By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಬ್ರಹ್ಮಾಂಡದ ಮೂಲ ಶಕ್ತಿ ಕೂಷ್ಮಾಂಡ ದೇವಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಬ್ರಹ್ಮಾಂಡದ ಮೂಲ ಶಕ್ತಿ ಕೂಷ್ಮಾಂಡ ದೇವಿ
Articles

ಬ್ರಹ್ಮಾಂಡದ ಮೂಲ ಶಕ್ತಿ ಕೂಷ್ಮಾಂಡ ದೇವಿ

Team Varthaman
Last updated: September 25, 2025 10:00 AM
Team Varthaman
Published: September 25, 2025
Share
SHARE

ಯಾ ದೇವಿ ಸರ್ವಭೂತೇಷು ಮಾ ಕೂಷ್ಮಾಂಡಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ನವರಾತ್ರಿಯ ಒಂಬತ್ತು ದಿನ ದೇವಿಯ ಒಂದೊಂದು ಅವತಾರವನ್ನು ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವಿ ಆರಾಧನೆ ನವರಾತ್ರಿಯ ನಾಲ್ಕನೇ ದಿನ ಮಾಡಲಾಗುತ್ತದೆ. ಕೂಷ್ಮಾಂಡ ದೇವಿ ನವದುರ್ಗೆಯರಲ್ಲಿ ನಾಲ್ಕನೆಯವಳು. ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು ಕೂಷ್ಮಾಂಡ ಎನ್ನುತ್ತಾರೆ.

Join WhatsApp Group

ಈ ದೇವಿಗೆ ಕುಂಬಳಕಾಯಿ ಅತ್ಯಂತ ಪ್ರಿಯ. ತನ್ನ ಸುಮಧುರ ಮುಗ್ಧ ನಗುವಿನಿಂದ ಬ್ರಹ್ಮಾಂಡವನ್ನು ರಚಿಸಿದ ಕಾರಣ ಇವಳನ್ನು ಕೂಷ್ಮಾಂಡ ದೇವಿ ಎನ್ನಲಾಗುತ್ತದೆ.

ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ‘ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಅಂತೇ ಭೂಮಿ, ಗ್ರಹಗಳು, ಸೂರ್ಯ, ನಕ್ಷತ್ರಗಳು ಮತ್ತು ಗೆಲಕ್ಸಿಗಳನ್ನು ಅಸ್ತಿತ್ವಕ್ಕೆ ತರಲಾಯಿತು ಆದ್ದರಿಂದ ಇವಳೇ ಸೃಷ್ಟಿಯ ಆದಿಸ್ವರೂಪ ಶಕ್ತಿಯಾಗಿದ್ದಾಳೆ.
ದುರ್ಗಾ ದೇವಿಯ ಕೂಷ್ಮಾಂಡ ದೇವಿಯ ರೂಪವು ವಿಶಿಷ್ಟವಾಗಿದ್ದು, ಅವಳು 8 ತೋಳುಗಳನ್ನು ಹೊಂದಿದ್ದಾಳೆ. ಈ ಕಾರಣಕ್ಕಾಗಿ ಅವಳಿಗೆ ಪೂಜೆ ಮಾಡುವುದು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ದೇವಿಗೆ ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂದೂ ಅವಳನ್ನು ವರ್ಣಿಸಲಾಗುತ್ತದೆ. ಜೊತೆಗೆ ಆಕೆ ತನ್ನ ಕೈಯಲ್ಲಿ ಜಪಮಾಲೆಯನ್ನು ಹಿಡಿದು, ಸಿಂಹದ ಮೇಲೆ ಸವಾರಿ ಮಾಡಿಕೊಂಡು ಬರುತ್ತಾಳೆ.

