By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ರೋಹಿತ್ ಶರ್ಮಾ ನಾಯಕನಾಗಿ ಯುಗಾಂತ್ಯ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Sports > ರೋಹಿತ್ ಶರ್ಮಾ ನಾಯಕನಾಗಿ ಯುಗಾಂತ್ಯ
Sports

ರೋಹಿತ್ ಶರ್ಮಾ ನಾಯಕನಾಗಿ ಯುಗಾಂತ್ಯ

Team Varthaman
Last updated: October 4, 2025 6:30 PM
Team Varthaman
Published: October 4, 2025
Share
SHARE
  • ಸುಭ್ಮನ್ ಗಿಲ್ ಏಕದಿನ ತಂಡದ ನಾಯಕ

ಅಕ್ಟೋಬರ್ 19ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ 15 ಸದಸ್ಯರ ತಂಡವನ್ನು ಟೀಂ ಇಂಡಿಯಾ ಆಯ್ಕೆ ಸಮಿತಿ ಘೋಷಣೆ ಮಾಡಿದೆ. ಅಚ್ಚರಿ ಎಂಬಂತೆ ಏಕದಿನ ತಂಡದ ನಾಯಕರಾಗಿದ್ದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಅವರ ಜಾಗಕ್ಕೆ ಯುವ ಆಟಗಾರ ಶುಭಮನ್ ಗಿಲ್ ಅವರನ್ನು ನೇಮಕ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಪಷ್ಟನೆ ನೀಡಿದ್ದಾರೆ.

Join WhatsApp Group

‘ಮೂರು ಮಾದರಿಗಳಿಗೆ ಮೂವರು ನಾಯಕರನ್ನು ಹೊಂದುವುದು ಕಷ್ಟ. ಸದ್ಯಕ್ಕೆ ಏಕದಿನ ಮಾದರಿಯ ಪಂದ್ಯಗಳು ಕೂಡ ಕಡಿಮೆ ಇವೆ. ನಮ್ಮ ಸಂಪೂರ್ಣ ಗಮನ ಮುಂಬರುವ ವಿಶ್ವಕಪ್ ಮೇಲಿದೆ. ಹೀಗಾಗಿ, ಭವಿಷ್ಯದ ನಾಯಕನನ್ನು ರೂಪಿಸುವ ನಿಟ್ಟಿನಲ್ಲಿ ಶುಭಮನ್ ಗಿಲ್‌ಗೆ ಜವಾಬ್ದಾರಿ ನೀಡಿ, ಅವರಿಗೆ ಹೊಂದಿಕೊಳ್ಳಲು ಸಾಕಷ್ಟು ಸಮಯ ನೀಡುವುದು ನಮ್ಮ ಉದ್ದೇಶ‘ – ಅಜಿತ್ ಅಗರ್ಕರ್, ಆಯ್ಕೆ ಸಮಿತಿ ಅಧ್ಯಕ್ಷ ನಾಯಕತ್ವ ಬದಲಾವಣೆಯ ಬಗ್ಗೆ ರೋಹಿತ್ ಅವರಿಗೆ ತಿಳಿಸಲಾಗಿದೆ ಎಂದು ಅಗರ್ಕರ್ ಸ್ಪಷ್ಟಪಡಿಸಿದರು. ಕೊಹ್ಲಿ ಮತ್ತು ರೋಹಿತ್ ಇಬ್ಬರೂ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೌದು. ನನ್ನ ಪ್ರಕಾರ 2027ರ ಏಕದಿನ ವಿಶ್ವಕಪ್‌ ಆಡುತ್ತಾರೆ. ಅದೇ ಕಾರಣಕ್ಕೆ ಅವರನ್ನು ಅಯ್ಕೆ ಮಾಡಲಾಗಿದೆ. ಆದರೆ, ನಾವು ಇಂದು ಅದರ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದರು.

