By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಹಂ ಅಳಿಸಿ ಬನ್ನಿ ಎನ್ನುವ ದೈವ ಸ್ಥಾನ
    February 10, 2026
    ಶರಣ ಲೋಕದ ಧ್ರುವತಾರೆ…ಸಮಗಾರ ಹರಳಯ್ಯ
    February 10, 2026
    ಭಕ್ತಿಯ ಮೌಲ್ಯವನ್ನು ಸಾರಿದ ಶಬರಿ
    February 7, 2026
    ಒಬ್ಬರಿಗೆ ” ಟೇಕನ್ ಫ಼ಾರ್ ಗ್ರಾಂಟೆಡ್ ” ಆಗುವ ಮುನ್ನ
    February 7, 2026
    ಬಿಸಿಲಿನ ತಾಪಕ್ಕೆ ತಂಪು ಪಾನೀಯ ವರದಾನ
    February 7, 2026
  • Sports
  • National
  • International
  • Crime
Reading: ಲೋನ್ ನೆಪದಲ್ಲಿ ವಂಚನೆ: CID ದಾಳಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಲೋನ್ ನೆಪದಲ್ಲಿ ವಂಚನೆ: CID ದಾಳಿ
BengaluruCrimeKarnataka

ಲೋನ್ ನೆಪದಲ್ಲಿ ವಂಚನೆ: CID ದಾಳಿ

Team Varthaman
Last updated: February 10, 2026 12:16 PM
Team Varthaman
Published: February 10, 2026
Share
SHARE

ಬೆಂಗಳೂರು: ಸಾಲ ಕೊಡಿಸುವ ನೆಪದಲ್ಲಿ ನೂರಾರು ಉದ್ಯಮಿಗಳಿಗೆ ವಂಚನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಪೀಟರ್ ಕ್ಯಾಡಿ ಎಂಬುವರ ಮನೆ ಮೇಲೆ ಸಿಐಡಿ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿ, ವಂಚನೆಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಫುಲಿಕೇಶಿನಗರದ ಕೋಲ್ಸ್ ಪಾರ್ಕ್ ಸಮೀಪದಲ್ಲಿರುವ ಪೀಟರ್ ಕ್ಯಾಡಿ ನಿವಾಸಕ್ಕೆ ಸಿಐಡಿ ಅಧಿಕಾರಿಗಳ ತಂಡ ಬೆಳಂಬೆಳಿಗ್ಗೆ ದಾಳಿ ನಡೆಸಿತು. ಕಳೆದ ಸುಮಾರು 15 ವರ್ಷಗಳಿಂದ ಉದ್ಯಮಿಗಳನ್ನು ವಂಚಿಸಿ ಕಾನೂನು ಕ್ರಮದಿಂದ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿರುವ ಪೀಟರ್ ಕ್ಯಾಡಿ, ವಂಚನೆಗೆ ಒಳಗಾದವರ ವಿರುದ್ಧವೇ ಸುಳ್ಳು ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದನೆಂದು ಸಿಐಡಿ ಮೂಲಗಳು ತಿಳಿಸಿವೆ. ಈತನಿಂದ 500ಕ್ಕೂ ಹೆಚ್ಚು ಮಂದಿ ವಂಚನೆಗೆ ಒಳಗಾಗಿರುವ ಶಂಕೆಯಿದೆ.

ಸಾಲದ ಅಗತ್ಯವಿರುವ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು, ಬ್ಯಾಂಕ್ ಬಡ್ಡಿಗಿಂತ ಕಡಿಮೆ ಬಡ್ಡಿದರದಲ್ಲಿ ಕೋಟ್ಯಂತರ ರೂಪಾಯಿ ಸಾಲ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಪೀಟರ್ ಕ್ಯಾಡಿ ನಂಬಿಸುತ್ತಿದ್ದ. ಆರಂಭದಲ್ಲಿ ಉದ್ಯಮಿಗಳ ಹೆಸರಿನಲ್ಲಿ ದೊಡ್ಡ ಮೊತ್ತದ ಡಿಡಿಗಳನ್ನು ತೆಗೆದುಕೊಂಡು ತೋರಿಸಿ ನಂಬಿಕೆ ಮೂಡಿಸುತ್ತಿದ್ದನು. ಈ ನಾಟಕಕ್ಕೆ ಮಾರುಹೋದವರು ಖಾಲಿ ಚೆಕ್‌ಗಳು ಹಾಗೂ ಆಸ್ತಿ ಪತ್ರಗಳನ್ನು ನೀಡುತ್ತಿದ್ದರು.