ನವರಾತ್ರಿಯ ನಾಲ್ಕನೇ ದಿನ ತಾಯಿಯನ್ನು ಮೆಚ್ಚಿಸಲು ಬೂದು ಕುಂಬಳಕಾಯಿಯನ್ನು ದಾನ ಮಾಡಲಾಗುತ್ತದೆ. ಈಕೆಯನ್ನು ಶ್ರದ್ಧೆಯಿಂದ ಪೂಜಿಸಿದರೆ ಕಷ್ಟ ಪರಿಹರಿಸುತ್ತಾಳೆ. ಭಕ್ತರ ಅಜ್ಞಾನವನ್ನೂ ದೂರ ಮಾಡುತ್ತಾಳೆ. ಕೂಷ್ಮಾಂಡ ದೇವಿಯ ಆರಾಧನೆಯ ಪೂಜಾ ಫಲಗಳು ಅತ್ಯಂತ ವಿಶೇಷ. ಕೂಷ್ಮಾಂಡ ದೇವಿ ಆರಾಧನೆಯಿಂದ ರೋಗಗಳಿಂದ ಮುಕ್ತಿ ಪಡೆಯಬಹುದು.
ದೇವಿಯು ಸೂರ್ಯನ ಶಕ್ತಿಯ ಮೂಲ. ಅವಳಿಲ್ಲದೆ, ಸೂರ್ಯನ ಬೆಳಕು ಮತ್ತು ಶಕ್ತಿಯು ಮಸುಕಾಗುತ್ತದೆ ಮತ್ತು ಕುಂದುತ್ತದೆ ಮತ್ತು ಶಕ್ತಿಹೀನವಾಗುತ್ತದೆ ಎಂದು ನಂಬಲಾಗಿದೆ. ಭಗವಂತನಾದ ಸೂರ್ಯ ಸೃಷ್ಟಿಗೆ ಜೀವ ಕೊಡುತ್ತಾನೆ, ಆದರೆ ದೇವಿಯೇ ಅದಕ್ಕೆ ಕಾರಣಳಾದವಳು. ಅವಳ ಶಕ್ತಿಯೇ ಸೂರ್ಯನನ್ನು ಪ್ರಕಾಶಿಸಲು ಸಾಧ್ಯವಾಗುವಂತೆ ಮಾಡುತ್ತದೆ.
ಕೂಷ್ಮಾಂಡ ದೇವಿಯನ್ನು ಅರ್ಚಿಸಲು ಅತೀ ಪವಿತ್ರವಾದ ಹೂವೆಂದರೆ ಕೆಂಪು ಬಣ್ಣದ ಹೂಗಳು. ಈ ಹೂಗಳಿಂದ ದೇವಿಯನ್ನು ಅರ್ಚಿಸಿ ನಂತರ ಷೋಡಶೋಪಚಾರ ಪೂಜೆ ಮಾಡಬೇಕು.

ಜ್ಯೋತಿಷ್ಯದಲ್ಲಿ ಕೂಷ್ಮಾಂಡ ದೇವಿ:
ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕನ್ನು ನಿವಾರಿಸಬಹುದು. ಜೊತೆಗೆ ಎಲ್ಲಾ ರೀತಿಯ ಸಂಕಷ್ಟಗಳೂ ನಿವಾರಣೆಯಾಗುತ್ತದೆ.

