ಭಾರತದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹೂಡಿಕೆದಾರರು ಮತ್ತು ಖರೀದಿದಾರರು ಗೊಂದಲಕ್ಕೀಡಾಗಿದ್ದಾರೆ. ಇತ್ತೀಚೆಗೆ ಒಂದು ದಿನದ ಇಳಿಕೆಯ ನಂತರ ತಕ್ಷಣವೇ ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದ್ದು, ಚಿನ್ನದ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ. ಶುಕ್ರವಾರದಂದು (ಅ.10) ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದ್ದರೂ, ಶನಿವಾರದಿಂದ (ಅ.12) ಮತ್ತೆ ಭಾರೀ ಏರಿಕೆ ದಾಖಲಾಗಿದೆ.
ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಇಂದು 24 ಕ್ಯಾರೆಟ್ (ಪ್ಯೂರ್ ಗೋಲ್ಡ್) ಚಿನ್ನದ ಪ್ರತಿ ಗ್ರಾಂ ಬೆಲೆ ರೂ. 12,508, ನಿನ್ನೆ ಇದ್ದಂತೆಯೇ ಯಥಾಸ್ಥಿತಿಯಲ್ಲಿದೆ. ಆದರೆ ಶುಕ್ರವಾರಕ್ಕೆ ಹೋಲಿಸಿದರೆ ರೂ. 137 ಏರಿಕೆಯಾಗಿದೆ.
- 8 ಗ್ರಾಂ: ರೂ. 1,00,064
- 10 ಗ್ರಾಂ: ರೂ. 1,25,080
- 100 ಗ್ರಾಂ: ರೂ. 12,50,800
24 ಕ್ಯಾರೆಟ್ ಚಿನ್ನವು ಶುದ್ಧ ಚಿನ್ನವಾಗಿರುವುದರಿಂದ ಹೂಡಿಕೆದಾರರು ಇದನ್ನೇ ಹೆಚ್ಚು ಆಯ್ಕೆ ಮಾಡುತ್ತಾರೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನದ ಬೆಲೆಯೂ ನಿನ್ನೆ ಇದ್ದಂತೆಯೇ ಮುಂದುವರಿದಿದೆ.
- 1 ಗ್ರಾಂ: ರೂ. 11,465
- 8 ಗ್ರಾಂ: ರೂ. 90,720
- 10 ಗ್ರಾಂ: ರೂ. 1,14,650
- 100 ಗ್ರಾಂ: ರೂ. 11,46,500
18 ಕ್ಯಾರೆಟ್ ಚಿನ್ನದ ಬೆಲೆ
18 ಕ್ಯಾರೆಟ್ ಚಿನ್ನದಲ್ಲಿ ಮಿಶ್ರಣ ಪ್ರಮಾಣ ಹೆಚ್ಚಿರುವುದರಿಂದ ಬೆಲೆ ಕಡಿಮೆ. ಹೂಡಿಕೆ ಮಾಡಲು ಬಯಸುವವರಿಗೆ ಇದು ಸೂಕ್ತ ಆಯ್ಕೆ.
- 1 ಗ್ರಾಂ: ರೂ. 9,381
- 8 ಗ್ರಾಂ: ರೂ. 75,048
- 10 ಗ್ರಾಂ: ರೂ. 93,810
- 100 ಗ್ರಾಂ: ರೂ. 9,38,100
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ
| ನಗರ | 24K ಚಿನ್ನ | 22K ಚಿನ್ನ | 18K ಚಿನ್ನ |
|---|---|---|---|
| ಚೆನ್ನೈ | ₹12,546 | ₹11,500 | ₹9,500 |
| ಮುಂಬೈ | ₹12,508 | ₹11,465 | ₹9,381 |
| ದೆಹಲಿ | ₹12,523 | ₹11,480 | ₹9,396 |
| ಕೋಲ್ಕತ್ತಾ | ₹12,508 | ₹11,465 | ₹9,381 |
| ಬೆಂಗಳೂರು | ₹12,508 | ₹11,465 | ₹9,381 |
| ಹೈದರಾಬಾದ್ | ₹12,508 | ₹11,465 | ₹9,381 |
| ಕೇರಳ | ₹12,508 | ₹11,465 | ₹9,381 |
| ಪುಣೆ | ₹12,508 | ₹11,465 | ₹9,381 |
| ವಡೋದರಾ | ₹12,513 | ₹11,470 | ₹9,386 |
| ಅಹಮದಾಬಾದ್ | ₹12,513 | ₹11,470 | ₹9,386 |
ಬೆಳ್ಳಿ ಬೆಲೆ ಸ್ಥಿರ
ಚಿನ್ನದಂತೆ ಬೆಳ್ಳಿ ದರದಲ್ಲಿಯೂ ಯಾವುದೇ ಬದಲಾವಣೆ ಆಗಿಲ್ಲ.
- 1 ಗ್ರಾಂ ಬೆಳ್ಳಿ: ₹180
- 8 ಗ್ರಾಂ: ₹1,440
- 10 ಗ್ರಾಂ: ₹1,800
- 100 ಗ್ರಾಂ: ₹18,000
- 1 ಕೆಜಿ: ₹1,80,000
ಶುಕ್ರವಾರದ ಬೆಲೆಯಷ್ಟೇ ನಿನ್ನೆ ಮತ್ತು ಇಂದೂ ಮುಂದುವರೆದಿದೆ.
ಖರೀದಿದಾರರಿಗೆ ಸಲಹೆ
ಇದನ್ನು ಓದಿ –ಏಕಕಾಲದಲ್ಲಿ ನಾಲ್ಕು ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ
ಇತ್ತೀಚಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ತೀವ್ರ ಏರಿಳಿತ ಕಂಡುಬಂದಿರುವುದರಿಂದ, ಹೂಡಿಕೆ ಮಾಡುವ ಮೊದಲು ಮಾರುಕಟ್ಟೆ ಸ್ಥಿತಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವುದು ಅತ್ಯಾವಶ್ಯಕ. ತಕ್ಷಣದ ಬೆಲೆ ಏರಿಕೆಗಿಂತ ದೀರ್ಘಾವಧಿ ಹೂಡಿಕೆ ಯೋಜನೆಗಳು ಹೆಚ್ಚು ಸುರಕ್ಷಿತ.








