ಬೆಂಗಳೂರು: ಭಾರತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರು ನಗರದ ಬಾರ್ ಮತ್ತು ಪಬ್ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕಸ್ತೂರಬಾ ರಸ್ತೆಯಲ್ಲಿರುವ ‘ಒನ್ 8 ಕಮ್ಯೂನ್’ ಪಬ್ನಲ್ಲಿ ಪ್ರತ್ಯೇಕ ಧೂಮಪಾನ ಸ್ಥಳ (Smoking Zone) ವಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನಕ್ಕೆ ಅವಕಾಶ ನೀಡಲಾಗಿದ್ದು, ಇದನ್ನು ಉಲ್ಲಂಘನೆಯೆಂದು ಗುರುತಿಸಿ ಪ್ರಕರಣ ದಾಖಲಾಗಿದೆ.
ಈ ಕುರಿತಾಗಿ ಪಬ್ನ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಕೋಟ್ಟಾ ಕಾಯ್ದೆ (COTPA – Cigarettes and Other Tobacco Products Act) ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.ಇದನ್ನು ಓದಿ –‘ಥಗ್ ಲೈಫ್’ ಚಿತ್ರ ರಿಲೀಸ್ ಆದ್ರೆ ಬೆಂಗಳೂರು ಬಂದ್
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿರ್ಬಂಧಿಸಿರುವ ನಿಯಮಗಳನ್ನು ಈ ಪಬ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದ್ದು, ಸಂಬಂಧಿತ ಅಧಿಕಾರಿಗಳು ಮುಂದಿನ ತನಿಖೆ ಮುಂದುವರೆಸಿದ್ದಾರೆ.