ಇಂದಿನ ಆಯ್ಕೆ 2027ರ ವಿಶ್ವಕಪ್‌ ಯೋಜನೆಯ ಒಂದು ದೊಡ್ಡ ಭಾಗವಾಗಿದೆ ಮತ್ತು ಗಿಲ್‌ ಅವರಿಗೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಸಮಯ ನೀಡಬೇಕು. ಹಾಗಾಗಿ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಅಗರ್ಕರ್ ಸ್ಪಷ್ಟಪಡಿಸಿದರು.ಇದನ್ನು ಓದಿ –ನ. 15ರಿಂದ ಫಾಸ್ಟ್‌ಟ್ಯಾಗ್ ಇಲ್ಲದವರಿಗೆ ಹೊಸ ಟೋಲ್ ನಿಯಮ


ನಾಯಕತ್ವದ ದಾಖಲೆ
ರೋಹಿತ್ ಶರ್ಮಾ 56 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ಅವಧಿಯಲ್ಲಿ 42 ಪಂದ್ಯಗಳನ್ನು ಗೆದ್ದಿದ್ದು, ಕೇವಲ 12 ಪಂದ್ಯಗಳಲ್ಲಿ ಮಾತ್ರ ಸೋತು, ಉಳಿದಂತೆ ಒಂದು ಪಂದ್ಯ ಟೈ ಆಗಿದ್ದು, ಇನ್ನೊಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ರೋಹಿತ್ ಶರ್ಮಾ ಎರಡು ಬಾರಿ ಏಷ್ಯಾಕಪ್ ಗೆದ್ದಿದ್ದಾರೆ. 2018 ಮತ್ತು 2023 ರ ಏಷ್ಯಾಕಪ್ ಪಂದ್ಯಗಳಲ್ಲಿ ಅವರು ತಂಡವನ್ನು ಚಾಂಪಿಯನ್ ಪಟ್ಟಕ್ಕೆ ತಂದುಕೊಟ್ಟಿದ್ದರು. 2025 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೂಡ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದರು. ಇದರಿಂದ 12 ವರ್ಷಗಳ ಬಳಿಕ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತು.

  • ತನು -ಮನ ತಂಪಾಗಿಸೋ ತಂಪು ಬೀಜಗಳು
    by Team Varthaman
    March 21, 2026
  • ಕಿರುಕುಳ ಆರೋಪ: ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ
    by Team Varthaman
    March 21, 2026
  • ಇರಾನ್ ಜೊತೆ ಕದನ ವಿರಾಮ ಇಲ್ಲ: ಟ್ರಂಪ್ ಹೇಳಿಕೆ
    by Team Varthaman
    March 21, 2026
  • ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
    by Team Varthaman
    March 20, 2026
  • RCB ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ
    by Team Varthaman
    March 20, 2026
ವಿಶ್ವಕಪ್ ಗೆದ್ದ ಮಹಿಳಾ ಕ್ರಿಕೆಟಿಗರಿಗೆ ವಜ್ರಾಭರಣ
ಹುಲಿ ಹತ್ಯೆಯ ಆರೋಪಿ ವಶಕ್ಕೆ: ಸಚಿವ ಖಂಡ್ರೆ
ರಾಜ್ಯದ 20 ಜಿಲ್ಲೆಗಳಲ್ಲಿ ಒಂದು ವಾರ ಭಾರೀ ಮಳೆ
ಕರ್ನಾಟಕ SSLC ಪರೀಕ್ಷೆ-2 ಫಲಿತಾಂಶ ಪ್ರಕಟ
ಪತ್ರಕರ್ತ ಶಿವಕುಮಾರ್ ಸೇರಿ ನಾಲ್ವರಿಗೆ ಎಂಎಲ್ ಸಿ ಸ್ಥಾನ
TAGGED:breakingnewscaptainlatestnewsRohit Sharmaರೋಹಿತ್ ಶರ್ಮಾಸುಭ್ಮನ್ ಗಿಲ್
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruTrending

ಕಿರುತೆರೆ ನಟ ಶ್ರೀಧರ್ ನಾಯಕ್ ವಿಧಿವಶ

Team Varthaman
Team Varthaman
May 27, 2025
ಬಿಜೆಪಿ ನಿಲುವಿನ ಬಳಿಕ ಜೆಡಿಎಸ್ ತೀರ್ಮಾನ: ಎಚ್.ಡಿ.ದೇವೇಗೌಡ
ಗ್ರಾಮಪಂಚಾಯಿತಿ ಕಚೇರಿ ಮುಂದೆ ವಾಟರ್ ಮ್ಯಾನ್ ಆತ್ಮಹತ್ಯೆ
ನಿಸ್ವಾರ್ಥ ಜೀವಿ ಜ್ಞಾನದ ಭುವಿ
ಜಮ್ಮು-ಕಾಶ್ಮೀರದಲ್ಲಿ ಭೀಕರ ಮಳೆ, ಪ್ರವಾಹ ಮತ್ತು ಭೂ ಕುಸಿತ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?