By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ಮಹಾಕಾವ್ಯಗಳು ಬದುಕಿನ ಮಾರ್ಗಕ್ಕೆ ದಿಕ್ಸೂಚಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಮಹಾಕಾವ್ಯಗಳು ಬದುಕಿನ ಮಾರ್ಗಕ್ಕೆ ದಿಕ್ಸೂಚಿ
Articles

ಮಹಾಕಾವ್ಯಗಳು ಬದುಕಿನ ಮಾರ್ಗಕ್ಕೆ ದಿಕ್ಸೂಚಿ

Team Varthaman
Last updated: June 1, 2025 4:32 AM
Team Varthaman
Published: June 1, 2025
Share
SHARE

ಮಹಾಕಾವ್ಯಗಳು ಕೇವಲ ಗ್ರಂಥವಲ್ಲ. ಅದು ಕಥೆಯ ಮೂಲಕ ಹೇಳಲಾಗಿರುವ ಪಾಠ. ಬದುಕಿಗೆ ಸರಿಯಾದ ಮಾರ್ಗ ತೋರುವ ದಾರಿದೀಪ. ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಬೇಕಾಗಿರುವ ಮಾರ್ಗಸೂಚಿಯನ್ನು ಮಹಾಕಾವ್ಯದಲ್ಲಿ ಕಾಣಬಹುದು. ಅವುಗಳನ್ನು ಅರ್ಥೈಸಿಕೊಂಡು ಬದುಕಿನಲಿ ಅಳವಡಿಸಿಕೊಳ್ಳುವ ಮನಸ್ಸು, ವಿವೇಕ ಇಂದು ಮರೆಯಾಗಿದೆ. ಮಹಾಕಾವ್ಯಗಳಲ್ಲಿ ಮಾನವ ಜೀವನದ ಸಾಂಸಾರಿಕ, ಮಾನಸಿಕ, ಧಾರ್ಮಿಕ ಹಂತಗಳನ್ನು ಗಮನಿಸಬಹುದು. ಗ್ರಂಥದ ಪಾತ್ರಗಳು ನಮ್ಮೊಂದಿಗೆ, ನಮ್ಮೊಳಗೆ ಅಡಗಿದೆ. ಯಾವ ಪಾತ್ರ, ಯಾವ ಪಾತ್ರದ ವಿಚಾರಧಾರೆ ನಮ್ಮೊಳಗಿದೆ ಎನ್ನುವ ಅವಲೋಕನದ ಅಗತ್ಯ ಪ್ರತಿಯೊಬ್ಬರಿಗಿದೆ.

Join WhatsApp Group

ರಾಮಾಯಣ ಹಾಗು ಮಹಾಭಾರತ ಎಂಬ ಧರ್ಮ ಗ್ರಂಥ ಬದುಕಿಗೆ ಬುನಾದಿ. ಸಮಾಜದ ಸ್ವಾಸ್ಥ್ಯಕ್ಕೆ ಕನ್ನಡಿ. ನೈತಿಕತೆಯನ್ನು ಹೊತ್ತು ಧರ್ಮವನ್ನು ಸಾರುತ್ತಾ ಭಕ್ತಿಯನ್ನು ಬಿತ್ತುವ ಈ ಗ್ರಂಥಗಳು ಕೇವಲ ಕಥೆಯಾಗಿ ಉಳಿದುಕೊಂಡಿರುವುದು ಬೇಸರದ ಸಂಗತಿ. ರಾಮಾಯಣ ಗೊತ್ತಾ ಎಂದು ಕೇಳಿದರೆ ರಾವಣ ಸೀತೆಯನ್ನು ಅಪಹರಿಸಿದ. ರಾಮ ರಾವಣನನ್ನು ಕೊಂದು ಸೀತೆಯನ್ನು ಕರೆತಂದ ಎಂದು ಒಂದು ವರ್ಗ ರಾಮನ ಶೌರ್ಯವನ್ನು ಸಾರಿದರೆ, ಸೀತೆಗೆ ರಾಮ ಅಗ್ನಿಪ್ರವೇಶ ಮಾಡಲು ಹೇಳಿದ, ತುಂಬು ಗರ್ಭಿಣಿಯನ್ನು ಅಡವಿಗಟ್ಟಿ ಕಂಬನಿಯಲ್ಲಿ ಕೈತೊಳೆಯುವಂತೆ ಮಾಡಿದ ಎಂದು ರಾಮನ ತಪ್ಪುಗಳ ಪಟ್ಟಿಯನ್ನು ಇನ್ನೊಂದಿಷ್ಟು ಜನ ಹೇಳ್ತಾರೆ.. ಕೈಕೇಯಿ ಹಾಗು ಮಂಥರೆಯಿಂದ ರಾಮಾಯಣ ನಡೆಯಿತು ಎಂದು ಹೇಳುವವರೂ ಇದ್ದಾರೆ. ಮಹಾಭಾರತದ ಬಗ್ಗೆ ಕೇಳಿದರೆ ದುರ್ಯೋಧನನ ದರ್ಪ, ಧೃತರಾಷ್ಟ್ರನ ಕುರುಡು ಪ್ರೇಮ, ಪಾಂಡವರ ತಾಳ್ಮೆ, ದ್ರೌಪದಿಯ ನೋವು, ಕರ್ಣನ ಮೂರ್ಖತನ, ಕೃಷ್ಣನ ಲೀಲೆ, ಪಾಂಡವರಿಗಾದ ಅನ್ಯಾಯದ, ದಾಯಾದಿಗಳ ಜಗಳದ ಬಗ್ಗೆ ಹೇಳಿ ತಪ್ಪುಗಳನ್ನು ಎತ್ತಿ ಹೇಳುತ್ತಾರೆ. ಭಗವದ್ಗೀತೆ ಪ್ರವಚನದ ಪಾಠವನ್ನಾಗಿಸಿಕೊಂಡಿದ್ದಾರೆ ಹೊರತು ಅಳವಡಿಸಿಕೊಳ್ಳುವ ಆಲೋಚನೆ ಬಹು ವಿರಳ.

