By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಪಿತೃ ಋಣ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಪಿತೃ ಋಣ
Articles

ಪಿತೃ ಋಣ

Team Varthaman
Last updated: September 21, 2025 10:11 AM
Team Varthaman
Published: September 21, 2025
Share
SHARE

ಭಾರತ ಪುಣ್ಯ ಭೂಮಿ ಮೋಕ್ಷ ಭೂಮಿ ಸಂಪ್ರದಾಯ ಸಂಸ್ಕಾರಗಳ ಅಗರ ಇದು.ಮನುಷ್ಯನ ಜೀವನದಲ್ಲಿ ಐದು ಋಣಗಳು ಮುಖ್ಯ ಪಾತ್ರವಹಿಸುತ್ತದೆ.ಪಿತೃ ಋಣ (ತಂದೆ ಋಣ)ಮಾತೃಋಣ (ತಾಯಿಯ ಋತಯಣ)ದೇವ ಋಣ (ದೇವತೆಗಳ ಋಣ) ಋಷಿ ಋಣ (ಗುರುಗಳ ಋಣ)ಮನುಷ್ಯ ಋಣ(ಸಮಾಜದ ಋಣ)ಭೂತ ಋಣ(ಧಾತುಗಳ ಋಣ).ಎಲ್ಲಾ ಋಣಗಳನ್ನ ಅದಷ್ಟು ತೀರಿಸಿ ಹೋಗಬೇಕು ಅನ್ನೋದು ಶಾಸ್ತ್ರ.

ಪುನರಪಿ ಜನನಂ ಪುನರಪಿ ಮರಣಂ ಅಂತಾರೆ ನಾವು ಭೂಮಿಗೆ ಬರೋದು ಋಣಗಳನ್ನ ತೀರಲಿಸಿಲ್ಲಿಕ್ಕೆ ಋಣಗಳು ಮುಗಿದ ಮೇಲೆ ಮೋಕ್ಷ ಪ್ರಾಪ್ತಿ ಆಗುತ್ತದೆ ಅನ್ನೋದು ನಂಬಿಕೆ.

Join WhatsApp Group

ಪಿತೃಋಣವನ್ನು ತೀರಸಲು ಪಿತೃಪಕ್ಷವನ್ನು ಹದಿನೈದು ದಿನಗಳ ಕಾಲ ಆಚರಿಸುತ್ತೇವೆ.ಕರ್ಣ ಪಿತೃ ಲೋಕಕ್ಕೆ ಹೋದಾಗ ಅವನಿಗೆ ಆಹಾರವೇ ಸಿಗಲಿಲ್ಲ ಅಂತೇ ಅವನು ಯಾಕೆ ಎಂದು ಕೇಳಿದಾಗ ದೇವರು ನೀನು ಜೀವನದಲ್ಲಿ ಚಿನ್ನವನ್ನೇ ದಾನ ಮಾಡಿದ್ದೇ ಹೊರತು ಪಿತೃಗಳಿಗೆ ಅನ್ನ ನೀಡಲಿಲ್ಲ ಅಂದರಂತೇ ಅದಕ್ಕೆ ಕರ್ಣ ಪಿತೃಪಕ್ಷ ದಲ್ಲಿ ಭೂಮಿಗೆ ಬಂದು ಪಿತೃಗಳಗೆ ಆಹಾರ ನೀಡಿ ಹೋಗತ್ತಾನೆ ಎನ್ನುವುದು ಪುರಾಣದ ಕಥೆ ಹೇಳುತ್ತದೇ.ನಾವು ಪಿತೃಗಳಿಗೆ ತರ್ಪಣ ನೀಡಿದರೆ ನಮಗೆ ಪಿತೃಲೋಕದಲ್ಲಿ ಆಹಾರ ಸಿಗುತ್ತದೆ ಹಾಗೆ ಪಿತೃಗಳ ಆರ್ಶೀವಾದದಿಂದ ನಮ್ಮ ಜೀವನ ಚೆನ್ನಾಗಿ ಇರುತ್ತದೆ.ಸೀತೆ ರಾಮನ ಅಪ್ಪ ದಶರಥನಿಗೆ ಗಯಾದಲ್ಲಿ ದರ್ಪಣ ನೀಡಿದ್ದಾರೆಂದು ಕಥೆ ಹೇಳುತ್ತದೆ.