ಆಧ್ಯಾತ್ಮಿಕದಲ್ಲಿ ಕೂಷ್ಮಾಂಡ ದೇವಿ:
ಕುಂಡಲಿನಿಯನ್ನು ಜಾಗೃತಗೊಳಿಸಲು ಬಯಸುವವರು ನವರಾತ್ರಿಯ ಮೂರನೇ ದಿನದಂದು ಅಂದರೆ ಇಂದು ತಾಯಿ ಕೂಷ್ಮಾಂಡಳನ್ನು ಪೂಜಿಸಬೇಕು, ನಂತರ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನದ ಮೂಲಕ ದೇವಿಯನ್ನು ಒಲಿಸಿಕೊಳ್ಳಬೇಕು. ಈ ರೀತಿಯಾಗಿ, ಪ್ರಯತ್ನಗಳನ್ನು ಮಾಡುವ ಸಾಧಕರಿಗೆ ಕೂಷ್ಮಾಂಡ ದೆವಿಯು ಯಶಸ್ಸನ್ನು ಕರುಣಿಸುತ್ತಾಳೆ. ಈ ಕಾರಣದಿಂದಾಗಿ ವ್ಯಕ್ತಿಯು ಎಲ್ಲಾ ರೀತಿಯ ಭಯದಿಂದ ಮುಕ್ತನಾಗುತ್ತಾನೆ ಮತ್ತು ತಾಯಿಯ ಅನುಗ್ರಹವನ್ನು ಪಡೆಯುತ್ತಾನೆ. ಆದ್ದರಿಂದ, ಈ ದಿನದಂದು ತಾಯಿಯ ಸ್ವಭಾವವನ್ನು ಶುದ್ಧ ಹೃದಯದಿಂದ ಮನಸ್ಸಿನಲ್ಲಿ ಇಟ್ಟುಕೊಂಡು ಪೂಜೆಯನ್ನು ಮಾಡಬೇಕು. ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಭಕ್ತರ ಎಲ್ಲಾ ರೋಗಗಳು ನಾಶವಾಗುತ್ತವೆ. ತಾಯಿಯ ಮೇಲಿನ ಭಕ್ತಿಯು ಉತ್ತಮ ಜೀವನ, ಕೀರ್ತಿ, ಶಕ್ತಿ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.

ಕೂಷ್ಮಾಂಡ ದೇವಿಯ ಅನುಗ್ರಹ ಪಡೆಯಲು ಮಂತ್ರ : ಓಂ ಏಂ ಹ್ರೀಂ ಕ್ಲೀಂ ಕೂಷ್ಮಾಂಡೈ ನಮಃ”

ಕಿರಣ ಜೋಶಿ
ಬೆಂಗಳೂರು

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
    February 1, 2026
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
    February 1, 2026
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
    January 30, 2026
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
    January 30, 2026
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
    January 30, 2026
ಟ್ರಾಫಿಕ್ ದಂಡ ಬಾಕಿದವರಿಗೆ ರಾಜ್ಯ ಸರ್ಕಾರದಿಂದ ಶೇಕಡಾ 50 ರಿಯಾಯಿತಿ
ಪ್ರೋಟೀನ್‌ಗಳ ಪವರ್ ಹೌಸ್ : ಮೊಳಕೆ ಕಾಳುಗಳು
ಎಷ್ಟು ಕಷ್ಟವೋ….ಹೊಂದಿಕೆಯೆಂಬುದು ನಾಲ್ಕುದಿನದ ಈ‌ ಬಾಳಿನಲಿ…..!!
ಶೀಘ್ರದಲ್ಲೇ 18,000 ಶಿಕ್ಷಕ ,ಉಪನ್ಯಾಸಕರ ನೇಮಕಾತಿ: ಮಧು ಬಂಗಾರಪ್ಪ
ಅಭಯಪ್ರದಾಯಿನಿ ಕಾಲರಾತ್ರಿ ದೇವಿ
TAGGED:Karnataka GovtKushmanda DeviNavarathriಕೂಷ್ಮಾಂಡ ದೇವಿ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

ಜೀವಕ್ಕೆ ತಂಪು ಜುಟ್ಟಿಗೆ ಭದ್ರ : ’ತಂಗಡಿ

Team Varthaman
Team Varthaman
January 3, 2026
ಬೆಂಗಳೂರು : ಆಗಸ್ಟ್ 1ರಿಂದ ಆಟೋ ದರ ಏರಿಕೆ
ಬಿಹಾರ : ನ. 6 ಮತ್ತು 11ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ
ರಾಜ್ಯದಲ್ಲಿ ಮಳೆಯ ಅರ್ಭಟ: ಕೊಡಗಿಗೆ ರೆಡ್ ಅಲರ್ಟ್, 7 ಜಿಲ್ಲೆಗಳಿಗೆ ಆರೆಂಜ್ ಎಚ್ಚರಿಕೆ
ಕೆ-ಸೆಟ್ ಪರೀಕ್ಷೆಯಲ್ಲಿ ಕೆಇಎ ಎಡವಟ್ಟು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?