ಹಾಗಾದರೆ ಈ ಗ್ರಂಥಗಳಲ್ಲಿ ಕೇವಲ ತಪ್ಪುಗಳ ಬಗ್ಗೆ ಮಾತ್ರ ಇದೆಯೇ? ಮೋಸ, ವಂಚನೆ,ಕಪಟ, ಧರ್ಮ ಸಂಕಟದ ಬಗ್ಗೆ ಮಾತ್ರ ಹೇಳಲಾಗಿದೆಯೇ? ಖಂಡಿತ ಇಲ್ಲ. ಹೇಳಿರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ನಾವು ಎಡವಿದ್ದೇವೆ. ಬೇಕಾಗಿದ್ದನ್ನು ಆಯ್ದುಕೊಳ್ಳುವಲ್ಲಿ ಸೋತ್ತಿದ್ದೇವೆ.

ರಾಮಾಯಣದಲ್ಲಿ ಗುರುಹಿರಿಯರ ಮಾತಿಗಿದ್ದ ಬೆಲೆ, ಅವರ ಗೌರವ ಕಾಳಜಿಯ ಬಗ್ಗೆ, ಮನದ ಆಸೆ ಆಮಿಷಗಳು ತಂದೊಡ್ಡುವ ಅಪಾಯದ ಬಗ್ಗೆ, ನಾನು ನಿನ್ನಿಂದ ಎನ್ನುವ ಅಹಂಕಾರದ ಬಗ್ಗೆ ಎಳೆ ಎಳೆಯಾಗಿ ತೆರೆದಿಡುತ್ತದೆ. ಅಹಂಕಾರ ಸರ್ವನಾಶಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಉದಾಹರಣೆಗಳು ಧರ್ಮ ಗ್ರಂಥದಲ್ಲಿ ನೋಡಬಹುದು. ಮಹಾಭಾರತದಲ್ಲಿ ಭೀಷ್ಮ, ದ್ರೋಣ, ಕೃಪ, ಕರ್ಣ, ಧೃತರಾಷ್ಟ್ರ, ಯುಧಿಷ್ಠಿರ ವೈಯುಕ್ತಿಕ ಧರ್ಮಕ್ಕಾಗಿ ಸಾಮಾಜಿಕ ಧರ್ಮವನ್ನು ಮರೆತು ಅದನ್ನು ರಕ್ಷಿಸುವಲ್ಲಿ ಸೋತು ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿ ಕುರುವಂಶದ ವಿನಾಶಕ್ಕೆ ಕಾರಣವಾಯಿತು ಎನ್ನುವ ಸಂದೇಶವಿದೆ.

