್ರಿಯೆ ನೀಡಿದರು –
“ಅದನ್ನ ಹೇಳಬೇಡಿ! ಹೇಳಿದಾಗೆಲ್ಲ ತೊಂದ್ರೆ ಆಗುತ್ತೆ. ಆದ್ರೆ ಹೌದು, ಈ ಸಲ ಗೆಲ್ಲುವ ನಿರೀಕ್ಷೆ ಇದೆ!”
“ಐಪಿಎಲ್ ಕಳೆದ 18 ವರ್ಷಗಳಿಂದಲೂ ಯಶಸ್ವಿಯಾಗಿ ನಡೆಯುತ್ತಿದೆ. ಈ ಆವೃತ್ತಿಯಲ್ಲಿ ಏನಾಗುತ್ತೆ ನೋಡೋಣ. ಇವತ್ತಿನ ಆರ್‌ಸಿಬಿ ಮ್ಯಾಚ್ ಗೆ ಆಲ್ ದಿ ಬೆಸ್ಟ್ ಹೇಳ್ತೀನಿ.”ಇದನ್ನು ಓದಿ –ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ಅತಿರೇಕ – ಕಠಿಣ ಕ್ರಮ: ಸಚಿವ ಸುಧಾಕರ್
ತಮ್ಮ ಆಟಗಾರ ಜೀವನದ ಕುರಿತಾಗಿ, “ನಾನು ಪಂಜಾಬ್ ಮತ್ತು ಬೆಂಗಳೂರು ಎರಡೂ ತಂಡಗಳಲ್ಲಿ ಆಟವಾಡಿದ್ದೆ. ಅಂದಿಂದಲೇ ಈ ಎರಡು ತಂಡಗಳ ನಡುವಿನ ಸ್ಪರ್ಧೆಯ ಬಗ್ಗೆ ನಿಖರ ಅಭಿಪ್ರಾಯ ಹೇಳೋದು ನನ್ನಿಗೆ ಕಷ್ಟ!” ಎಂದು ಕುಂಬ್ಳೆ ನಗುತ್ತಾ ಹೇಳಿದ್ದಾರೆ.