ತಾಯಿಯ ಗರ್ಭದಿಂದ ಭೂಮಿಗೆ ನಾವು ಬರೋದರಿಂದ ನದಿಗಳಲ್ಲಿ ದರ್ಪಣ ಪಿಂಡ ಪ್ರಧಾನ ಮಾಡಲು ಉತ್ತಮಸ್ಥಳ ಎನ್ನುತ್ತಾರೆ ಏಕೆಂದರೆ ನದಿಗಳನ್ನ ಹೆಣ್ಣು ಮಕ್ಕಳಿಗೆ ಹೋಲಿಸುತ್ತಾರೆ .ತಂದೆಗೆ ಅಜ್ಜನಿಗೆ ಮುತ್ತಜ್ಜನಿಗೆ ಪಿಂಡಪ್ರಧಾನ ಮಾಡಬಹುದು ಪಿಂಡಪ್ರಧಾನವನ್ನ ಧರ್ಬೆ ಚಾಪೆಯಲ್ಲಿ ದರ್ಭೆ ಉಂಗುರ ತೊಟ್ಟು ಬಿಡಬೇಕು ಎನ್ನುವುದು ಶಾಸ್ತ್ರ.ತರ್ಪಣಾದಿಗಳನ್ನು ಮಾಡುವವರು ಶುದ್ಧವಾದ ಸ್ಥಳ, ವಸ, ನೀರು, ಎಳ್ಳು ಹಾಗೂ ಅಕ್ಕಿಯನ್ನು ಬಳಸಬೇಕು. ಯಾವುದೇ ಕಾರಣಕ್ಕೂ ತರ್ಪಣದಲ್ಲಿ ಬಳಸುವ ಅಕ್ಕಿ ತುಂಡಾಗಿರಬಾರದು.

ತರ್ಪಣ ಮಾಡುವ ಸ್ಥಳದಲ್ಲಿ ಉದುರಿದ ಕೂದಲು ಇತ್ಯಾದಿಗಳು ಇರಬಾರದು. ಪರಿಶುದ್ಧ ಮನಸ್ಸಿನಿಂದ ತರ್ಪಣಗಳನ್ನು ನೀಡಬೇಕು. ಮನೆಯಲ್ಲಿ ಹಿರಿಯರ ದಿನದ ಆಚರಣೆಯ ಸಂದರ್ಭದಲ್ಲಿ ಅವಾಚ್ಯ ಶಬ್ದಗಳ ಬಳಕೆ, ಕೂಗುವುದು, ಕಿರುಚುವುದು ಮಾಡಬಾರದು. ಈ ಸಂದರ್ಭದಲ್ಲಿ ಘಂಟಾನಾದಕ್ಕೆ ನಿಷೇಧವಿದೆ.ಈ ಪಕ್ಷದಲ್ಲಿ ಪಿತೃಗಳ ತೃಪ್ತಿಗಾಗಿ ದಾನಗಳಿಗೆ ಮಹತ್ವವಿದೆ ಈರುಳ್ಳಿ-ಬೆಳ್ಳುಳ್ಳಿ ಇತ್ಯಾದಿ ತಮೋಗುಣಪ್ರಧಾನ ತರಕಾರಿ ಹೊರತುಪಡಿಸಿ ಬೇರೆ ತರಕಾರಿ, ಅಕ್ಕಿ, ಬೇಳೆ, ಬೆಲ್ಲ ಇತ್ಯಾದಿಗಳನ್ನು ಕುಂಬಳಕಾಯಿ ಸಹಿತ ದಾನ ಮಾಡಬೇಕು. ವಸ, ಗೋವು, ಹೊಸ ಕೊಡೆ, ಹೊಸ ಪಾದರಕ್ಷೆ ಇತ್ಯಾದಿಗಳ ದಾನವು ಕೂಡ ವಿಶೇಷ ಫಲಗಳನ್ನು ಹಾಗೂ ಪಿತೃಗಳಿಗೆ ತೃಪ್ತಿಯನ್ನು ಕೊಡುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