ಸಾಮಾಜಿಕ ಧರ್ಮವೋ, ವೈಯುಕ್ತಿಕ ಧರ್ಮವೋ ಎನ್ನುವ ಆಯ್ಕೆ ನಮ್ಮ ಮುಂದೆ ಬಂದಾಗ ದೇಶದ ರಕ್ಷಣೆಗೆ ಸಮಾಜದ ಸ್ವಾಸ್ಥ್ಯಕ್ಕೆ ಸಾಮಾಜಿಕ ಧರ್ಮ ಶ್ರೇಷ್ಠ. ಆದರೆ ಯಾರಿಗೆ ಏನಾದರೂ ಚಿಂತೆ ಇಲ್ಲ ನಾನು ಆರಾಮಾಗಿ ಬದುಕಬೇಕು ಎನ್ನುವ ಧೋರಣೆ ಇರುವವರೇ ಜಾಸ್ತಿ. ವೈಯುಕ್ತಿಕ ಹಿತಾಸಕ್ತಿಗೆ ಸ್ವತಃ ಸಂಕಟ ಅನುಭವಿಸುವ ಜೊತೆಗೆ ಸುತ್ತಲಿನವರನ್ನು ಸಂಕಷ್ಟಕ್ಕೆ ದೂಡುವ ಮನಸ್ಥಿತಿ ಹೆಚ್ಚಾಗಿದೆ. ಧರ್ಮ ಗ್ರಂಥದಲ್ಲಿ ಈ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.

ಮಹಾಭಾರತದ ಪಾತ್ರಗಳು ಹೇಗೆ ಬದುಕಬಾರದು ಎನ್ನುವ ಪಾಠವನ್ನು ಸಾರಿದರೆ ರಾಮಾಯಣದ ಪಾತ್ರಗಳು ಹೇಗೆ ಬದುಕಬೇಕು ಎನ್ನುವುದನ್ನು ಸಾರುತ್ತದೆ. ರಾಮನ ತಾಳ್ಮೆ ನಮ್ಮ ನಿತ್ಯದ ಜಂಜಾಟದ ಬದುಕಿಗೆ ಬೇಕಿದೆ. ಲಕ್ಷ್ಮಣ, ವಿಭೀಷಣ ಹಾಗು ಹನುಮಂತನ ನಿಷ್ಠೆ ನಾವು ಮಾಡುವ ಕೆಲಸದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಖಂಡಿತ ಸಿಗುತ್ತದೆ. ಸೀತೆಯ ಸಹಿಸುವಿಕೆ ಹಾಗು ದ್ರೌಪದಿಯ ದಿಟ್ಟತನ ಎರಡೂ ಬದುಕಿಗೆ ಅವಶ್ಯಕ. ಅರ್ಜುನನ ಯುಕ್ತಿ, ಭೀಮನ ಶಕ್ತಿ ಪ್ರತಿಯೊಬ್ಬರಿಗೂ ಅವಶ್ಯಕ. ನಕುಲ ಸಹದೇವರಂತೆ ನಿಷ್ಕಲ್ಮಶವಾಗಿ ಪ್ರೀತಿಸುವ ಗುಣವೂ ಬೇಕು.

