ಮೈಸೂರು: ಡ್ರಗ್ಸ್ ಬಳಕೆ ಮಾಡುವುದು, ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಡ್ರಗ್ಸ್ ಬಳಕೆಯ ಅಪಾಯ ಕುರಿತು ಯುವಜನತೆಯಲ್ಲಿ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ನಾರ್ಕೋ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ನಾರ್ಕೋಟಿಕ್ ರಿಲೇಟೆಡ್ ಆಗಿ ಬಳಸುವ ಔಷಧಿಗಳ ಮಾರಾಟ ಕುರಿತ ಮಾಹಿತಿಯ ರಿಜಿಸ್ಟರ್ ಅನ್ನು ಮೆಡಿಕಲ್ ಶಾಪ್ ಗಳಲ್ಲಿ ಇಡಬೇಕು. ತಪ್ಪಿದಲ್ಲಿ ಮೆಡಿಕಲ್ ಶಾಪ್ ಗಳ ಮೇಲೆ ಕ್ರಮ ಕೈಗೊಳ್ಳುವುದು ಎಂದರು.
ಮೈಸೂರು ಜಿಲ್ಲೆಯು ಡ್ರಗ್ಸ್ ಬಳಕೆ ಮಾಡುವುದರಲ್ಲಿ ಹೆಚ್ಚು ಇದೆ ಎಂದು ಕೆಟ್ಟ ಹೆಸರು ಬರುತ್ತಿದೆ. ಯುವಕ ಯುವತಿಯರು ಹೆಚ್ಚಾಗಿ ಡ್ರಗ್ ಅಡಿಟ್ ಆಗುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯ ನಿರ್ವಹಿಸಿ ಎಂದು ಸೂಚನೆ ನೀಡಿದರು.ಇದನ್ನು ಓದಿ –ರಾಜ್ಯದಲ್ಲಿ 2.84 ಲಕ್ಷ ಹುದ್ದೆಗಳು ಖಾಲಿ: ಸರ್ಕಾರದ ಮಾಹಿತಿ
ಶಾಲಾ ಕಾಲೇಜು ಕ್ಯಾಂಪಸ್ ಗಲ್ಲಿ ತಪಾಸಣೆ ನಡೆಸಬೇಕು. ಡ್ರಗ್ಸ್ ಬಳಕೆ ಹಾಗೂ ಮಾರಾಟ ಕಂಡು ಬಂದರೆ ಕೂಡಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು. ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಕ್ ತನ್ವೀರ್ ಆಸಿಫ್, ಡಿಸಿಪಿ ಸುಂದರ್ ರಾಜ್ ಸೇರಿ ಇತರರು ಉಪಸ್ಥಿತರಿದ್ದರು.