ಪಿತೃಗಳ ಋಣದಿಂದ ನಾವು ಬದುಕುತ್ತೇವೇ ಪಿತೃಗಳಿಗೆ ಋಣ ತೀರಿಸಲು ಸುವರ್ಣ ಅವಕಾಶ ಬಂದಿದೇ ಈ ತಿಂಗಳಲ್ಲಿ ಎಲ್ಲಾರೂ ಪಿತೃಗಳಿಗೆ ಇಷ್ಟವಾದ ಆಹಾರಗಳನ್ನ ಇಟ್ಟು ಪಿತೃ ಋಣಗಳನ್ನ ತೀರಿಸಿಕೊಳ್ಳುವ ಪಿತೃಗಳಿಗೆ ಶ್ರಾದ್ಧ, ತರ್ಪಣಾದಿಗಳನ್ನು ನೀಡದಿದ್ದರೆ, ಹೇಗೆ ಮುಂದಿನ ಪದವಿಯನ್ನು ಗಳಿಸಲಾರರು ಎಂಬ ಅರ್ಜುನನ ವಿಷಾದ ಭಗವದ್ಗೀ ತೆಯಲ್ಲಿ ಉಲ್ಲೇಖಗೊಂಡಿದೆ. –
ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ
ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ

ಇದನ್ನು ಓದಿ –ಮಹಾಲಯ ಅಮಾವಾಸ್ಯೆ ಅಥವಾ ಸರ್ವಪಿತ್ರೀ ಅಮಾವಾಸ್ಯೆ


ವರ್ಣ ಸಾಂಕರ್ಯವು ಕುಲಘಾತಕರನ್ನು ಮತ್ತು ಕುಲವನ್ನೂ ನರಕಕ್ಕೆ ಕೊಂಡೊಯ್ಯುತ್ತದೆ. ಲುಪ್ತವಾದ ಪಿಂಡ ಮತ್ತು ತರ್ಪಣಾದಿಗಳಿಂದ ಅರ್ಥಾತ್‌ ಶ್ರಾದ್ಧ ಮತ್ತು ಪಿತೃ ತರ್ಪಣಗಳಿಂದ ವಂಚಿತರಾದ ಇವರ ಪಿತೃಗಳು ಕೂಡ ಅಧೋಗತಿಯನ್ನು ಪಡೆಯುತ್ತಾರೆ ಎಂದಿದ್ದಾನೆ.

ರೇಷ್ಮಾ

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
ಅಕ್ಷಯ ತೃತೀಯ 2025: ಅದೃಷ್ಟ ಮತ್ತು ಸಮೃದ್ಧಿಗಾಗಿ ಈ 6 ವಸ್ತುಗಳನ್ನು ಖರೀದಿಸಿ!
ಸಾವು ಬದುಕಿನ ನಡುವೆ
ದೇಶಾದ್ಯಂತ ವ್ಯಸನ ಮುಕ್ತ ಜಾಗೃತಿ ಮೂಡಿಸಿದ ಶ್ರೀಗಳು | ಆಗಸ್ಟ್ 01 ವ್ಯಸನ ಮುಕ್ತ ದಿನ
ಮನೆ ಮನ ಬೆಳಗಿಸುವ ಹಬ್ಬ ಈ ದೀಪಾವಳಿ
ದಸರಾ ಅಥವಾ ನವರಾತ್ರಿ ಹಬ್ಬದ ಮಹತ್ವ
TAGGED:Kannada ArticleMahalaya AmavasyaPitru paksha
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaPoliticsTrending

ಯಾರೇ ಏನೇ ಹೇಳಿದರೂ ಗ್ರೇಟರ್ ಬೆಂಗಳೂರು ಮಾಡೇ ಮಾಡ್ತೀವಿ: ಡಿಕೆಶಿ

Team Varthaman
Team Varthaman
April 25, 2025
ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ
ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡುವ ಪೋಷಕರಿಗೆ ಎಚ್ಚರಿಕೆ: ₹25,000 ದಂಡ
ಯುವರಾಜ್‌ ಸಿಂಗ್, ರಾಬಿನ್‌ ಉತ್ತಪ್ಪಗೆ ED ನೋಟಿಸ್‌
ರೈಲ್ವೆ ಇಲಾಖೆಯಲ್ಲಿ 6374 ತಂತ್ರಜ್ಞ ಹುದ್ದೆಗಳಿಗೆ ನೇಮಕಾತಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?