ತಾಳ್ಮೆ, ಸಹನೆ, ಶಾಂತಿ,ಪ್ರೀತಿ, ಕೋಪ, ದ್ವೇಷ ಎಲ್ಲದಕ್ಕೂ ಒಂದು ಮಿತಿ ಇರಬೇಕು. ಯಾವುದು ಹೆಚ್ಚಾದರೂ ಅದರಿಂದ ಸಮಸ್ಯೆ ಉಂಟಾಗುತ್ತದೆ. ಸಮಸ್ಯೆಗೆ ಪರಿಹಾರವಿಲ್ಲವೆಂದಲ್ಲ. ಪರಿಹಾರ ಹುಡುಕುವ ಮನಸ್ಥಿತಿ ಬೇಕು. ಸೂಕ್ತ ಸಮಯಕ್ಕೆ ಕಾಯಬೇಕು. ಧರ್ಮದಿಂದ ನೆಡೆಯುವವರನ್ನು ಪರಮಾತ್ಮ ಕಾಯುತ್ತಾನೆ ಎಂದ ಮಾತ್ರಕ್ಕೆ ಪರೀಕ್ಷೆಗಳನ್ನು ಇಡಲಾರ ಎಂದರ್ಥವಲ್ಲ. ಪರೀಕ್ಷೆಯನ್ನು ಗೆಲ್ಲುವ ಮಾರ್ಗವನ್ನು ಅವನೇ ತೋರುತ್ತಾನೆ. ಎಲ್ಲವೂ ನಂಬಿಕೆಯ ಮೇಲೆ ನಿಂತಿದೆ ಎನ್ನುವುದನ್ನು ಧರ್ಮ ಗ್ರಂಥ ಸಾರುತ್ತದೆ. ಪವಿತ್ರ ಗ್ರಂಥಗಳು ಬದುಕಿನ ದಿಕ್ಸೂಚಿ. ಬದುಕಿಗೊಂದು ಭರವಸೆಯನ್ನು ನೀಡುವ ಶಕ್ತಿಯನ್ನು ಹೊಂದಿದೆ. ಆ ಶಕ್ತಿಯ ಸದ್ಬಳಕೆ ನಮ್ಮ ಕೈಯಲ್ಲಿದೆ. ಕಥೆಯಾಗಿ ನೋಡದೆ ಅದರಲ್ಲಿನ ಪಾತ್ರಗಳ ಬಗ್ಗೆ ತೀರ್ಪನ್ನು ನೀಡದೆ ಅಲ್ಲಿಂದ ಕಲಿಯಬೇಕಾದ ವಿಷಯವನ್ನು ಅಳವಡಿಸಿಕೊಂಡಾಗ ಗ್ರಂಥದ ಬೆಲೆ ಅರಿವಾಗುತ್ತದೆ. ಬದುಕು ಸುಂದರವೆನಿಸುತ್ತದೆ.

✍️ ಆಶ್ರಿತಾ ಕಿರಣ್

  • ತನು -ಮನ ತಂಪಾಗಿಸೋ ತಂಪು ಬೀಜಗಳು
    by Team Varthaman
    March 21, 2026
  • ಕಿರುಕುಳ ಆರೋಪ: ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ
    by Team Varthaman
    March 21, 2026
  • ಇರಾನ್ ಜೊತೆ ಕದನ ವಿರಾಮ ಇಲ್ಲ: ಟ್ರಂಪ್ ಹೇಳಿಕೆ
    by Team Varthaman
    March 21, 2026
  • ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
    by Team Varthaman
    March 20, 2026
  • RCB ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ
    by Team Varthaman
    March 20, 2026
ತಾಯ್ತಂದೆಯರ ಪ್ರೀತಿಗೆ ಸಮವುಂಟೇ?
ಕಣ್ಣಿನ ಮೇಕಪ್ ಬದಿಗೊತ್ತಿ ಕಣ್ಣನ್ನು ಕಾಪಾಡಿ
ಸ್ನಾಯು ನೋವಿನಿಂದ ಒತ್ತಡ ನಿಯಂತ್ರಣದವರೆಗೆ ಬಳಸಿ ಎಪ್ಸಮ್ ಲವಣ
ಗಣೇಶ ಚತುರ್ಥಿ 2024 (Ganesha Chaturthi 2024)
ಡೈವೋರ್ಸಿಗೂ ಬಂದ ಫೋಟೋ ಶೂಟ್ ಭೂತ!!
TAGGED:Kannada Articleದಿಕ್ಸೂಚಿಮಹಾಕಾವ್ಯಗಳು
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaMain NewsTrending

ಅವೈಜ್ಞಾನಿಕವಾಗಿ ವಾಹನ ತಡೆಯಬಾರದು: ಗೃಹ ಸಚಿವ ಜಿ. ಪರಮೇಶ್ವರ್ ಸೂಚನೆ

Team Varthaman
Team Varthaman
May 27, 2025
100 ದಿನಗಳ ವಿಶ್ರಾಂತಿಯ ಬಳಿಕ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯ ಪ್ರವೇಶ
ಬೆಂಗಳೂರು ವಿಮಾನ ನಿಲ್ದಾಣ- 23.8 ಕೋಟಿ ಮೌಲ್ಯದ ಕೊಕೇನ್ ಜಪ್ತಿ
ಶಬರಿಮಲೆ ದೇಗುಲದ ವಿಗ್ರಹದಿಂದ 4.5 ಕೆಜಿ ಚಿನ್ನ ನಾಪತ್ತೆ – ಹೈಕೋರ್ಟ್ ತನಿಖೆಗೆ ಆದೇಶ
ರೋಹಿತ್ ಶರ್ಮಾ ನಾಯಕನಾಗಿ ಯುಗಾಂತ್ಯ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?