ನಂತರ ‘ಪ್ರೊಸೆಸಿಂಗ್ ಫೀ’ ಮತ್ತು ‘ಕಮೀಷನ್’ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಹಣ ಪಡೆದುಕೊಂಡು, ಸಾಲ ನೀಡದೇ ಮೋಸ ಮಾಡುತ್ತಿದ್ದ ಎನ್ನಲಾಗಿದೆ. ಹಣ ವಾಪಸು ಕೇಳಿದವರ ವಿರುದ್ಧ, ಅವರು ನೀಡಿದ್ದ ಚೆಕ್ ಹಾಗೂ ಆಸ್ತಿ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯದ ಮೂಲಕ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ.

Join WhatsApp Group

ಇನ್ನು ಕೆಲವರು ಕಚೇರಿಗೆ ಬಂದು ಹಣ ವಾಪಸು ಕೇಳಿದರೆ, ಅಶ್ವಿನಿ ಎಂಬ ಮಹಿಳೆಯ ಹೆಸರಿನಲ್ಲಿ ಸುಳ್ಳು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿ ಬೆದರಿಕೆ ಹಾಕುತ್ತಿದ್ದನೆಂಬ ಆರೋಪವೂ ಕೇಳಿಬಂದಿದೆ. ಸಿಐಡಿ ತನಿಖೆಯಲ್ಲಿ ಹಲವಾರು ಮಂದಿಯ ವಿರುದ್ಧ 15ಕ್ಕಿಂತ ಹೆಚ್ಚು ಸುಳ್ಳು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಪೀಟರ್ ಕ್ಯಾಡಿ ತನ್ನ ಸಹಚರರಾದ ಅಮಿತ್ ಕ್ಯಾಡಿ, ಅಶ್ವಿನಿ, ಹರಿಮೋಹನ್ ನಾಯ್ಡು, ಅಲ್ತಾಫ್, ಚಾರಿ ಮುರಳಿ ಸೇರಿದಂತೆ ಇತರರೊಂದಿಗೆ ಸೇರಿ ಈ ವಂಚನಾ ಜಾಲವನ್ನು ನಡೆಸುತ್ತಿದ್ದನೆಂದು ತಿಳಿದುಬಂದಿದೆ. ಈತನ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.

ಸುಬ್ಬರಾವ್ ಪ್ರಕರಣ
ಕಳೆದ ವರ್ಷ ಸುಬ್ಬರಾವ್ ಎಂಬವರು ಪೀಟರ್ ಕ್ಯಾಡಿ ವಿರುದ್ಧ ಫುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಮೀನು ದಾಖಲೆ ಸರಿಪಡಿಸಿ 300 ಕೋಟಿ ರೂಪಾಯಿಗೆ ಮಾರಾಟ ಮಾಡಿಕೊಡುತ್ತೇನೆ ಎಂದು ನಂಬಿಸಿ 96 ಲಕ್ಷ ರೂ. ಹಣ ಪಡೆದು ನಂತರ ಮೋಸ ಮಾಡಿದ ಆರೋಪ ಇದೆ. ಅಲ್ಲದೇ, ಕಮೀಷನ್ ಹೆಸರಿನಲ್ಲಿ ಪಡೆದ ಚೆಕ್‌ಗಳನ್ನು ದುರುಪಯೋಗಪಡಿಸಿಕೊಂಡು ಸುಬ್ಬರಾವ್ ವಿರುದ್ಧವೇ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ಕಿರುಕುಳ ನೀಡಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಐಡಿ ಆರ್ಥಿಕ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು.ಸೌಜನ್ಯ ಕೊಲೆ ಪ್ರಕರಣ: ಸಿಬಿಐಗೆ ಹೈಕೋರ್ಟ್ ನೋಟಿಸ್

