- ಓರ್ವನ ಬಂಧನ
ಮೈಸೂರು: ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 25 ಕೆಜಿಗೂ ಹೆಚ್ಚು ಸಿಂಥೆಟಿಕ್ ಮಾದಕ ವಸ್ತುಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಹುಣಸೂರು ತಾಲೂಕಿನ ದಾಸನಪುರ–ರತ್ನಪುರಿ ಮಾರ್ಗ ಮಧ್ಯೆ ಇರುವ ತೋಟದಲ್ಲಿ ಈ ಡ್ರಗ್ಸ್ ಸಂಗ್ರಹ ಮಾಡಲಾಗಿದ್ದದ್ದು ಬೆಳಕಿಗೆ ಬಂದಿದೆ.
ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ತೋಟದ ಮಾಲೀಕ ಇರ್ಫಾನ್ ಅವರ ಸ್ಥಳದಲ್ಲಿ ಶೋಧ ನಡೆಸಿದ ವೇಳೆ 25 ಕೆಜಿಗೂ ಅಧಿಕ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿದೆ. ತಕ್ಷಣವೇ ಪೊಲೀಸರು ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದು, ಇರ್ಫಾನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಾರ್ಯಾಚರಣೆ ವೇಳೆ ಇನ್ನೂ ಕೆಲ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.ಇದನ್ನು ಓದಿ –ಬೆಂ–ತಿರುಪತಿ ಮಾರ್ಗದಲ್ಲಿ ಭೀಕರ ಅಪಘಾತ: ಮೂವರ ದುರ್ಮರಣ
ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.








