ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಸಲ್ಲಿಸಲಾಗುವ ಎಲ್ಲಾ ಅರ್ಜಿಗಳಿಗೆ ಜೂನ್ 16, 2025 ರಿಂದ ಒಟಿಪಿ ಮೂಲಕ ಇ-ಮೇಲ್ ಪರಿಶೀಲನೆ ಪ್ರಕ್ರಿಯೆನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ ಎಂದು ಸೋಮವಾರ ಪ್ರಕಟಿತ ಆದೇಶದಲ್ಲಿ ತಿಳಿಸಲಾಗಿದೆ.
ಈ ಹೊಸ ಕ್ರಮದ ಉದ್ದೇಶ, ಪೋರ್ಟಲ್ನ ಸೈಬರ್ ಭದ್ರತೆ ಹೆಚ್ಚಿಸುವುದು ಮತ್ತು ನಾಗರಿಕರ ಗೌಪ್ಯತೆ ಕಾಪಾಡುವುದು ಎನ್ನಲಾಗಿದೆ. ಸರ್ಕಾರದ ಅಧಿಕೃತ ವೆಬ್ಸೈಟ್ www.rtionline.gov.in ಮೂಲಕ ನಾಗರಿಕರು ಆನ್ಲೈನ್ ಮೂಲಕ RTI ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಇನ್ನು ಮುಂದೆ ಈ ಪೋರ್ಟಲ್ ಮೂಲಕ RTI ಅರ್ಜಿ ಸಲ್ಲಿಸುವ ಪ್ರತಿ ಬಳಕೆದಾರನು ತನ್ನ ಇ-ಮೇಲ್ ಐಡಿಯನ್ನು ಒಟಿಪಿ ಮೂಲಕ ದೃಢೀಕರಿಸಬೇಕು. ಈ ಕ್ರಮವು ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಗೂ ಅನ್ವಯವಾಗಲಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ನಿಯಂತ್ರಣದಲ್ಲಿರುವ ಈ ಪೋರ್ಟಲ್ನಲ್ಲಿ ಪ್ರಕಟಿಸಿದಂತೆ, “ನಾಗರಿಕರ ಡೇಟಾ ಸುರಕ್ಷತೆ ಹಾಗೂ ಖಾಸಗಿತ್ವವನ್ನು ಭದ್ರಗೊಳಿಸಲು ಹಾಗೂ ಸೈಬರ್ ಸುರಕ್ಷತೆ ಮತ್ತಷ್ಟು ಬಲಪಡಿಸಲು ಈ ಕ್ರಮ ಜಾರಿಯಲ್ಲಿರಲಿದೆ” ಎಂದು ಸ್ಪಷ್ಟಪಡಿಸಲಾಗಿದೆ.ಇದನ್ನು ಓದಿ –ಏಕದಿನ ಕ್ರಿಕೆಟ್ಗೆ ಗ್ಲೇನ್ ಮ್ಯಾಕ್ಸ್ವೆಲ್ ವಿದಾಯ
ಈ ಹಂತದಿಂದ RTI ಅರ್ಜಿದಾರರು ತಮ್ಮ ಇಮೇಲ್ ಖಾತೆಯನ್ನು ಒಟಿಪಿ ಮೂಲಕ ದೃಢೀಕರಿಸಿದ ಬಳಿಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.