ಬೆಂಗಳೂರು, ಏ.24 – ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶ್ರೀನಿವಾಸಪುರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿರುವ ಘಟನೆ ಪತ್ತೆಯಾಗಿದೆ.
ಸ್ಥಳೀಯ ತೋಟದ ಮನೆಯಲ್ಲಿ ಯುವ ವಕೀಲೆ ರಮ್ಯಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅದೇ ಮನೆಯಲ್ಲಿ ಇದ್ದ ಪುನೀತ್ ಎಂಬ ಯುವಕನ ಶವ ಕೂಡ ಪತ್ತೆಯಾಗಿದೆ.
ಈ ದಾರುಣ ಘಟನೆ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನು ಓದಿ –ಮೇ 5 ರಿಂದ CET ದಾಖಲೆ ಪರಿಶೀಲನೆ ಪ್ರಾರಂಭ: ವಿಶೇಷ ವರ್ಗದ ಅಭ್ಯರ್ಥಿಗಳಿಗೆ ಮುಂಜಾಗ್ರತಾ ಸೂಚನೆಗಳು
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಹುಡುಕಾಟ ಮುಂದುವರೆದಿದೆ.