ಬೆಂಗಳೂರು: ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್, ಅವರ ಪತ್ನಿ ಭಾಗ್ಯಲಕ್ಷ್ಮಿ ಹಾಗೂ ಪುತ್ರ ಪವನ್ ವಿರುದ್ಧ ಸೊಸೆ ಪವಿತ್ರಾ ವರದಕ್ಷಿಣೆ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿರುವ ಘಟನೆ ಬೆಳಕಿಗೆ ಬಂದಿದೆ.
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪವಿತ್ರಾ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ದೂರಿನ ವಿವರ:
ಪವಿತ್ರಾ ಹಾಗೂ ಪವನ್ 2021ರಲ್ಲಿ ಮದುವೆಯಾಗಿದ್ದು, ಪವನ್ ಓದಿರದ ಕಾರಣ ಉದ್ಯೋಗವಿಲ್ಲದೆ ಮನೆಯಲ್ಲೇ ಇದ್ದರು. ಮನೆ ಖರ್ಚು ನಡೆಸಲು ಪವಿತ್ರಾಳೇ ಕೆಲಸ ಮಾಡುತ್ತಿದ್ದರು. ನಂತರ ಪವನ್ “ಕಲಾ ಸಾಮ್ರಾಟ್ ಟೀಂ ಅಕಾಡೆಮಿ” ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಆರಂಭಿಸಲು ಪವಿತ್ರಾಳ ಬಳಿ ಹಣ ಬೇಡಿಕೊಂಡಿದ್ದು, ಅದಕ್ಕಾಗಿ ಅವಳು ತಾಯಿಯ ಆಭರಣಗಳನ್ನು ನೀಡಿದ್ದಾಳೆ. ಆದರೆ ಆ ಇನ್ಸ್ಟಿಟ್ಯೂಟ್ ನಷ್ಟ ಅನುಭವಿಸಿ ಮುಚ್ಚಬೇಕಾದ ಸ್ಥಿತಿ ಬಂದಿದೆ.
ಮದುವೆಯ ವೇಳೆ 1 ಲಕ್ಷ ರೂ. ಮೌಲ್ಯದ ಉಂಗುರ ಹಾಗೂ ಮದುವೆಯ ಎಲ್ಲಾ ಖರ್ಚುಗಳನ್ನು ತಾನೇ ಭರಿಸಿದ್ದೆ ಎಂದು ಪವಿತ್ರಾ ದೂರಿನಲ್ಲಿ ತಿಳಿಸಿದ್ದಾರೆ. ಇದರ ಹೊರತಾಗಿಯೂ ಎಸ್.ನಾರಾಯಣ್ ಹಾಗೂ ಅವರ ಕುಟುಂಬ ಹೆಚ್ಚುವರಿ ಹಣಕ್ಕೆ ಒತ್ತಾಯ ಮಾಡಿದ್ದು, ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ.ಇದನ್ನು ಓದಿ –ಕತಾರ್ ರಾಜಧಾನಿ ದೋಹಾದಲ್ಲಿ ಇಸ್ರೇಲ್ ವಾಯುದಾಳಿ
ಪವಿತ್ರಾ ತಮ್ಮ ಮಗನೊಂದಿಗೆ ಸಂಕಷ್ಟಕ್ಕೆ ಸಿಲುಕಿರುವುದಾಗಿ ತಿಳಿಸಿ, ಭವಿಷ್ಯದಲ್ಲಿ ಏನಾದರೂ ತೊಂದರೆ ಉಂಟಾದರೆ ಅದಕ್ಕೆ ಎಸ್.ನಾರಾಯಣ್ ಮತ್ತು ಅವರ ಕುಟುಂಬವೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.