ಬೆಂಗಳೂರು: ಸಾರ್ವಜನಿಕ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಪ್ರತಿಷ್ಠಿತ ಬಸ್ ಸೇವೆಗಳ ಪ್ರಯಾಣ ದರದಲ್ಲಿ ಭಾರೀ ರಿಯಾಯಿತಿಯನ್ನು ಘೋಷಿಸಿದೆ.
ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ, ನಿಗಮವು ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಪ್ರತಿಷ್ಠಿತ ಬಸ್‌ಗಳ ದರದಲ್ಲಿ ಶೇಕಡಾ 5 ರಿಂದ 15 ರವರೆಗೆ ರಿಯಾಯಿತಿ ನೀಡಲು ನಿರ್ಧರಿಸಿದೆ. ಈ ರಿಯಾಯಿತಿ 05.01.2026 ರಿಂದ ಜಾರಿಗೆ ಬರಲಿದೆ.
ರಿಯಾಯಿತಿ ಅನ್ವಯವಾಗುವ ಪ್ರಮುಖ ಮಾರ್ಗಗಳಲ್ಲಿ ಬೆಂಗಳೂರು–ಮಂಗಳೂರು, ಬೆಂಗಳೂರು–ಕುಂದಾಪುರ, ಬೆಂಗಳೂರು–ಉಡುಪಿ, ಬೆಂಗಳೂರು–ಧರ್ಮಸ್ಥಳ, ಬೆಂಗಳೂರು–ಕುಕ್ಕೆಸುಬ್ರಮಣ್ಯ, ಬೆಂಗಳೂರು–ಪುತ್ತೂರು, ಬೆಂಗಳೂರು–ಮಡಿಕೇರಿ/ವಿರಾಜಪೇಟೆ, ಬೆಂಗಳೂರು–ದಾವಣಗೆರೆ, ಬೆಂಗಳೂರು–ಶಿವಮೊಗ್ಗ/ಸಾಗರ, ಬೆಂಗಳೂರು–ಚೆನ್ನೈ, ಬೆಂಗಳೂರು–ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು–ತಿರುಪತಿ, ಬೆಂಗಳೂರು–ಮಂತ್ರಾಲಯ, ಬೆಂಗಳೂರು–ಪೂನಾ/ಮುಂಬೈ, ಬೆಂಗಳೂರು–ವಿಜಯವಾಡ, ಬೆಂಗಳೂರು–ಎರ್ನಾಕುಲಂ, ಬೆಂಗಳೂರು–ಮದುರೈ, ಬೆಂಗಳೂರು–ಕೋಯಿಮತ್ತೂರು ಮತ್ತು ಬೆಂಗಳೂರು–ತಿಶ್ರೂರು ಸೇರಿವೆ.
ಈ ಮಾರ್ಗಗಳಲ್ಲಿ ಸಂಚರಿಸುವ ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್ ಹಾಗೂ ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಬಸ್‌ಗಳ ಪ್ರಯಾಣ ದರದಲ್ಲಿ ರಿಯಾಯಿತಿ ಲಭ್ಯವಿರುತ್ತದೆ.ಇದನ್ನು ಓದಿ –ಗ್ಯಾರಂಟಿ ಯೋಜನೆಗಳಿದ್ದರೂ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿಲ್ಲ: ಸಿಎಂ
ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ನಿಗಮದ ಅಧಿಕೃತ ವೆಬ್‌ಸೈಟ್ ksrtc.in ಗೆ ಭೇಟಿ ನೀಡಬಹುದು. ಸಾರ್ವಜನಿಕರು ಈ ರಿಯಾಯಿತಿಯ ಸದುಪಯೋಗ ಪಡೆದುಕೊಳ್ಳುವಂತೆ ಕೆಎಸ್‌ಆರ್‌ಟಿಸಿ ಕೋರಿದೆ.