ಈ ಹಿನ್ನಲೆಯಲ್ಲಿ ಪೀಟರ್ ಕ್ಯಾಡಿ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ, ವಂಚನೆಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಈತನ ವಿರುದ್ಧ ಅಶೋಕನಗರ, ಜೀವನ್ ಭೀಮಾನಗರ, ಹಲಸೂರು, ಫುಲಿಕೇಶಿನಗರ ಮತ್ತು ಬೆಳ್ಳಂದೂರು ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ. ಅಚ್ಚರಿಯ ಸಂಗತಿಯೆಂದರೆ, ಹಣ ವಾಪಸು ಕೇಳದಂತೆ ಬೆದರಿಸಲು 300ಕ್ಕೂ ಹೆಚ್ಚು ಸುಳ್ಳು ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

  • ಕೆಯುಡಬ್ಲ್ಯೂಜೆ:ಬೆಂಗಳೂರು ನಗರ ಘಟಕ ಚುನಾವಣೆಗೆ ತಡೆಯಾಜ್ಙೆ ತೆರವು ಮಾಡಿದ ನ್ಯಾಯಲಯ
    by Team Varthaman
  • ಅಹಂ ಅಳಿಸಿ ಬನ್ನಿ ಎನ್ನುವ ದೈವ ಸ್ಥಾನ
    by Team Varthaman
  • ಮಲೆ ಮಹದೇಶ್ವರ ಬೆಟ್ಟದಲ್ಲಿ ಬಾಲಕನ ಮೇಲೆ ಚಿರತೆ ದಾಳಿ
    by Team Varthaman
  • ಶರಣ ಲೋಕದ ಧ್ರುವತಾರೆ…ಸಮಗಾರ ಹರಳಯ್ಯ
    by Team Varthaman
  • ಸಿಎಂ ಜೋತೆ ಕದ್ದುಮುಚ್ಚಿ ಮಾತನಾಡಿಲ್ಲ: ಡಿಸಿಎಂ ಡಿ.ಕೆ.ಶಿ
    by Team Varthaman
ಬೆಟ್ಟಿಂಗ್ ಪ್ರಕರಣ: ಕ್ರಿಕೆಟಿಗ ಸುರೇಶ್ ರೈನಾ, ಶಿಖರ್ ಧವನ್ ಆಸ್ತಿ ಜಪ್ತಿ
ಮೈಸೂರು :ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳ ಸಾವು
ರಾಜ್ಯದ 20 ಜಿಲ್ಲೆಗಳಲ್ಲಿ ಒಂದು ವಾರ ಭಾರೀ ಮಳೆ
ನಿರ್ಮಿತಿ ನಿರ್ದೇಶಕ ಮನೆ ಮೇಲೆ ಲೋಕಾಯುಕ್ತ ದಾಳಿ
ರಾಜ್ಯದ ಹಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
TAGGED:BengaluruCIDloan fraud
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruJobsKarnataka

ಶೀಘ್ರದಲ್ಲೇ 18,000 ಶಿಕ್ಷಕ ,ಉಪನ್ಯಾಸಕರ ನೇಮಕಾತಿ: ಮಧು ಬಂಗಾರಪ್ಪ

Team Varthaman
Team Varthaman
October 16, 2025
ಜಾತ್ಯತೀತ, ಸಮಾಜವಾದಿ ಪದಗಳನ್ನು ಕೈಬಿಟ್ಟಲ್ಲಿ ಮತ್ತಾವುದನ್ನು ಸೇರಿಸಬೇಕು…?
ರೋಹಿತ್ ಶರ್ಮಾ ನಾಯಕನಾಗಿ ಯುಗಾಂತ್ಯ
ಆಪರೇಷನ್‌ ಸಿಂಧೂರ ಮುಂದುವರಿಯಲಿದೆ
ಜಿಲ್ಲೆಯ ಸಣ್ಣ- ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ: ಡಾ. ಕುಮಾರ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?