ಶ್ರೀರಂಗಪಟ್ಟಣ : ರಾಷ್ಡ್ರೀಯ ಹೆದ್ದಾರಿ ರಸ್ತೆಗೆ ಕೆಳ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ತಾಲ್ಲೂಕು ಹುಲಿಕೆರೆ ಗ್ರಾಮ ಪಂಚಾಯ್ತಿಯ ಅವ್ವೇರಹಳ್ಳಿ ಸೇರಿದಂತೆ ವಿವಿಧ ಗ್ರಾಮಸ್ಥರು ಗುರುವಾರ ಪ್ರತಿಭಟನೆ ಮಾಡಿದರು.
ಈ ಗ್ರಾಮಗಳ ಮೂಲಕ ಹಾದುಹೋಗುವ ಶ್ರೀರಂಗಪಟ್ಟಣ-ಕುಶಾಲನಗರ ಎಕ್ಸ್ ಪ್ರೆಸ್ ಹೈವೆ ರಸ್ತೆಯಿಂದ 8 ಗ್ರಾಮಗಳ ಸಂಪರ್ಕ ರಸ್ತೆಗಳು ಕಡಿತವಾಗುತ್ತಿದೆ, ಕೂಡಲೇ ಕೆಳ ಸೇತುವೆ ನಿರ್ಮಿಸಿ ಎಂದು ಆಗ್ರಹಿಸಿ ಅವ್ವೇರಹಳ್ಳಿ ಮತ್ತು ಸುತ್ತಮುತ್ತಲಿನ ರೈತರು ಗುರುವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡರಾದ ಶಿವಾಜಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ನಂ.275ರಲ್ಲಿ ನಿರ್ಮಿಸುತ್ತಿರುವ ಶ್ರೀರಂಗಪಟ್ಟಣ-ಕುಶಾಲನಗರ ಎಕ್ಸ್ ಪ್ರೆಸ್ ಹೈವೆ ರಸ್ತೆಯ ಹುಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವೇರಹಳ್ಳಿ ಮೂಲಕ ಹಾದು ಹೋಗುತ್ತಿದೆ. ಇದರಿಂದ ಇಲ್ಲಿ ಈಗಾಗಲೇ ಸುಮಾರು 60 ವರ್ಷಗಳ ಹಳೆಯದಾದ 40 ಅಡಿ ಸಂಪರ್ಕ ರಸ್ತೆ ಕಡಿತಗೊಳ್ಳಲಿದೆ.
ಇದರಿಂದ ಈ ಭಾಗದ ಹುಲಿಕೆರೆ, ಅವೇರಹಳ್ಳಿ, ಹೊಸಹುಂಡಿ, ಸಂಕಳ್ಳಿಕೊಪ್ಪಲು ಮತ್ತು ಮೈದನಹಳ್ಳಿ ಸೇರಿದಂತೆ 5 ಗ್ರಾಮಗಳ ಸುಮಾರು ಐದು ಸಾವಿರ ಎಕರೆ ವ್ಯವಸಾಯದ ಭೂಮಿಗೆ ಹೋಗುವ ಸಂಪರ್ಕ ರಸ್ತೆಯು ಕಡಿತವಾಗಿ ಸಾವಿರಾರು ರೈತರಿಗೆ ಅನಾನುಕೂಲ ಉಂಟಾಗಲಿದೆ ಎಂದರು.ಇದನ್ನು ಓದಿ –ವಕ್ಪ್ ಕಾಯ್ದೆ : ಸಮಗ್ರ ವಿವರ ಸಲ್ಲಿಸಲು ಕೇಂದ್ರಕ್ಕೆ 7 ದಿನ ಗಡುವು
ಅನ್ವೇರಹಳ್ಳಿ ಗ್ರಾಮದ ಬಳಿ ಕೆಳಸೇತುವೆ ನಿರ್ಮಾಣ ಮಾಡಿಸಿ ಗ್ರಾಮಸ್ಥರ ಜಮೀನಿಗೆ ಸಂಪರ್ಕ ಕಲ್ಪಿಸಿಕೊಡಬೇಕು. ಇಲ್ಲದಿದ್ದಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ರೈತರು ನಿರಂತರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.